ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾಗೆ ಸಂಕಷ್ಟ 4ನೇ ದಿನದಾಟದಲ್ಲಿ ಆಂಗ್ಲರ ದಾಳಿಗೆ ಕುಸಿದ ಕೊಹ್ಲಿ ಸೈನ್ಯ ಮೊದಲೆರೆಡು ದಿನ ಹಿಡಿತ ಸಾಧಿಸಿದ ಭಾರತಕ್ಕೆ ಇದೀಗ ತೀವ್ರ ಹಿನ್ನಡೆ  

ಲಂಡನ್(ಆ.15): ಭಾರತ ಹಾಗೂ ಇಂಗ್ಲೆಂಡ್ ನಡುವಿನ 2ನೇ ಟೆಸ್ಟ್ ಪಂದ್ಯ ಅಂತಿಮ ಘಟ್ಟ ತಲುಪುತ್ತಿದೆ. ಮೊದಲೆರಡು ದಿನ ಹಿಡಿತ ಸಾಧಿಸಿದ್ದ ಟೀಂ ಇಂಡಿಯಾ ಇದೀಗ ತೀವ್ರ ಹಿನ್ನಡೆ ಅನುಭವಿಸಿದೆ. 2ನೇ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ ಇದೀಗ ದಿಢೀರ್ ವಿಕೆಟ್ ಕಳೆದುಕೊಂಡು ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದೆ. 

ಟೀಂ ಇಂಡಿಯಾ ಪರ ಆಡಲು ಮೈದಾನಕ್ಕಿಳಿದ ಇಂಗ್ಲೆಂಡ್ ಅಭಿಮಾನಿ; ವಶಕ್ಕೆ ಪಡೆದ ಭದ್ರತಾ ಸಿಬ್ಬಂದಿ!

ಇಂಗ್ಲೆಂಡ್ ತಂಡವನ್ನು ಮೊದಲ ಇನ್ನಿಂಗ್ಸ್‌ನಲ್ಲಿ ಅಲ್ಪಮೊತ್ತಕ್ಕೆ ಕಟ್ಟಿಹಾಕಲು ಭಾರತಕ್ಕೆ ಸಾಧ್ಯವಾಗಲಿಲ್ಲ. 391 ರನ್ ಸಿಡಿಸಿ 27 ರನ್ ಮುನ್ನಡೆ ಪಡೆದಿತ್ತು. ಇತ್ತ 2ನೇ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡಲು ವಿಫಲವಾಗಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಅಬ್ಬರಿಸಿದ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ನಿರಾಸೆ ಅನುಭವಿಸಿದರು.

ಕೆಎಲ್ ರಾಹುಲ್ ಕೇವಲ 5 ರನ್ ಸಿಡಿಸಿ ಔಟಾದರು. ಇತ್ತ ರೋಹಿತ್ 21 ರನ್ ಕಾಣಿಕೆ ನೀಡಿದರು. ನಾಯಕ ವಿರಾಟ್ ಕೊಹ್ಲಿ 20 ರನ್ ಸಿಡಿಸಿ ಔಟಾದರು. ಕೇವಲ 55 ರನ್‌ಗೆ 3 ವಿಕೆಟ್ ಕಳೆದುಕೊಂಡು ಭಾರತ ಹಿನ್ನಡೆ ಅನುಭವಿಸಿದೆ. ಸದ್ಯ ಟೀಂ ಇಂಡಿಯಾ 2ನೇ ಇನ್ನಿಂಗ್ಸ್‌ನಲ್ಲಿ 3 ವಿಕೆಟ್ ಕಳೆದುಕೊಂಡು 56 ರನ್ ಸಿಡಿಸಿದೆ. ಜೊತೆಗೆ 29 ರನ್ ಮುನ್ನಡೆ ಪಡೆದುಕೊಂಡಿದೆ.

ಕೆಎಲ್ ರಾಹುಲ್ ಮೇಲೆ ಬಿಯರ್ ಬಾಟಲಿ ಕಾರ್ಕ್ ಎಸೆತ; ಇಂಗ್ಲೆಂಡ್ ಅಭಿಮಾನಿಗಳ ವರ್ತನೆಗೆ ಆಕ್ರೋಶ!

ನಾಲ್ಕನೇ ದಿನದಾಟ ಟೀಂ ಇಂಡಿಯಾಗೆ ಪಾಲಿಗೆ ಅತ್ಯಂತ ಪ್ರಮುಖವಾಗಿದೆ. ಇಂದು ಬೃಹತ್ ಮೊತ್ತ ಪೇರಿಸಿ ಅಂತಿಮ ದಿನದಲ್ಲಿ ಇಂಗ್ಲೆಂಡ್ ತಂಡವನ್ನು ಬ್ಯಾಟಿಂಗ್ ಆಹ್ವಾನಿಸುವುದು ಟೀಂ ಇಂಡಿಯಾ ಲೆಕ್ಕಾಚಾರವಾಗಿತ್ತು. ಈ ಮೂಲಕ ಬೃಹತ್ ಟಾರ್ಗೆಟ್ ನೀಡುವ ಭಾರತದ ಪ್ಲಾನ್‌ಗೆ ಆರಂಭದಲ್ಲೇ ಇಂಗ್ಲೆಂಡ್ ಅಡ್ಡಿಯಾಗಿದೆ. 

ಭಾರತ ಮೊದಲ ಇನ್ನಿಂಗ್ಸ್:
ಕೆಎಲ್ ರಾಹುಲ್ ಸಿಡಿಸಿದ 129 ರನ್, ರೋಹಿತ್ ಶರ್ಮಾ ಸಿಡಿಸಿದ 83 ರನ್, ನಾಯಕ ವಿರಾಟ್ ಕೊಹ್ಲಿ 42, ರವೀಂದ್ರ ಜಡೇಜಾ 40 ರನ್ ಕಾಣಿಕೆ ಮೂಲಕ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 364 ರನ್ ಸಿಡಿಸಿ ಆಲೌಟ್ ಆಗಿತ್ತು.

ಇಂಗ್ಲೆಂಡ್ ಮೊದಲ ಇನ್ನಿಂಗ್ಸ್:
ನಾಯಕ ಜೋ ರೂಟ್ ಸಿಡಿಸಿದ 180 ರನ್‌ಗಳಿಂದ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ ದಿಟ್ಟ ಹೋರಾಟ ನೀಡಿತ್ತು. ಹೀಗಾಗಿ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 391 ರನ್ ಸಿಡಿಸಿ ಮುನ್ನಡೆ ಪಡೆದುಕೊಂಡಿತ್ತು.