ನಾಯಕ ಕೆಎಲ್ ರಾಹುಲ್ ಹಾಗೂ ಕ್ರಿಸ್ ಗೇಲ್ ಹೊರತು ಪಡಿಸಿದರೆ, ಇತರರಿಂದ ಉತ್ತಮ ಸಾಥ್ ಸಿಗಲ್ಲ. ಆದರೆ ಛಲ ಬಿಡದ ರಾಹುಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸ್ಪರ್ಧಾತ್ಮಕ ಮೊತ್ತ ಪೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಅಹಮ್ಮದಬಾದ್(ಏ.30): ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಬ್ಯಾಟ್ಸ್‌‌ಮನ್ ವೈಫಲ್ಯದ ನಡುವೆ ನಾಯಕ ಕೆಲ್ಎಲ್ ರಾಹುಲ್ ಹಾಗೂ ಕ್ರಿಸ್ ಗೇಲ್ ಹೋರಾಟ ಪಂಜಾಬ್ ಕಿಂಗ್ಸ್ ತಂಡಕ್ಕೆ ನೆರವಾಯಿತು. ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಪಂಜಾಬ್ 5 ವಿಕೆಟ್ ನಷ್ಟಕ್ಕೆ 179 ರನ್ ಸಿಡಿಸಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾಹುಲ್ ಹಾಗೂ ಗೇಲ್ ದಿಟ್ಟ ಪ್ರದರ್ಶನ ನೀಡಿದರು. ಇತರರು ಸಾಥ್ ನೀಡಲಿಲ್ಲ. ಕ್ರಿಸ್ ಗೇಲ್ 46ರನ್ ಸಿಡಿಸಿ ಔಟಾದರು. ಆದರೆ ರಾಹುಲ್ ಹೋರಾಟ ಮುಂದುವರಿಯಿತು. ನಿಕೋಲಸ್ ಪೂರನ್, ದೀಪಕ್ ಹೂಡ, ಶಾರುಖ್ ಖಾನ್ ಆಸರೆಯಾಗಲಿಲ್ಲ.

ಗೇಲ್ ಬಳಿಕ ಏಕಾಂಗಿ ಹೋರಾಟ ನೀಡಿದ 57 ಎಸೆತದಲ್ಲಿ ಅಜೇಯ 91 ರನ್ ಸಿಡಿಸಿದರು. ಹರ್ಪ್ರೀತ್ ಬ್ರಾರ್ ಅಜೇಯ 25 ರನ್ ಸಿಡಿಸಿದರು. ಈ ಮೂಲಕ ಪಂಜಾಬ್ ಕಿಂಗ್ಸ್ 5 ವಿಕೆಟ್ ನಷ್ಟಕ್ಕೆ 179 ರನ್ ಸಿಡಿಸಿತು .