KKR ಇಂದು ಪಂಜಾಬ್ ಕಿಂಗ್ಸ್ ವಿರುದ್ಧ ಸೆಣಸಲಿದ್ದು, ಸತತ 5ನೇ ಸೋಲು ತಪ್ಪಿಸಿಕೊಳ್ಳಲು ಹೋರಾಡಲಿದೆ.ಪಂಜಾಬ್, ಕಳೆದ ಪಂದ್ಯದಲ್ಲಿ ಜಯದ ಲಯ ಕಂಡುಕೊಂಡಿದ್ದು, ಅದನ್ನು ಮುಂದುವರಿಸಲು ಎದುರು ನೋಡುತ್ತಿದೆ.
ಅಹಮದಾಬಾದ್ (ಏ.26) : ಐಪಿಎಲ್ 14ನೇ ಆವೃತ್ತಿಯಲ್ಲಿ ಕೆಕೆಆರ್ ತೀರಾ ಕಳಪೆ ಪ್ರದರ್ಶನ ತೋರುತ್ತಿದ್ದು, ಸತತ 4 ಸೋಲು ಕಂಡಿದೆ. ತಂಡ ಸೋಮವಾರ ಪಂಜಾಬ್ ಕಿಂಗ್ಸ್ ವಿರುದ್ಧ ಸೆಣಸಲಿದ್ದು, ಸತತ 5ನೇ ಸೋಲು ತಪ್ಪಿಸಿಕೊಳ್ಳಲು ಹೋರಾಡಲಿದೆ. ಮತ್ತೊಂದೆಡೆ ಪಂಜಾಬ್, ಕಳೆದ ಪಂದ್ಯದಲ್ಲಿ ಜಯದ ಲಯ ಕಂಡುಕೊಂಡಿದ್ದು, ಅದನ್ನು ಮುಂದುವರಿಸಲು ಎದುರು ನೋಡುತ್ತಿದೆ. ಸೋಮವಾರದಿಂದ ಅಹಮದಾಬಾದ್ ಚರಣ ಆರಂಭಗೊಳ್ಳಲಿದೆ.
ಒಟ್ಟು ಮುಖಾಮುಖಿ: 27
ಪಂಜಾಬ್: 09
ಕೆಕೆಆರ್: 18
ಸಂಭವನೀಯ ಆಟಗಾರರ ಪಟ್ಟಿ
ಪಂಜಾಬ್: ಮಯಾಂಕ್, ರಾಹುಲ್(ನಾಯಕ), ಗೇಲ್, ಪೂರನ್, ಹೂಡಾ, ಶಾರುಖ್, ಆ್ಯಲೆನ್, ಸಕ್ಸೇನಾ, ಬಿಷ್ಣೋಯ್, ಅಶ್‌ರ್‍ದೀಪ್, ಶಮಿ.
ಜಡೇಜಾ ದಾಳಿಗೆ ತತ್ತರಿಸಿದ ಕೊಹ್ಲಿ ಸೈನ್ಯ;ಗೆಲುವಿನ ಸರದಾರ RCBಗೆ ಮೊದಲ ಸೋಲು! .
ಕೆಕೆಆರ್: ಗಿಲ್, ನಿತೀಶ್ ರಾಣಾ, ತ್ರಿಪಾಠಿ, ಮೊರ್ಗನ್(ನಾಯಕ), ಕಾರ್ತಿಕ್, ರಸೆಲ್, ನರೈನ್, ಕಮಿನ್ಸ್, ಶಿವಂ ಮಾವಿ, ಪ್ರಸಿದ್‌್ಧ, ವರುಣ್.
ಸ್ಥಳ: ಅಹಮದಾಬಾದ್, ಪಂದ್ಯ ಆರಂಭ: ಸಂಜೆ 7.30ಕ್ಕೆ, ನೇರ ಪ್ರಸಾರ: ಸ್ಟಾರ್ ಸ್ಪೋಟ್ಸ್‌ರ್
ಪಿಚ್ ರಿಪೋರ್ಟ್ : ಮೋದಿ ಕ್ರೀಡಾಂಗಣದಲ್ಲಿ ಹಲವು ಪಿಚ್‌ಗಳಿದ್ದು, ಕೆಂಪು ಮಣ್ಣಿನ ಪಿಚ್‌ಗಳು ಸ್ಪಿನ್ ಸ್ನೇಹಿಯಾಗಿದ್ದರೆ, ಕಪ್ಪು ಮಣ್ಣಿನ ಪಿಚ್‌ಗಳು ವೇಗಿಗಳಿಗೆ ನೆರವು ನೀಡಲಿದೆ. ಎಲ್ಲಾ ಪಿಚ್‌ಗಳು ಸ್ಪರ್ಧಾತ್ಮಕ ಪಿಚ್‌ಗಳಾಗಿದ್ದು, ಉತ್ತಮ ಪೈಪೋಟಿ ನಿರೀಕ್ಷಿಸಬಹುದು.
