ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಬೃಹತ್ ಗುರಿ ನೀಡುವ ವಿಶ್ವಾಸದಲ್ಲಿದ್ದ ಕೋಲ್ಕತಾ ನೈಟ್ ರೈಡರ್ಸ್ ತಂಡ ಅಬ್ಬರಿಸಲು ಸಾಧ್ಯವಾಗಿಲ್ಲ. ಆದರೆ ಸ್ಪರ್ಧಾತ್ಮಕ ಗುರಿ ನೀಡುವಲ್ಲಿ ಯಶಸ್ವಿಯಾಗಿದೆ. ಕೆಕೆಆರ್ ಬ್ಯಾಟಿಂಗ್ ಹೈಲೈಟ್ಸ್ ಇಲ್ಲಿದೆ. 

ಅಹಮ್ಮದಾಬಾದ್(ಏ.29): ಶುಭ್‌ಮನ್ ಗಿಲ್ ಹೋರಾಟ, ರಸೆಲ್ ಸ್ಫೋಟಕ ಬ್ಯಾಟಿಂಗ್‌ನಿಂದ ಕೋಲ್ಕತಾ ನೈಟ್ ರೈಡರ್ಸ್ 6 ವಿಕೆಟ್ ನಷ್ಟಕ್ಕೆ 154 ರನ್ ಸಿಡಿಸಿತು. ಈ ಮೂಲಕ ಇದೀಗ ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿಗೆ 155 ರನ್ ಚೇಸ್ ಮಾಡಲು ಸಜ್ಜಾಗಿದೆ.

Add Asianetnews Kannada as a Preferred SourcegooglePreferred

ಟಾಸ್ ಸೋತು ಬ್ಯಾಟಿಂಗ್ ಇಳಿದ ಕೆಕೆಆರ್ ತಂಡ ಆರಂಭದಲ್ಲೇ ನಿತೀಶ್ ರಾಣಾ ವಿಕೆಟ್ ಕಳೆದುಕೊಂಡಿತು. ರಾಣಾ 15 ರನ್ ಸಿಡಿಸಿ ಔಟಾದರು. ಶುಭ್‌ಮನ್ ಗಿಲ್ ಹೋರಾಟ ಮುಂದುವರಿಸಿದರು. ಆದರೆ ಇತರರಿಂದ ಉತ್ತಮ ಸಾಥ್ ಸಿಗಲಿಲ್ಲ. 

ರಾಹುಲ್ ತ್ರಿಪಾಠಿ 19 ರನ್ ಸಿಡಿಸಿ ಔಟಾದರು. ನಾಯಕ ಇಯಾನ್ ಮಾರ್ಗನ್ ಡಕೌಟ್ ಆದರು. ಸುನಿಲ್ ನರೈನ್ ಕೂಡ ಶೂನ್ಯ ಸುತ್ತಿದರು. ಇತ್ತ ಗಿಲ್ 43 ರನ್ ಸಿಡಿಸಿ ಔಟಾದರು.

ಆ್ಯಂಡ್ರೆ ರಸೆಲ್ ಹಾಗೂ ದಿನೇಶ್ ಕಾರ್ತಿಕ್ ಅಂತಿಮ ಹಂತದಲ್ಲಿ ನಡೆಸಿದರು. ಕಾರ್ತಿಕ್ 14 ರನ್ ಸಿಡಿಸಿ ಔಟಾದರು. ಇತ್ತ ರಸೆಲ್ 27 ಎಸೆತದಲ್ಲಿ 47 ರನ್ ಸಿಡಿಸಿದರು. ಪ್ಯಾಟ್ ಕಮಿನ್ಸ್ ಅಜೇಯ 11 ರನ್ ಸಿಡಿಸಿದರು. ಈ ಮೂಲಕ 6 ವಿಕೆಟ್ ನಷ್ಟಕ್ಕೆ 154 ರನ್ ಸಿಡಿಸಿತು