Asianet Suvarna News Asianet Suvarna News

IPL 2021; ಈ ಸಲ ಕಪ್ ನಮ್ದಲ್ಲ, KKR ವಿರುದ್ಧ ಮುಗ್ಗರಿಸಿ ಟೂರ್ನಿಯಿಂದ ಹೊರಬಿದ್ದ RCB!

  • ಐಪಿಎಲ್ ಟೂರ್ನಿಯಿಂದ ಹೊರಬಿದ್ದ ಕೊಹ್ಲಿ ಸೈನ್ಯ
  • ಅಲ್ಪಮೊತ್ತದಲ್ಲೂ ನಡೆಯಿತು ರೋಚಕ ಹೋರಾಟ
  • ಕೆಕೆಆರ್ ತಂಡಕ್ಕೆ 4 ವಿಕೆಟ್ ಗೆಲುವು
IPL 2021  Eliminator KKR entered Qualifier 2 after beat Royal Challengers Bengaluru by 4 wicket ckm
Author
Bengaluru, First Published Oct 11, 2021, 11:08 PM IST
  • Facebook
  • Twitter
  • Whatsapp

ಶಾರ್ಜಾ(ಅ.11):  ಈ ಸಲ ಕಪ್ ನಮ್ದೆ ಅನ್ನೋ ಆರ್‌ಸಿಬಿ(RCB) ಅಭಿಮಾನಿಗಳ ಕೂಗು ಮತ್ತೆ ನುಚ್ಚು ನೂರಾಗಿದೆ. ಈ ಹಿಂದಿನ ಆವೃತ್ತಿಗಳಲ್ಲಿ ಅನುಭವಿಸಿದ ನೋವಿಗೆ ಪ್ರತಿಯಾಗಿ ಆರ್‌ಸಿಬಿ(Royal Challengers Bengaluru) ಟ್ರೋಫಿ ಗೆಲ್ಲಲಿದೆ ಅನ್ನೋದು ಆರ್‌ಸಿಬಿ ಹಾಗೂ ಅಭಿಮಾನಿಗಳ ವಿಶ್ವಾಸವಾಗಿತ್ತು. ಆದರೆ ಈ ಆವೃತ್ತಿಯಲ್ಲೂ ಆರ್‌ಸಿಬಿ ಹಳೇ ಚಾಳಿ ಮುಂದುವರಿದಿದೆ. ಎಲಿಮಿನೇಟರ್ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಆರ್‌ಸಿಬಿ ಮುಗ್ಗರಿಸಿದೆ. ಪರಿಣಾಮ ಐಪಿಎಲ್ 2021(IPL 2021) ಟೂರ್ನಿಯಿಂದ ಕೊಹ್ಲಿ ಸೈನ್ಯ ಹೊರಬಿದ್ದಿದೆ.

IPL 2021: ಡೆಲ್ಲಿ ವಿರುದ್ಧ ಧೋನಿ ಸ್ಫೋಟ ಕಂಡ ಕೊಹ್ಲಿ ಹೇಳಿದ್ದು ಒಂದೇ ಮಾತು!

ನಾಯಕ ವಿರಾಟ್ ಕೊಹ್ಲಿ ಐಪಿಎಲ್ ನಾಯಕತ್ವ ಸೋಲಿನೊಂದಿಗೆ ಅಂತ್ಯವಾಗಿದೆ. ಮುಂದಿನ ಐಪಿಎಲ್ ಟೂರ್ನಿಗಳಲ್ಲಿ ನಾಯಕನಾಗಿ ಮುಂದುವರಿಯುವುದಿಲ್ಲ ಎಂದು ಘೋಷಿಸಿರುವ ವಿರಾಟ್ ಕೊಹ್ಲಿ, ಈ ಬಾರಿ ಟ್ರೋಫಿಯೊಂದಿಗೆ ಐಪಿಎಲ್ ನಾಯಕತ್ವಕ್ಕೆ ವಿದಾಯ ಹೇಳುಲು ಇಚ್ಚಿಸಿದ್ದರು. ಆದರೆ ಎಲಿಮಿನೇಟರ್ ಪಂದ್ಯದಲ್ಲಿ ಮುಗ್ಗರಿಸುವ ಮೂಲಕ ಕೊಹ್ಲಿ ಸೋಲಿನೊಂದಿಗೆ ಐಪಿಎಲ್ ನಾಯಕತ್ವಕ್ಕೆ ಗುಡ್‌ಬೈ ಹೇಳಿದ್ದಾರೆ.

ಕೆಕೆಆರ್(Kolkata Knight Riders) ವಿರುದ್ದ ಸೋತ ಆರ್‌ಸಿಬಿ ತೀವ್ರ ನಿರಾಸೆ ಅನುಭವಿಸಿದೆ. ಕಾರಣ ಹಿಂದಿನ ಆವೃತ್ತಿಗಳಿಗಿಂತ ಹೆಚ್ಚು ಆತ್ಮವಿಶ್ವಾಸ ಹಾಗೂ ಉತ್ತಮ ಪ್ರದರ್ಶನ ನೀಡುತ್ತಿದ್ದ ಬೆಂಗಳೂರು ತಂಡ, ಇದೀಗ ದಿಢೀರ್ ಟೂರ್ನಿಯಿಂದ ಹೊರಬಿದ್ದಿದೆ. 4 ವಿಕೆಟ್ ಗೆಲುವು ಸಾಧಿಸಿದ ಕೋಲ್ಕತಾ ನೈಟ್ ರೈಡರ್ಸ್(KKR) 2ನೇ ಕ್ವಾಲಿಫೈಯರ್‌ಗೆ ಅರ್ಹತೆ ಪಡೆದುಕೊಂಡಿದೆ. ಈ ಪಂದ್ಯದಲ್ಲಿ ಕೋಲ್ಕತಾ, ಡೆಲ್ಲಿ ಕ್ಯಾಪಿಟಲ್ಸ್(Delhi Capitals) ವಿರುದ್ಧ ಫೈನಲ್ ಪ್ರವೇಶಕ್ಕಾಗಿ ಹೋರಾಟ ನಡೆಸಲಿದೆ. 

IPL 2021: ಡೆಲ್ಲಿ ಮಣಿಸಿ 9ನೇ ಬಾರಿ ಫೈನಲ್ ತಲುಪಿದ ಚೆನ್ನೈ ಸೂಪರ್ ಕಿಂಗ್ಸ್!

ಮಹತ್ವದ ಪಂದ್ಯದಲ್ಲಿ ಆರ್‌ಸಿಬಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ನಾಯಕ ವಿರಾಟ್ ಕೊಹ್ಲಿ(Virat Kohli) ಹೊರತು ಪಡಿಸಿದರೆ ಉಳಿದವರಿಂದ ನಿರೀಕ್ಷಿತ ಹೋರಾಟ ಬರಲಿಲ್ಲ. ಹೀಗಾಗಿ ಆರ್‌ಸಿಬಿ 7 ವಿಕೆಟ್ ನಷ್ಟಕ್ಕೆ 138 ರನ್ ಸಿಡಿಸಿತು. ಈ ಸುಲಭ ಗುರಿ ಕೆಕೆಆರ್ ತಂಡಕ್ಕೆ ಅಂತಿಮ ಹಂತದಲ್ಲಿ ಎವರೆಸ್ಟ್‌ಗಿಂತ ದೊಡ್ಡದಾಗಿ ಕಂಡಿತು. 

ಅಲ್ಪಮೊತ್ತದಲ್ಲಿ ಕೆಕೆಆರ್ ತಂಡವನ್ನು ಕಟ್ಟಿಹಾಕುವ ವಿಶ್ವಾಸ ಕೊಹ್ಲಿ ಸೈನ್ಯಕ್ಕಿತ್ತು. ಆದರೆ ನಿರೀಕ್ಷೆ ತಕ್ಕಂತೆ ವಿಕೆಟ್ ಉರುಳಲಿಲ್ಲ. ಶುಭಮನ್ ಗಿಲ್ ಹಾಗೂ ವೆಂಕಟೇಶ್ ಅಯ್ಯರ್ ಆರಂಭ ಕೆಕೆಆರ್ ತಂಡಕ್ಕೆ ನೆರವಾಯಿತು ಮೊದಲ ವಿಕೆಟ್‌ಗೆ ಈ ಜೋಡಿ 41 ರನ್ ಜೊತೆಯಾಟ ನೀಡಿತು. ಗಿಲ್ 18 ಎಸೆತದಲ್ಲಿ 29 ರನ್ ಸಿಡಿಸಿ ಔಟಾದರು. 

T20 World Cup: ವೇಗಿ ಉಮ್ರಾನ್‌ ಮಲಿಕ್ ಟೀಂ ಇಂಡಿಯಾ ನೆಟ್ ಬೌಲರ್‌

ರಾಹುಲ್ ತ್ರಿಪಾಠಿ ಅಬ್ಬರಿಸಲಿಲ್ಲ. ಯಜುವೇಂದ್ರ ಚಹಾಲ್ ಮೋಡಿಗೆ ತ್ರಿಪಾಠಿ ವಿಕೆಟ್ ಒಪ್ಪಿಸಿದರು. ತ್ರಿಪಾಠಿ 6 ರನ್ ಸಿಡಿಸಿ ನಿರ್ಗಮಿಸಿದರು. ದಿಟ್ಟ ಹೋರಾಟ ನೀಡಿದ ವೆಂಕಟೇಶ್ ಅಯ್ಯರ್ 26 ರನ್ ಸಿಡಿಸಿ ನಿರ್ಗಮಿಸಿದರು. ಕೆಕೆಆರ್ 3 ವಿಕೆಟ್ ಕಳೆದುಕೂಂಡರೂ ಯಾವುದೇ ಆತಂಕ ಎದುರಾಗಲಿಲ್ಲ.

ನಿತೀಶ್ ರಾಣಾ ಹಾಗೂ ಸುನಿಲ್ ನರೈನ್ ಜೊತೆಯಾಟ ಕೆಕೆಆರ್ ತಂಡವನ್ನು ಗೆಲುವಿನ ಹಾದಿಯಲ್ಲಿ ಮುನ್ನಡೆಸಿತು. ರಾಣಾ 23 ರನ್ ಸಿಡಿಸಿ ನಿರ್ಗಮಿಸಿದರು. ನರೈನ್ ಹಾಗೂ ದಿನೇಶ್ ಕಾರ್ತಿಕ್ ಜೊತೆಯಾಟ ಕೆಕೆಆರ್ ತಂಡಕ್ಕೆ ನೆರವಾಯಿತು. ಕೆಕೆಆರ್ ಗೆಲುವಿಗೆ ಅಂತಿಮ 30 ಎಸೆತದಲ್ಲಿ 27 ರನ್ ಅವಶ್ಯಕತೆ ಇತ್ತು.

ಸುಲಭ ಗೆಲುವು ನಿರೀಕ್ಷಿಸಿದ್ದ ಕೆಕೆಆರ್ ತಂಡಕ್ಕೆ ಶಾಕ್ ಕಾದಿತ್ತು. ನರೈನ್ 26 ರನ್ ಸಿಡಿಸಿ ಔಟಾದರು. ಕಾರ್ತಿಕ್ ಹಾಗೂ ನಾಯಕ ಇಯಾನ್ ಮಾರ್ಗನ್ ಮೇಲೆ ಒತ್ತಡ ಆರಂಭಗೊಂಡಿತು. 10 ರನ್ ಸಿಡಿಸಿದ ಕಾರ್ತಿಕ್ ಪೆವಿಲಿಯನ್ ಸೇರಿಕೊಂಡರು.  ಅಂತಿಮ 12 ಎಸೆತದಲ್ಲಿ KKR ಗೆಲುವಿಗೆ 12 ರನ್ ಬೇಕಿತ್ತು. 

ಇಯಾನ್ ಮಾರ್ಗನ್ ಹಾಗೂ ಶಕೀಬ್ ಅಲ್ ಹಸನ್ ರನ್ ಗಳಿಸಲು ಪರದಾಡಿದರು. ಕೆಕೆರ್ ಗೆಲುವಿಗೆ ಅಂತಿಮ 6 ಎಸೆತದಲ್ಲಿ 7 ರನ್, ಇತ್ತ ಆರ್‌ಸಿಬಿ ಗೆಲುವಿಗೆ 4 ವಿಕೆಟ್ ಬೇಕಿತ್ತು. ಆದರೆ ಕ್ರಿಶ್ಟಿಯನ್ ಎಸೆದ ಮೊದಲ ಎಸೆತ ಬೌಂಡರಿ ಗೆರೆ ದಾಟಿತು. ಕೊನೆಯ ಹಂತದಲ್ಲಿ ಕೂತಲ್ಲಿಂದ ಎದ್ದು ನಿಂತಿದ್ದ ಆರ್‌ಸಿಬಿ ಅಭಿಮಾನಿಗಳ ಮುಖದಲ್ಲಿ ನಿರಾಸೆ ಮೂಡತೊಡಗಿತು. ಇನ್ನು ಎರಡು ಎಸೆತ ಬಾಕಿ ಇರುವಾಗ ಕೆಕೆಆರ್ 4 ವಿಕೆಟ್ ಗೆಲುವು ಕಂಡಿತು. 

ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗೆಲುವು ಸಾಧಿಸಿದ ಚೆನ್ನೈ ಸೂಪರ್ ಕಿಂಗ್ಸ್(Chennai super Kings) ಮೊದಲ ತಂಡವಾಗಿ ಫೈನಲ್ ಪ್ರವೇಶಿಸಿದೆ. 9ನೇ ಬಾರಿ ಚೆನ್ನೈ ಐಪಿಎಲ್ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದೆ. ಇದೀಗ ಚೆನ್ನೈ ಎದುರಾಳಿ ಯಾರು ಈ ಕುತೂಹಲಕ್ಕೆ 2ನೇ ಕ್ವಾಲಿಪೈಯರ್ ಪಂದ್ಯ ಉತ್ತರ ನೀಡಲಿದೆ. ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕೆಕೆಆರ್ ನಡುವಿನ ಈ ಹೋರಾಟದಲ್ಲಿ ಗೆದ್ದ ತಂಡ ಫೈನಲ್ ಪ್ರವೇಶಿಸಲಿದೆ. ಅಕ್ಟೋಬರ್ 13 ರಂದು 2ನೇ ಕ್ವಾಲಿಫೈಯರ್ ಪಂದ್ಯ ಶಾರ್ಜಾ ಮೈದಾನದಲ್ಲಿ ನಡೆಯಲಿದೆ. ಇನ್ನು ಫೈನಲ್ ಪಂದ್ಯ ಅಕ್ಟೋಬರ್ 15 ರಂದು ದುಬೈ ಕ್ರೀಡಾಂಗಣದಲ್ಲಿ ನಡೆಯಲಿದೆ. 

Follow Us:
Download App:
  • android
  • ios