14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮತ್ತೆ 8 ತಂಡಗಳೇ ಕಣಕ್ಕಿಳಿಯುವ ಸಾಧ್ಯತೆಗಳು ದಟ್ಟವಾಗತೊಡಗಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ(ಡಿ.22): 2021ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಈಗೀರುವ 8 ತಂಡಗಳ ಜೊತೆಯಲ್ಲಿ 1 ಅಥವಾ 2 ತಂಡಗಳ ಸೇರ್ಪಡೆಯಾಗುವ ನಿರೀಕ್ಷೆಯಿತ್ತು. ಆದರೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಯ ಮಹತ್ವಾಕಾಂಕ್ಷೆ ಯೋಜನೆಗೆ ಹಿನ್ನಡೆಯಾಗಿದೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.
ಮುಂದಿನ ವರ್ಷ 2021ರ ಐಪಿಎಲ್‌ನಲ್ಲಿ 10 ತಂಡಗಳು ಆಡುತ್ತಿಲ್ಲ. ಬದಲಾಗಿ 8 ತಂಡಗಳೇ ಪ್ರಶಸ್ತಿಗಾಗಿ ಫೈಟ್ ನಡೆಸಲಿವೆ. ಆದರೆ 2022ಕ್ಕೆ 2 ಹೆಚ್ಚುವರಿ ತಂಡಗಳು ಸೇರಿ ಒಟ್ಟು 10 ತಂಡಗಳು ಟೂರ್ನಿಯಲ್ಲಿ ಸ್ಪರ್ಧಿಸುವುದನ್ನು ನಿರೀಕ್ಷಿಸಲಾಗಿದೆ.
2009ರಿಂದ ಸತತ 11 ವರ್ಷ ಮಾಡಿದ್ದ ಸಾಧನೆ 2020ರಲ್ಲಿ ಕೊಹ್ಲಿಗೇ ಆಗಲೇ ಇಲ್ಲ!
14ನೇ ಆವೃತ್ತಿ ಐಪಿಎಲ್ ಆರಂಭಕ್ಕೆ ಕೇವಲ 3-4 ತಿಂಗಳು ಬಾಕಿ ಇರುವಾಗ ಹೆಚ್ಚುವರಿ ತಂಡಗಳ ಸೇರ್ಪಡೆ ಸವಾಲಿನದ್ದು ಎಂದು ಅರಿತು ಬಿಸಿಸಿಐ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ. ಡಿ.24 ರಂದು ಬಿಸಿಸಿಐ ವಾರ್ಷಿಕ ಸಭೆ ನಡೆಯಲಿದೆ. ಈ ಸಭೆಯ ಬಳಿಕ 2021ಕ್ಕೆ ಹೊಸ ತಂಡಗಳ ಸೇರ್ಪಡೆ ಬಗ್ಗೆ ಅಂತಿಮ ನಿರ್ಧಾರ ಹೊರಬೀಳಲಿದೆ.
ಆದರೆ ಸದ್ಯಕ್ಕಿರುವ ಮಾಹಿತಿ ಪ್ರಕಾರ ಮುಂದಿನ ವರ್ಷ ಬಿಸಿಸಿಐ ಐಪಿಎಲ್ ತಂಡಗಳ ಸಂಖ್ಯೆಯನ್ನು ಹೆಚ್ಚಿಸುವ ನಿರ್ಧಾರಕ್ಕೆ ಕೈ ಹಾಕುತ್ತಿಲ್ಲ. ಬದಲಾಗಿ 2022ಕ್ಕೆ 2 ಹೊಸ ತಂಡಗಳ ಸೇರ್ಪಡೆ ಬಗ್ಗೆ ನಿರ್ಧರಿಸಲಿದೆ ಎನ್ನಲಾಗಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 22, 2020, 8:15 AM IST