ಚೆನ್ನೈ(ಏ.10): ಐಪಿಎಲ್ 2021 ಟೂರ್ನಿ ಮೊದಲ ದಿನವೇ ರೋಚಕ ಪಂದ್ಯಕ್ಕೆ ಸಾಕ್ಷಿಯಾಗಿತ್ತು. ಇದೀಗ ಮತ್ತೊಂದು ಕುತೂಹಕಲ ಹೋರಾಟಕ್ಕೆ 2ನೇ ಪಂದ್ಯವೂ ಸಾಕ್ಷಿಯಾಗಲಿದೆ. ಕಾರಣ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಹೋರಾಟ. ಈ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.

 

ಡೆಲ್ಲಿ ಪರ ಟಾಮ್ ಕುರನ್ ಪದಾರ್ಪಣೆ ಮಾಡಿದ್ದಾರೆ. ಇನ್ನು ಚೆನ್ನೈ ತಂಡದಲ್ಲಿ ಫಾಫ್ ಡುಪ್ಲೆಸಿಸ್, ಮೊಯಿನ್ ಆಲಿ, ಸ್ಯಾಮ್ ಕುರನ್, ಡ್ವೇನ್ ಬ್ರಾವೋ ನಾಲ್ವರು ವಿದೇಶಿ ಆಟಗಾರರಾಗಿ ಕಣಕ್ಕಿಳಿಯುತ್ತಿದ್ದಾರೆ.

 

ಕಳೆದ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ಶ್ರೇಯಸ್ ಅಯ್ಯರ್ ನಾಯತ್ವದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅದ್ಭುತ  ಪ್ರದರ್ಶನ ನೀಡಿತ್ತು. ಆದರೆ ಈ ಬಾರಿ ಶ್ರೇಯಸ್ ಅಯ್ಯರ್ ಇಂಜುರಿಯಾಗಿರುವ ಕಾರಣ, ರಿಷಬ್ ಪಂತ್‌ಗೆ ನಾಯಕತ್ವ ನೀಡಲಾಗಿದೆ. ಇತ್ತ ಕಳೆದ ಆವೃತ್ತಿಯಲ್ಲಿ ಲೀಗ್ ಹಂತದಿಂದ ನಿರ್ಗಮಿಸಿದ ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿ ಮತ್ತೆ ಚಾಂಪಿಯನ್ ಕಿರೀಟ ಮುಡಿಗೇರಿಸಲು ಹೋರಾಟ ನಡೆಸಲಿದೆ.