ರೋಹಿತ್ ಶರ್ಮಾ ಭರ್ಜರಿ ಶತಕ; 4ನೇ ಟೆಸ್ಟ್‌ನಲ್ಲಿ ಹಿಟ್‌ಮ್ಯಾನ್ ದಾಖಲೆ!

  • 4ನೇ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಶತಕ
  • ಹಿನ್ನಡೆ ಅನುಭವಿಸಿದ್ದ ಭಾರತಕ್ಕೆ ರೋಹಿತ್ ಶರ್ಮಾ ಸೆಂಚುರಿ ಆಸರೆ
  • ವಿದೇಶಿ ನೆಲದಲ್ಲಿ ಮೊದಲ ಟೆಸ್ಟ್ ಶತಕ ಸಿಡಿಸಿದ ರೋಹಿತ್
INDvsENG Rohit sharma hit maiden overseas test century against england in oval ckm

ಲಂಡನ್(ಸೆ.04): ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಹಿನ್ನಡೆ ರೋಹಿತ್ ಶರ್ಮಾ ಸೆಂಚುರಿ ನೆರವಾಗಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಹಿನ್ನಡೆ ಅನುಭವಿಸಿದ್ದ ಟೀಂ ಇಂಡಿಯಾ 2ನೇ ಇನ್ನಿಂಗ್ಸ್‌ನಲ್ಲಿ ದಿಟ್ಟ ಹೋರಾಟ ನೀಡಿದೆ. ಅದರಲ್ಲೂ ರೋಹಿತ್ ಶರ್ಮಾ ಆಕರ್ಷಕ ಶತಕ ಸಿಡಿಸಿ ಮಿಂಚಿದ್ದಾರೆ.

Ind vs Eng: ರೋಹಿತ್ ದಿಟ್ಟ ಬ್ಯಾಟಿಂಗ್‌, ಟೀಂ ಇಂಡಿಯಾಗೆ ಅಲ್ಪ ಮುನ್ನಡೆ

ಸಿಕ್ಸರ್ ಮೂಲಕ ಶತಕ ಪೂರೈಸಿದ ರೋಹಿತ್ ಶರ್ಮಾ, ವಿದೇಶಿ ನೆಲದಲ್ಲಿ ಮೊದಲ ಸೆಂಚುರಿ ಸಿಡಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 8 ವರ್ಷಗಳ ರೋಹಿತ್ ಶರ್ಮಾ ಟೆಸ್ಟ್ ಕರಿಯರ್‌ನಲ್ಲಿ ವಿದೇಶಿ ನೆಲದಲ್ಲಿ ಮೂಡಿ ಬಂದ ಮೊದಲ ಶತಕ ಇದಾಗಿದೆ. ವಿದೇಶಿ ನೆಲದಲ್ಲಿ ರೋಹಿತ್ ಶರ್ಮಾ ಆರಂಭಿಕನಾಗಿ ಕಣಕ್ಕಿಳಿದ 6ನೇ ಟೆಸ್ಟ್ ಪಂದ್ಯದಲ್ಲಿ ಶತಕ ದಾಖಲಾಗಿದೆ ಅನ್ನೋದು ಮತ್ತೊಂದು ವಿಶೇಷ.

ಕಳೆದ 8 ಇನ್ನಿಂಗ್ಸ್‌ಗಳಲ್ಲಿ ಶತಕ ವಂಚಿತರಾಗಿದ್ದ ರೋಹಿತ್ ಶರ್ಮಾ ಇದೀಗ ಕೊರಗು ನೀಗಿಸಿದ್ದಾರೆ. ಶತಕದ ಮೂಲಕ ರೋಹಿತ್ 8ನೇ  ಟೆಸ್ಟ್ ಶತಕ ಪೂರೈಸಿದ್ದಾರೆ. 2013ರಲ್ಲಿ ಟೆಸ್ಟ್ ತಂಡಕ್ಕೆ ಪದಾರ್ಪಣೆ ಮಾಡಿದ ರೋಹಿತ್ ಶರ್ಮಾ ಇದೀಗ 43 ಟೆಸ್ಟ್ ಪಂದ್ಯಗಳಿಂದ 8 ಶತಕ, 1 ದ್ವಿಶತಕ ಹಾಗೂ 14 ಅರ್ಧಶತಕ ಸಿಡಿಸಿದ್ದಾರೆ.

ರೋಹಿತ್ ಶರ್ಮಾ, ಚೇತೇಶ್ವರ್ ಪೂಜಾರ ಹಾಗೂ ಕೆಎಲ್ ರಾಹುಲ್ ಹೋರಾಟದಿಂದ ಟೀಂ ಇಂಡಿಯಾ 2ನೇ ಇನ್ನಿಂಗ್ಸ್‌ನಲ್ಲಿ 100 ರನ್ ಮುನ್ನಡೆ ಪಡೆದಿದೆ. 

Latest Videos
Follow Us:
Download App:
  • android
  • ios