ಚೆನ್ನೈ(ಏ.13): ರೋಹಿತ್ ಶರ್ಮಾ ಸಿಡಿಸಿದ 43 ರನ್ ಹಾಗೂ ಸೂರ್ಯಕುಮಾರ್ ಯಾದವ್ ಸಿಡಿಸಿದ 56 ರನ್ ಸಿಡಿಸಿ ಅಬ್ಬರಿಸಿದರು. ಆದರೆ ಇವರಿಬ್ಬರ ಹೋರಾಟ ಸಾಕಾಗಲಿಲ್ಲ. ತಂಡದಲ್ಲಿ ಒಂದು ಬದಲಾವಣೆ ಮಾಡಿದರೂ ಹೆಚ್ಚಿನ ಲಾಭಗಳಾಗಿಲ್ಲ. ಕಾರಣ ಕ್ವಿಂಟನ್ ಡಿಕಾಕ್ ಕೇವಲ 2 ರನ್ ಸಿಡಿಸಿ ಔಟಾದರು. ಮುಂಬೈ ಇಂಡಿಯನ್ಸ್ 152 ರನ್‌ಗೆ ಆಲೌಟ್ ಆಗೋ ಮೂಲಕ ನಿರಾಸೆ ಅನುಭವಿಸಿತು.

IPL 2021: ರಾಯಲ್ಸ್‌ ಯುವ ವೇಗಿ ಸಕಾರಿಯ ಕೊಂಡಾಡಿದ ವೀರೂ..!

ಇಶಾನ್ ಕಿಶನ್ 1, ಹಾರ್ಧಿಕ್ ಪಾಂಡ್ಯ 15, ಕೀರನ್ ಪೊಲಾರ್ಡ್ 5 ಹಾಗೂ ಮಾರ್ಕೋ ಜಾನ್ಸೆನ್ ಡಕೌಟ್ ಆದರು. ಈ ಮೂಲಕ ಮುಬೈ ಬೃಹತ್ ಮೊತ್ತದ ಕನಸು ನುಚ್ಚು ನೂರಾಯಿತು. ಪ್ಯಾಟ್ ಕಮಿನ್ಸ್ ಹಾಗೂ ಆ್ಯಂಡ್ರೆ ರಸೆಲ್ ಬೌಲಿಂಗ್ ದಾಳಿಗೆ ಮುಂಬೈ ರನ್‌ಗಳಿಸಲು ತಿಣುಕಾಡಿತು.

ಕ್ರುನಾಲ್ ಪಾಂಡ್ಯ ಹಾಗೂ ರಾಹುಲ್ ಚಹಾರ್ ಸ್ಲಾಗ್ ಓವರ್‌ಗಳಲ್ಲಿ ಬಿರುಸಿನ ಹೋರಾಟಕ್ಕೆ ಮುಂದಾದರು. ಕ್ರುನಾಲ್ 15 ರನ್ ಸಿಡಿಸಿ ಔಟಾದರು. ಅಂತಿಮವಾಗಿ ಮುಂಬೈ ಇಂಡಿಯನ್ಸ್  152 ರನ್‌ಗಳಿಗೆ ಆಲೌಟ್ ಆಯಿತು.  ಬಲಿಷ್ಠ ಬ್ಯಾಟಿಂಗ್ ಲೈನ್ಅಪ್ ಹೊಂದಿರುವ ಮುಂಬೈ 10 ವಿಕೆಟ್ ಕಳೆದುಕೊಂಡು ಹಿನ್ನಡೆ ಅನುಭಿಸಿತು.