ಕನ್ನಡಿಗ ಪ್ರಸಿದ್ ಕೃಷ್ಣ ಸೇರಿದಂತೆ ಕೋಲ್ಕತಾ ನೈಟ್ ರೈಡರ್ಸ್ ದಾಳಿಗೆ ಪಂಜಾಬ್ ಕಿಂಗ್ಸ್ ತತ್ತರಿಸಿದೆ. ಪರಿಣಾಮ ಕೆಎಲ್ ರಾಹುಲ್ ಸೈನ್ಯ 123 ರನ್‌ಗೆ ಕುಸಿದಿದೆ.
ಅಹಮ್ಮದಾಬಾದ್(ಏ.26): ಮಯಾಂಕ್ ಅಗರ್ವಾಲ್ ಹಾಗೂ ಕ್ರಿಸ್ ಜೋರ್ಡನ್ ಹೊರತು ಪಡಿಸಿದರೆ ಉಳಿದ ಬ್ಯಾಟ್ಸ್‌ಮನ್‌ಗಳಿಂದ ಯಾವ ನೆರವು ಇರಲಿಲ್ಲ. ಕೆಕೆಆರ್ ವೇಗಿ ಕನ್ನಡಿಗ ಪ್ರಸಿದ್ಧ್ ಕೃಷ್ಣ, ಪ್ಯಾಟ್ ಕಮಿನ್ಸ್, ಸುನಿಲ್ ನರೈನ್ ಸೇರಿದ ಕೆಕೆಆರ್ ಬೌಲಿಂಗ್ ಪಡೆ ಪಂಜಾಬ್ ಕಿಂಗ್ಸ್ ತಂಡವನ್ನು 123 ರನ್‌ಗಳಗೆ ಕಟ್ಟಿ ಹಾಕಿತು.
ನಾಯಕ ರಾಹುಲ್ 19 ರನ್ ಸಿಡಿಸಿ ಔಟಾದರೆ, ಮಯಾಂಕ್ ಅಗರ್ವಾಲ್ ಹೋರಾಟ ನೀಡಿದರು. ಕ್ರಿಸ್ ಗೇಲ್, ದೀಪಕ್ ಹೂಡ ಆಸರೆಯಾಗಲಿಲ್ಲ. ಹೋರಾಟ ನೀಡಿದ ಅಗರ್ವಾಲ್ 31 ರನ್ ಸಿಡಿಸಿ ಔಟಾದರು.
ಮೊಯಿಸಿಸ್ ಹೆನ್ರಿಕೆಸ್ , ಶಾರೂಖ್ ಖಾನ್ ಅಬ್ಬರಿಸಲಿಲ್ಲ. ಕ್ರಿಸ್ ಜೋರ್ಡನ್ 30 ರನ್ ಕಾಣಿಕೆ ನೀಡಿದರು. ರವಿ ಬಿಶ್ನೋಯ್ ಕೇವಲ 1ರನ್ ಸಿಡಿಸಿ ಔಟಾದರು. ಪರಿಣಾಮ ಪಂಜಾಬ್ ಕಿಂಗ್ಸ್ 9 ವಿಕೆಟ್ ನಷ್ಟಕ್ಕೆ 123 ರನ್ ಸಿಡಿಸಿತು.
ಪ್ರಸಿದ್ಧ್ ಕೃಷ್ಣ 3, ಪ್ಯಾಟ್ ಕಮಿನ್ಸ್ ಹಾಗೂ ಸುನಿಲ್ ನರೈನ್ ತಲಾ 2 ವಿಕೆಟ್ ಕಬಳಿಸಿದರು. ಶಿವಂ ಮಾವಿ ಹಾಗೂ ಚಕ್ರವರ್ತಿ ತಲಾ 1 ವಿಕೆಟ ಕಬಳಿಸಿದರು.
