Asianet Suvarna News Asianet Suvarna News

IPL 2020: ತಯಾರಿ ಆರಂಭಿಸಿದ ಡೆಲ್ಲಿ ಕ್ಯಾಪಿಟಲ್ಸ್‌ಗೆ ಆಘಾತ!

ಐಪಿಎಲ್ ಟೂರ್ನಿ ಆರಂಭಕ್ಕೆ ಇನ್ನೂ ಎರಡೂವರೆ ತಿಂಗಳು ಬಾಕಿ ಇದೆ. ಫ್ರಾಂಚೈಸಿಗಳು ಈಗಲೇ ತಯಾರಿ ಆರಂಭಿಸಿದೆ. ತರಬೇತಿ ಕ್ಯಾಂಪ್ ಆರಂಭಗೊಂಡಿದೆ. ಇದರ ನಡುವೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆಘಾತ ಎದುರಾಗಿದೆ. ಇದು ನಾಯಕ ಶ್ರೇಯಸ್ ಅಯ್ಯರ್ ಚಿಂತೆಗೆ  ಕಾರಣವಾಗಿದೆ.
 

IPL 2020 Shikhar Dhawan miss opening ipl matches due to injury
Author
Bengaluru, First Published Jan 22, 2020, 11:52 AM IST
  • Facebook
  • Twitter
  • Whatsapp

ನವದೆಹಲಿ(ಜ.22): ದ್ವಿಪಕ್ಷೀಯ ಸರಣಿ ಜೊತೆಗೆ ಬಿಸಿಸಿಐ ಐಪಿಎಲ್ ಟೂರ್ನಿಗೂ ತಯಾರಿ ನಡೆಸುತ್ತಿದೆ. ಇತ್ತ ಫ್ರಾಂಚೈಸಿಗಳು ಕೂಡ ಟೀಂ ಕಾಂಬಿನೇಷನ್, ಬ್ಯಾಕ್ ಅಪ್ ಪ್ಲೇಯರ್ ಸೇರಿದಂತೆ ಹಲವು ತಯಾರಿ ನಡೆಸುತ್ತಿದೆ. ತಂಡಕ್ಕೆ ಆಯ್ಕೆಯಾಗಿರುವ ಯುವ ಆಟಗಾರರ ತರಬೇತಿ ಕ್ಯಾಂಪ್ ಆರಂಭಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆರಂಭಿಕ ಶಿಖರ್ ಧವನ್ ಇಂಜುರಿ ವರದಿ ಶಾಕ್ ನೀಡಿದೆ.

ಇದನ್ನೂ ಓದಿ: ನ್ಯೂಜಿಲೆಂಡ್ ಸರಣಿಗೂ ಮುನ್ನ ಟೀಂ ಇಂಡಿಯಾಗೆ ಅತಿದೊಡ್ಡ ಆಘಾತ..!.

ಆಸ್ಟ್ರೇಲಿಯಾ ವಿರುದ್ದದ ಏಕದಿನ ಸರಣಿಯಲ್ಲಿ ಭುಜದ ನೋವಿಗೆ ತುತ್ತಾದ ಶಿಖರ್ ಧವನ್, ಇದೀಗ ನ್ಯೂಜಿಲೆಂಡ್ ಸರಣಿಯಿಂದ ಹೊರಬಿದ್ದಿದ್ದಾರೆ. ಇಷ್ಟೇ ಅಲ್ಲ, ಧವನ್ ಚೇತರಿಕೆಗೆ ಕನಿಷ್ಠ 10 ವಾರಗಳ ವಿಶ್ರಾಂತಿ ಅಗತ್ಯವಿದೆ ಎಂದು ವೈದ್ಯರು ಸೂಚಿಸಿದ್ದಾರೆ. ಹೀಗಾಗಿ ಧವನ್ 2020ರ ಐಪಿಎಲ್ ಟೂರ್ನಿಯ ಆರಂಭಿಕ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ.

ಇದನ್ನೂ ಓದಿ: ನ್ಯೂಜಿಲೆಂಡ್ ಏಕದಿನ ಸರಣಿಗೆ ಭಾರತ ತಂಡ ಪ್ರಕಟ, ಎಂಎಸ್ ಧೋನಿ ಇದ್ದಾರಾ?

ಎಪ್ರಿಲ್ ಅಂತ್ಯದಲ್ಲಿ ಧವನ್ ಗಾಯದಿಂದ ಗುಣಮುಖರಾಗಲಿದ್ದಾರೆ. ಇನ್ನು ಐಪಿಎಲ್ ಟೂರ್ನಿ ಎಪ್ರಿಲ್ 1ರಿಂದ ಆರಂಭವಾಗುವ ಸಾಧ್ಯತೆ ಇದೆ. ಹೀಗಾಗಿ ಧವನ್ ನ್ಯೂಜಿಲೆಂಡ್ ಸರಣಿಯಿಂದ ಮಾತ್ರವಲ್ಲ, ಸೌತ್ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದಲೂ ಹೊರಗುಳಿಯಲಿದ್ದಾರೆ. 
 

Follow Us:
Download App:
  • android
  • ios