14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಪಾಲ್ಗೊಳ್ಳಲು ದಕ್ಷಿಣ ಆಫ್ರಿಕಾ ಆಟಗಾರರಿಗೆ ಆಫ್ರಿಕಾ ಕ್ರಿಕೆಟ್‌ ಮಂಡಳಿ ಅನುಮತಿ ನೀಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಕೇಪ್‌ಟೌನ್(ಮಾ.28)‌: ಐಪಿಎಲ್‌ನಲ್ಲಿ ಆಡುವ ಸಲುವಾಗಿ ಪಾಕಿಸ್ತಾನ ವಿರುದ್ಧ ಸರಣಿಯಿಂದ ಅರ್ಧಕ್ಕೆ ನಿರ್ಗಮಿಸಲು ತನ್ನ ಆಟಗಾರರಿಗೆ ಕ್ರಿಕೆಟ್‌ ದಕ್ಷಿಣ ಆಫ್ರಿಕಾ ಅನುಮತಿ ನೀಡಿದೆ. 

ಏಪ್ರಿಲ್ 2ರಿಂದ 16ರ ತನಕ ಪಾಕಿಸ್ತಾನ ತಂಡ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದ್ದು, ಈ ವೇಳೆ ಹರಿಣಗಳ ವಿರುದ್ದ ಪಾಕ್ 3 ಪಂದ್ಯಗಳ ಏಕದಿನ ಸರಣಿ ಹಾಗೂ 4 ಪಂದ್ಯಗಳ ಟಿ20 ಸರಣಿಯನ್ನಾಡಲಿದೆ. ಏಪ್ರಿಲ್ 4ರಂದು ನಡೆಯಲಿರುವ 2ನೇ ಏಕದಿನ ಪಂದ್ಯದ ಬಳಿಕ ದಕ್ಷಿಣ ಆಫ್ರಿಕಾದ ಪ್ರಮುಖ ಆಟಗಾರರು ಐಪಿಎಲ್‌ನಲ್ಲಿ ಆಡಲು ಭಾರತಕ್ಕೆ ಆಗಮಿಸಲಿದ್ದಾರೆ. 

ಐಪಿಎಲ್‌ನಲ್ಲಿ ಆಡಲಿರುವ 10 ಆಫ್ರಿಕಾ ಆಟಗಾರರ ಪೈಕಿ ಐವರು ಪಾಕ್‌ ವಿರುದ್ಧದ ಸರಣಿಗೆ ಆಯ್ಕೆಗೊಂಡಿದ್ದಾರೆ. ತಾರಾ ಆಟಗಾರರದ ಕಗಿಸೋ ರಬಾಡ, ಕ್ವಿಂಟನ್‌ ಡಿಕಾಕ್‌, ಡೇವಿಡ್‌ ಮಿಲ್ಲರ್‌, ಲುಂಗಿ ಎನ್‌ಗಿಡಿ, ಅನ್ರಿಕ್‌ ನೋಕಿಯೇ ಐಪಿಎಲ್‌ನ ಕೆಲ ಪಂದ್ಯಗಳನ್ನು ತಪ್ಪಿಸಿಕೊಳ್ಳಲಿದ್ದಾರೆ. ಏ.9ರಿಂದ ಐಪಿಎಲ್‌ ಆರಂಭಗೊಳ್ಳಲಿದೆ.

IPL 2021: ನೂತನ ಜರ್ಸಿ ಬಿಡುಗಡೆ ಮಾಡಿದ ಮುಂಬೈ ಇಂಡಿಯನ್ಸ್‌

ಐಪಿಎಲ್‌ನಲ್ಲಿ ಪಾಲ್ಗೊಳ್ಳಲಿರುವ ಪ್ರಮುಖ ಆಟಗಾರರೆಂದರೆ ಕಗಿಸೋ ರಬಾಡ, ಅನ್ರಿಚ್‌ ನೋಕಿಯೇ(DC), ಕ್ವಿಂಟನ್ ಡಿ ಕಾಕ್‌, ಮಾರ್ಕೊ ಜಾನ್ಸನ್‌(MI), ಫಾಫ್ ಡುಪ್ಲೆಸಿಸ್, ಇಮ್ರಾನ್ ತಾಹಿರ್, ಲುಂಗಿ ಎಂಗಿಡಿ(CSK),ಕ್ರಿಸ್ ಮೋರಿಸ್‌, ಡೇವಿಡ್‌ ಮಿಲ್ಲರ್(RR), ಎಬಿ ಡಿವಿಲಿಯರ್ಸ್(RCB).