ಓವಲ್ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್‌ಗೆ ಸಂಕಷ್ಟ ಅಂತಿಮ ದಿನದಾಟದಲ್ಲಿ ಇಂಗ್ಲೆಂಡ್ ದಿಢೀರ್ ಕುಸಿತ ಇಂಗ್ಲೆಂಡ್ ತಂಡಕ್ಕೆ ನಾಯಕ ಜೋ ರೂಟ್ ಆಸರೆ
ಲಂಡನ್(ಸೆ.06): ಓವಲ್ ಟೆಸ್ಟ್ ಪಂದ್ಯ ಇದೀಗ ರೋಚಕ ಘಟ್ಟ ತಲುಪಿದೆ. ಅಂತಿಮ ದಿನದಾಟದಲ್ಲಿ ಇಂಗ್ಲೆಂಡ್ ತಂಡ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಆರಂಭಿಕರ ಭರ್ಜರಿ ಜೊತೆಯಾದ ಬಳಿಕ ದಿಢೀರ್ ಕುಸಿತ ಕಂಡ ಇಂಗ್ಲೆಂಡ್ 6 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿದೆ. ಆದರೆ ನಾಯಕ ಜೋ ರೂಟ್ ಆಸರೆಯಾಗಿರುವುದು ಇಂಗ್ಲೆಂಡ್ ಸಮಾಧಾನಕ್ಕೆ ಕಾರಣವಾಗಿದೆ.
ಇಂಗ್ಲೆಂಡ್‌ಗೆ 368 ರನ್ ಟಾರ್ಗೆಟ್ ನೀಡಿದ ಭಾರತ, ಕುತೂಹಲ ಘಟ್ಟದತ್ತ ಓವಲ್ ಟೆಸ್ಟ್
ಟೀಂ ಇಂಡಿಯಾ ನೀಡಿದ 368 ರನ್ ಟಾರ್ಗೆಟ್‌ಗೆ ಉತ್ತರವಾಗಿ ಇಂಗ್ಲೆಂಡ್ 2ನೇ ಇನ್ನಿಂಗ್ಸ್ ಆರಂಭಿಸಿತ್ತು. ಆರಂಭಿಕರಾದ ರೋರಿ ಬರ್ನ್ಸ್, ಹಸೀಬ್ ಹಮೀದ್ ಶತಕದ ಜೊತೆಯಾಟ ಇಂಗ್ಲೆಂಡ್ ತಂಡಕ್ಕೆ ಆತ್ಮವಿಶ್ವಾಸ ಹೆಚ್ಚಿಸಿತ್ತು. ಆದರೆ ಬರ್ನ್ಸ್ 50 ರನ್ ಹಾಗೂ ಹಮೀದ್ 63 ರನ್ ಸಿಡಿಸಿ ಔಟಾದರು. ಇಲ್ಲಿಂದ ಇಂಗ್ಲೆಂಡ್ ವಿಕೆಟ್ ಪತನ ಆರಂಭಗೊಂಡಿತು.
ಡೇವಿಡ್ ಮಿಲನ್ ರನೌಟ್‌ಗೆ ಬಲಿಯಾದರೆ, ಒಲಿ ಪೋಪ್ 2 ರನ್ ಸಿಡಿಸಿ ಔಟಾದರು. ಜಾನಿ ಬೈರ್‌ಸ್ಟೋ ಹಾಗೂ ಮೊಯಿನ್ ಆಲಿ ಡೌಕೌಟ್ ಆದರು. ಜೋ ರೂಟ್ ಹೋರಾಟ ಮುಂದುವರಿಸಿದ್ದಾರೆ. ಇತ್ತ ಕ್ರಿಸ್ ವೋಕ್ಸ್ ಸಾಥ್ ನೀಡಿದ್ದಾರೆ.
ರೋಹಿತ್ ಶರ್ಮಾ ಭರ್ಜರಿ ಶತಕ; 4ನೇ ಟೆಸ್ಟ್‌ನಲ್ಲಿ ಹಿಟ್‌ಮ್ಯಾನ್ ದಾಖಲೆ!
ಅಂತಿಮ ದಿನದಾಟದಲ್ಲಿ ಇಂಗ್ಲೆಂಡ್ ಪಂದ್ಯ ಉಳಿಸಿಕೊಳ್ಳಲು ಹೋರಾಡುತ್ತಿದೆ. ಇತ್ತ ಟೀಂ ಇಂಡಿಯಾ ಗೆಲುವಿಗೆ ಕೇವಲ 4 ವಿಕೆಟ್ ಅವಶ್ಯಕತೆ ಇದೆ. ಇತ್ತ ಟೀಂ ಇಂಡಿಯಾ ಅಭಿಮಾನಿಗಳ ಸಂಭ್ರಮ ಕೂಡ ಡಬಲ್ ಆಗಿದೆ.
ಇಂಗ್ಲೆಂಡ್ ವಿರುದ್ಧದ 5 ಟೆಸ್ಟ್ ಪಂದ್ಯಗಳ ಸರಣಿ 1-1 ಅಂತರದಲ್ಲಿ ಸಮಬಲಗೊಂಡಿದೆ. ಹೀಗಾಗಿ ನಾಲ್ಕನೇ ಟೆಸ್ಟ್ ಪಂದ್ಯ ಉಭಯ ತಂಡಗಳಿಗೆ ತೀವ್ರ ಮಹತ್ವದ್ದಾಗಿದೆ.
