ಕಳೆದೆರಡು ಆವೃತ್ತಿಗಳಲ್ಲಿ ಪ್ಲೇ ಆಫ್‌ ಪ್ರವೇಶಿಸಿ ಕೊನೆಯ ಕ್ಷಣದಲ್ಲಿ ಮುಗ್ಗರಿಸಿರುವ ಡೆಲ್ಲಿ ಕ್ಯಾಪಿಟಲ್ಸ್‌ ಮೂರನೇ ಬಾರಿಗೆ ಕಪ್ ಎತ್ತಿ ಹಿಡಿಯುತ್ತಾ ಎನ್ನುವ ಕುತೂಹಲ ಜೋರಾಗಿದೆ. ಡೆಲ್ಲಿ ತಂಡದ ಬಲಾ ಹಾಗೂ ದೌರ್ಬಲ್ಯದ ವಿಶ್ಲೇಷಣೆ ಇಲ್ಲಿದೆ ನೋಡಿ. 

ನವದೆಹಲಿ(ಏ.05) 14ನೇ ಆವತ್ತಿಯ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ಗೆ 3ನೇ ಬಾರಿಗೆ ಅದೃಷ್ಟ ಒಲಿಯಬಹುದೇ ಎಂದು ನಿರೀಕ್ಷಿಸುತ್ತಿದೆ. 2019ರಲ್ಲಿ 3ನೇ ಸ್ಥಾನ ಪಡೆದಿದ್ದ ಡೆಲ್ಲಿ, 2020ರಲ್ಲಿ 2ನೇ ಸ್ಥಾನ ಪಡೆದಿತ್ತು. ಈ ವರ್ಷ ಟ್ರೋಫಿ ಜಯಿಸಬಹುದಾದ ನೆಚ್ಚಿನ ತಂಡಗಳಲ್ಲಿ ಒಂದೆನಿಸಿದೆ. 

ಕಳೆದ 2 ಆವೃತ್ತಿಗಳಲ್ಲಿ ಶ್ರೇಯಸ್‌ ಅಯ್ಯರ್‌ ನಾಯಕತ್ವದಲ್ಲಿ ಪ್ಲೇ-ಆಫ್ಸ್‌ಗೇರಿದ್ದ ಡೆಲ್ಲಿ ಕ್ಯಾಪಿಟಲ್ಸ್‌ಗೆ ಈ ಬಾರಿ ಅವರ ಸೇವೆ ಲಭ್ಯವಾಗುವುದಿಲ್ಲ. ಆಕ್ರಮಣಕಾರಿ ಸ್ವಭಾವದ ರಿಷಭ್‌ ಪಂತ್‌ ಈ ಬಾರಿ ತಂಡ ಮುನ್ನಡೆಸಲಿದ್ದು, ತಂಡದ ಆಟದ ಶೈಲಿಯಲ್ಲೂ ಮತ್ತಷ್ಟು ಆಕ್ರಮಣಕಾರಿ ನಡೆಗಳನ್ನು ಕಾಣಬಹುದು. ಕಳೆದೆರೆಡು ಬಾರಿ ಪ್ರಶಸ್ತಿ ಹತ್ತಿರಕ್ಕೆ ಹೋಗಿ ಬರಿಗೈಯಲ್ಲಿ ವಾಪಸಾಗಿದ್ದ ಡೆಲ್ಲಿಗೆ ಈ ಬಾರಿಗೆ ಚಾಂಪಿಯನ್‌ ಆಗಲು ಕಠಿಣ ತಯಾರಿ ನಡೆಸಿದೆ.

IPL 2021: ಕಿಂಗ್‌ ಆಗುತ್ತಾ ಪಂಜಾಬ್‌..?

ಪ್ರಾಬಲ್ಯ

ಡೆಲ್ಲಿ ತಂಡದಲ್ಲಿ ಬಲಿಷ್ಠ ಭಾರತೀಯ ಆಟಗಾರರಿದ್ದಾರೆ. ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ವಿಭಾಗದಲ್ಲಿ ಸಮತೋಲನ ಹೊಂದಿದೆ. ಆಕ್ರಮಣಕಾರಿ ಶೈಲಿ ಹಾಗೂ ಸಮಯಪ್ರಜ್ಞೆ ಹೊಂದಿರುವ ತಂಡ ಡೆಲ್ಲಿ. ಧವನ್‌, ಪೃಥ್ವಿ, ಪಂತ್‌, ಸ್ಮಿತ್‌, ಸ್ಟೋಯ್ನಿಸ್‌, ರಹಾನೆ, ಹೆಟ್ಮೇಯರ್‌, ಅಶ್ವಿನ್‌, ಬಿಲ್ಲಿಂಗ್ಸ್‌, ರಬಾಡ, ನೋಕಿಯ ಹೀಗೆ ಬಲಿಷ್ಠ ಆಟಗಾರರನ್ನು ತಂಡ ಹೊಂದಿದೆ.

ದೌರ್ಬಲ್ಯ

ತಂಡಕ್ಕೆ ಶ್ರೇಯಸ್‌ ಅಯ್ಯರ್‌ ಅನುಪಸ್ಥಿತಿ ಕಾಡಲಿದೆ. ಮಧ್ಯಮ ಕ್ರಮಾಂಕದಲ್ಲಿ ಅನುಭವಿ ಆಟಗಾರನ ಕೊರತೆ ಎದುರಾಗಲಿದೆ. ಜೊತೆಗೆ ವಿದೇಶಿ ಆಟಗಾರರ ಆಯ್ಕೆಯಲ್ಲಿ ಗೊಂದಲ ಎದುರಾಗಲಿದೆ. ಸ್ಮಿತ್‌, ಸ್ಟೋಯ್ನಿಸ್‌, ಬಿಲ್ಲಿಂಗ್ಸ್‌, ರಬಾಡ, ನೋಕಿಯ, ವೋಕ್ಸ್‌, ಹೆಟ್ಮೇಯರ್‌, ಟಾಮ್‌ ಕರ್ರನ್‌ ಹೀಗೆ ಹಲವು ಆಟಗಾರರ ಕೇವಲ 4 ಸ್ಥಾನಗಳಿಗೆ ಪೈಪೋಟಿ ನಡೆಸಲಿದ್ದಾರೆ.

ಬಲಿಷ್ಠ ಪ್ಲೇಯಿಂಗ್‌ ಇಲೆವೆನ್‌

ಧವನ್‌, ಪೃಥ್ವಿ, ಸ್ಮಿತ್‌, ರಹಾನೆ, ಪಂತ್‌, ಸ್ಟೋಯ್ನಿಸ್‌, ಅಕ್ಷರ್‌/ಮಿಶ್ರಾ, ಅಶ್ವಿನ್‌, ರಬಾಡ, ನೋಕಿಯ, ಇಶಾಂತ್‌.