ಇಂಗ್ಲೆಂಡ್ ಬಗ್ಗುಬಡಿದ ಟೀಂ ಇಂಡಿಯಾ; ಓವಲ್ ಟೆಸ್ಟ್‌ನಲ್ಲಿ ಕೊಹ್ಲಿ ಸೈನ್ಯಕ್ಕೆ 157 ರನ್ ಗೆಲುವು!
- 4ನೇ ಟೆಸ್ಟ್ ಪಂದ್ಯ ಕೈವಶ ಮಾಡಿದ ಟೀಂ ಇಂಡಿಯಾ
- ಇಂಗ್ಲೆಂಡ್ ಅಬ್ಬರಕ್ಕೆ ಬ್ರೇಕ್, 3ನೇ ಪಂದ್ಯದ ಸೋಲಿಗೆ ತಿರುಗೇಟು
- ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದ ಟೀಂ ಇಂಡಿಯಾ
ಲಂಡನ್(ಸೆ.06): ಇಂಗ್ಲೆಂಡ್ ಪ್ರವಾಸದಲ್ಲಿ ಟೀಂ ಇಂಡಿಯಾ ಸರಣಿ ಗೆಲುವಿನತ್ತ ಹೆಜ್ಜೆ ಇಡುತ್ತಿದೆ. 4ನೇ ಟೆಸ್ಟ್ ಪಂದ್ಯದಲ್ಲಿ ಆರಂಭದಲ್ಲಿ ಹಿನ್ನಡೆ ಅನುಭವಿಸಿದ ಟೀಂ ಇಂಡಿಯಾ ಅಷ್ಟೇ ಪ್ರಬಲವಾಗಿ ತಿರುಗೇಟು ನೀಡಿ ಓವಲ್ ಟೆಸ್ಟ್ ಪಂದ್ಯ ಕೈವಶ ಮಾಡಿದೆ. ಮಹತ್ವದ 4ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 157 ರನ್ ಗೆಲುವು ಸಾಧಿಸಿದೆ. ಇದರೊಂದಿಗೆ 5 ಪಂದ್ಯದಲ್ಲಿ 2-1 ಮುನ್ನಡೆ ಸಾಧಿಸಿದೆ.
ರೋಹಿತ್ ಶರ್ಮಾ ಭರ್ಜರಿ ಶತಕ; 4ನೇ ಟೆಸ್ಟ್‌ನಲ್ಲಿ ಹಿಟ್‌ಮ್ಯಾನ್ ದಾಖಲೆ!ಟೀಂ ಇಂಡಿಯಾ ನೀಡಿದ 368 ರನ್ ಟಾರ್ಗೆಟ್ ಪಡೆದ ಇಂಗ್ಲೆಂಡ್ ಉತ್ತಮ ಆರಂಭ ಪಡೆಯಿತು. ಆದರೆ ರೋರಿ ರಾಬಿನ್ಸ್ ಹಾಗೂ ಹಸೀಬ್ ಹಮೀದ್ ಜೊತೆಯಾಟಕ್ಕೆ ಬ್ರೇಕ್ ಬಿದ್ದ ಬಿನ್ನಲ್ಲೇ ಕುಸಿತ ಆರಂಭಗೊಂಡಿತು. ರೋರಿ 50 ರನ್ ಸಿಡಿಸಿ ಔಟಾದರೆ, ಹಮೀದ್ 63 ರನ್ ಕಾಣಿಕೆ ನೀಡಿದರು.
ಡೇವಿಡ್ ಮಿಲನ್ ಕೇವಲ 5 ರನ್ ಸಿಡಿಸಿದರು. ಒಲಿ ಪೋಪ್, ಜಾನಿಬೈರ್‌ಸ್ಟೋ ಹಾಗೂ ಮೊಯಿನ್ ಆಲಿ ನೆರವಾಗಲಿಲ್ಲ. ನಾಯಕ ಜೋ ರೂಟ್ 36 ರನ್ ಸಿಡಿಸಿ ಔಟಾದರು. ರೂಟ್ ವಿಕೆಟ್ ಕಬಳಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಟೀಂ ಇಂಡಿಯಾ 18 ರನ್ ಸಿಡಿಸಿದ ಕ್ರಿಸ್ ವೋಕ್ಸ್ ವಿಕೆಟ್ ಕಬಳಿಸಿತು.
ಕ್ರೈಗ್ ಓವರ್‌ಟನ್ ಹಾಗೂ ಜೇಮ್ಸ್ ಆ್ಯಂಡರ್ಸನ್ ವಿಕೆಟ್ ಪತನದೊಂದಿಗೆ ಇಂಗ್ಲೆಂಡ್ 210 ರನ್‌ಗೆ ಆಲೌಟ್ ಆಯಿತು. ಈ ಮೂಲಕ ಟೀಂ ಇಂಡಿಯಾ 157 ರನ್ ಗೆಲುವು ಕಂಡಿತು. ಇದರೊಂದಿಗೆ ಟೀಂ ಇಂಡಿಯಾ 5 ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆ ಪಡೆದಿದೆ.
ಮೊದಲ ಟೆಸ್ಟ್ ಪಂದ್ಯ ಮಳೆಯಿಂದ ರದ್ದಾಗಿತ್ತು. 2ನೇ ಪಂದ್ಯದಲ್ಲಿ ಟೀಂ ಇಂಡಿಯಾ 151 ರನ್ ಭರ್ಜರಿ ಗೆಲುವು ದಾಖಲಿಸಿತ್ತು. ಆದರೆ 3ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಇನ್ನಿಂಗ್ಸ್ ಹಾಗೂ 76 ರನ್ ಗೆಲವು ಸಾಧಿಸಿ ಸರಣಿ ಸಮಬಲಮಾಡಿತು. ಇದೀಗ ನಾಲ್ಕನೇ ಹಾಗೂ ಮಹತ್ವದ ಪಂದ್ಯದಲ್ಲಿ ಟೀಂ ಇಂಡಿಯಾ 157 ರನ್ ಗೆಲುವು ಸಾಧಿಸಿ ಮತ್ತೆ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ.