ಓವಲ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾಗೆ ಆಘಾತ 4ನೇ ಟೆಸ್ಟ್ ಪಂದ್ಯದ ಮೊದಲ ದಿನವೇ ಟೀಂ ಇಂಡಿಯಾ ಬ್ಯಾಟಿಂಗ್ ವೈಫಲ್ಯ ಕೊಹ್ಲಿ, ಠಾಕೂರ್ ಸಿಡಿಸಿದ ಅರ್ಧಶತಕ ಹೊರತು ಪಡಿಸಿದರೆ ಉಳಿದವರು ಹೋರಾಡಲಿಲ್ಲ

ಲಂಡನ್(ಸೆ.02): ಲೀಡ್ಸ್ ಟೆಸ್ಟ್ ಪಂದ್ಯದಲ್ಲಿ ಭಾರತ ನೀಡಿದ ಹೀನಾಯ ಬ್ಯಾಟಿಂಗ್ ಪ್ರದರ್ಶನ ಇನ್ನೂ ಮರೆತಿಲ್ಲ. ಇದೀಗ 4ನೇ ಟೆಸ್ಟ್ ಪಂದ್ಯದ ಮೊದಲ ದಿನವೇ ಮತ್ತೆ ಟೀಂ ಇಂಡಿಯಾ ಬ್ಯಾಟಿಂಗ್ ವೈಫಲ್ಯ ಅನುಭವಿಸಿದೆ. ಹೀಗಾಗಿ ಮೊದಲ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ 191 ರನ್‌ಗೆ ಆಲೌಟ್ ಆಗಿದೆ.

ವಿಕೆಟ್ ಪತನದ ನಡುವೆ ಸಚಿನ್ ತೆಂಡುಲ್ಕರ್ ದಾಖಲೆ ಮುರಿದ ವಿರಾಟ್ ಕೊಹ್ಲಿ!

ನಾಯಕ ವಿರಾಟ್ ಕೊಹ್ಲಿ 50 ಹಾಗೂ ಶಾರ್ದೂಲ್ ಠಾಕೂರ್ ಸಿಡಿಸಿದ 57 ರನ್ ನೆರವಿನಿಂದ ಟೀಂ ಇಂಡಿಯಾ ಅಲ್ಪಮೊತ್ತ ಭೀತಿಯಿಂದ ಪಾರಾಯಿತು. ಆದರೂ ಬ್ಯಾಟಿಂಗ್ ವೈಫಲ್ಯ ತಪ್ಪಲಿಲ್ಲ. ಈ ಬಾರಿ ಟೀಂ ಇಂಡಿಯಾಗೆ ಕಂಟಕವಾಗಿದ್ದು ಕ್ರಿಸ್ ವೋಕ್ಸ್. 4 ವಿಕೆಟ್ ಕಬಳಿಸಿ ಟೀಂ ಇಂಡಿಯಾಗೆ ಶಾಕ್ ನೀಡಿದರು.

ರೋಹಿತ್ ಶರ್ಮಾ 11, ಕೆಎಲ್ ರಾಹುಲ್ 17, ಚೇತೇಶ್ವರ್ ಪೂಜಾರ 4, ರವೀಂದ್ರ ಜಡೇಜಾ 10, ಅಜಿಂಕ್ಯ ರಹಾನೆ 14, ರಿಷಬ್ ಪಂತ್ 9, ಉಮೇಶ್ ಯಾದವ್ 10, ಜಸ್ಪ್ರೀತ್ ಬುಮ್ರಾ ಶೂನ್ಯ ಹಾಗೂ ಮೊಹಮ್ಮದ್ ಸಿರಾಜ್ 1 ರನ್ ಸಿಡಿಸಿದರು.