INDvAUS ಅಂತಿಮ ಟಿ20ಗೆ ಮಳೆ ಕಾಟ, ಬೆಂಗಳೂರಿನಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ!

ಬೆಂಗಳೂರಿಲ್ಲಿ ನಡೆಯುತ್ತಿರುವ ಅಂತಿಮ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಬೌಲಿಂಗ್ ಆಯ್ಕೆ ಮಾಡಿದೆ. ಒಂದೆಡೆ ತುಂತುರು ಮಳೆ ಕೂಡ ಅಡ್ಡಿಯಾಗುತ್ತಿದೆ. ಹೀಗಾಗಿ ಮೊದಲು ಬ್ಯಾಟಿಂಗ್ ಹೆಚ್ಚು ಸವಾಲಾಗಿದೆ.

INDvAUS Australia win toss and chose Bowl first against Team India in 5th T20 ckm

ಬೆಂಗಳೂರು(ಡಿ.03) ತಮಿಳುನಾಡಿನ ಚಂಡಮಾರುತದಿಂದ ಬೆಂಗಳೂರಿನಲ್ಲಿ ತುಂತುರ ಮಳೆ ಸುರಿಯುತ್ತಿದೆ. ಟಾಸ್‌ಗೂ ಮೊದಲು ಮಳೆ ಅಡ್ಡಿಯಾದ ಕಾರಣ ಪಿಚ್ ಕವರ್ ಮಾಡಲಾಗಿತ್ತು. ಇದೀಗ ಮಳೆ ನಿಂತಿದೆ. ಇದರ ಬೆನ್ನಲ್ಲೇ ಟಾಸ್ ಪ್ರಕ್ರಿಯೆ ಕೂಡ ಮುಗಿದಿದೆ. ಅಂತಿಮ ಹಾಗೂ 5ನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಭಾರತ ಹಾಗೂ ಆಸ್ಟ್ರೇಲಿಯಾ ತಂಡದಲ್ಲಿ ಒಂದೊಂದು ಬದಲಾವಣೆ ಮಾಡಲಾಗಿದೆ. ದೀಪಕ್ ಚಹಾರ್ ಬದಲು ಅರ್ಶದೀಪ್ ತಂಡ ಸೇರಿಕೊಂಡಿದ್ದಾರೆ. ಇತ್ತ ಗ್ರೀನ್ ಬದಲು ನಥನ್ ಎಲ್ಲಿಸ್ ಆಸ್ಟ್ರೇಲಿಯಾ ತಂಡ ಸೇರಿಕೊಂಡಿದ್ದಾರೆ.

ಟೀಂ ಇಂಡಿಯಾ ಪ್ಲೇಯಿಂಗ್ 11
ಯಶಸ್ವಿ ಜಸ್ವಾಲ್, ರುತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್(ನಾಯಕ), ರಿಂಕು ಸಿಂಗ್, ಜಿತೇಶ್ ಶರ್ಮಾ, ಅಕ್ಸರ್ ಪಟೇಲ್, ರವಿ ಬಿಶ್ನೋಯ್, ಅವೇಶ್ ಖಾನ್, ಮುಕೇಶ್ ಕುಮಾರ್, ಅರ್ಶದೀಪ್ ಸಿಂಗ್

ಕಾಂಗ್ರೆಸ್ ಚುನಾವಣಾ ಸೋಲಿಗೆ ಸ್ಫೋಟಕ ಕಾರಣ ಬಿಚ್ಚಿಟ್ಟ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್!

ಆಸ್ಟ್ರೇಲಿಯಾ ಪ್ಲೇಯಿಂಗ್ 11
ಟ್ರಾವಿಸ್ ಹೆಡ್, ಜೋಶ್ ಫಿಲಿಪ್, ಬೆನ್ ಮೆಕ್‌ಡರ್ಮಾಟ್, ಆ್ಯರೋನ್ ಹಾರ್ಡಿ, ಟಿಮ್ ಡೇವಿಡ್, ಮ್ಯಾಥ್ಯೂ ಶಾರ್ಟ್, ಮಾಥ್ಯೂ ವೇಡ್(ನಾಯಕ), ಬೆನ್ ಡ್ವಾರ್‌ಶೂಯಿಸ್, ನತನ್ ಎಲ್ಲಿಸ್, ಜೇಸನ್ ಬೆಹೆನ್‌ಡ್ರಾಫ್, ಟನ್ವೀರ್ ಸಾಂಘ

ಭಾರತ ಹಾಗೂ ಆಸ್ಟ್ರೇಲಿಯಾ 5 ಪಂದ್ಯಗಳ ಸರಣಿಯಲ್ಲಿ 3-1 ಗೆಲುವಿನ ಮೂಲಕ ಈಗಾಗಲೇ ಸರಣಿ ಭಾರತದ ಕೈವಶವಾಗಿದೆ. ಆರಂಭಿಕ 2 ಪಂದ್ಯ ಗೆದ್ದ ಭಾರತ 3ನೇ ಪಂದ್ಯ ಕೈಚೆಲ್ಲಿತ್ತು. ಆದರೆ 4ನೇ ಪಂದ್ಯದಲ್ಲಿ ಮತ್ತೆ ಅಬ್ಬರಿಸಿ ಗೆಲುವು ದಾಖಲಿಸಿತ್ತು. ಶಿಸ್ತುಬದ್ಧ ಬ್ಯಾಟಿಂಗ್‌ ಹಾಗೂ ಬೌಲರ್‌ಗಳ ಮೊನಚು ದಾಳಿಯ ನೆರವಿನಿಂದ 4ನೇ ಟಿ20 ಪಂದ್ಯದಲ್ಲಿ ಭಾರತ 20 ರನ್‌ ಜಯಭೇರಿ ಬಾರಿಸಿತ್ತು.. ಇದರೊಂದಿಗೆ 5 ಪಂದ್ಯಗಳ ಸರಣಿಯಲ್ಲಿ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಭಾರತ 3-1ರಿಂದ ಗೆಲುವು ತನ್ನದಾಗಿಸಿಕೊಂಡಿತು.

ಬೆಂಗಳೂರು ಭಾರತ- ಆಸ್ಟ್ರೇಲಿಯಾ ಟಿ-20 ಪಂದ್ಯದ ವೇಳೆ ಪಾಕಿಸ್ತಾನಕ್ಕೆ ಜೈಕಾರ ಘೋಷಣೆ!

ಭಾರತಕ್ಕೆ ಇದು ಟಿ20ಯಲ್ಲಿ ಆಸೀಸ್‌ ವಿರುದ್ಧ ಹ್ಯಾಟ್ರಿಕ್‌ ಹಾಗೂ ಒಟ್ಟಾರೆ 6ನೇ ಸರಣಿ ಜಯ. ಈ ಮೊದಲು 2007-08, 2013-14ರಲ್ಲಿ ತಲಾ 1 ಪಂದ್ಯದ ಸರಣಿ ಜಯಿಸಿದ್ದ ಭಾರತ, 2015-16ರಲ್ಲಿ 3 ಪಂದ್ಯಗಳ ಸರಣಿಯನ್ನು 3-0ಯಲ್ಲಿ ಗೆದ್ದಿತ್ತು. ಬಳಿಕ 2020-21ರಲ್ಲಿ 2-1 ಹಾಗೂ 2022ರಲ್ಲಿ 2-1 ಅಂತರದಲ್ಲಿ ಸರಣಿ ಕೈವಶಪಡಿಸಿಕೊಂಡಿತ್ತು. ಇನ್ನೆರಡು ಸರಣಿಯನ್ನು ಆಸೀಸ್‌ ಗೆದ್ದಿದ್ದರೆ, 3 ಬಾರಿ ಸರಣಿ ಉಭಯ ತಂಡಗಳು ಡ್ರಾ ಸಾಧಿಸಿವೆ.

Latest Videos
Follow Us:
Download App:
  • android
  • ios