ಭಾರತ ಮಹಿಳಾ ಟಿ20 ಕ್ರಿಕೆಟ್ ತಂಡ ಇದೀಗ ತವರಿನಲ್ಲೇ ದಕ್ಷಿಣ ಆಫ್ರಿಕಾ ಎದುರು ವೈಟ್‌ವಾಶ್ ಭೀತಿಗೆ ಸಿಲುಕಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಲಖನೌ(ಮಾ.23): ಮಂಗಳವಾರ ಇಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಕಣಕ್ಕಿಳಿಯಲಿರುವ ಭಾರತ ಮಹಿಳಾ ತಂಡ, ವೈಟ್‌ವಾಶ್‌ ಮುಖಭಂಗ ತಪ್ಪಿಸಿಕೊಳ್ಳಲು ಹೋರಾಡಲಿದೆ. 

ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಸೋತಿದ್ದ ಭಾರತ ತಂಡ ಭಾರೀ ಒತ್ತಡದೊಂದಿಗೆ ಅಂತಿಮ ಪಂದ್ಯಕ್ಕೆ ಕಣಕ್ಕಿಳಿಯಲಿದೆ. ಭಾರತ ವಿರುದ್ಧ ಚೊಚ್ಚಲ ಟಿ20 ಸರಣಿ ಗೆದ್ದಿರುವ ದಕ್ಷಿಣ ಆಫ್ರಿಕಾ, ಕ್ಲೀನ್‌ ಸ್ವೀಪ್‌ ನಿರೀಕ್ಷೆಯಲ್ಲಿದೆ.

Scroll to load tweet…

ವಿಕಲಾಂಗ ಕ್ರಿಕೆಟ್‌ ಸಂಸ್ಥೆಗಳು ಸೇರಿ ಡಿಸಿಸಿಐ ಸ್ಥಾಪನೆ

ಮುಂಬೈ: ಭಾರತದ ವಿವಿಧ ವಿಕಲಾಂಗ ಕ್ರಿಕೆಟ್‌ ಸಂಸ್ಥೆಗಳು ಸೇರಿ ಭಾರತ ವಿಕಲಾಂಗ ಕ್ರಿಕೆಟ್‌ ಸಮಿತಿ(ಡಿಸಿಸಿಐ) ಸ್ಥಾಪಿಸಿವೆ. 

ಭಾರತ ವಿರುದ್ದದ ಏಕದಿನ ಸರಣಿಗೆ ಇಂಗ್ಲೆಂಡ್‌ ತಂಡ ಪ್ರಕಟ

ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆಯಡಿ ಸಂಸ್ಥೆಯನ್ನು ನೋಂದಾಯಿಸಲಾಗಿದ್ದು, ಅಂಧರ ಕ್ರಿಕೆಟ್‌ಗೆ ಅಪಾರ ಕೊಡುಗೆ ನೀಡಿರುವ ರಾಜ್ಯದ ಜಿ.ಕೆ.ಮಹಂತೇಶ್‌, ಡಿಸಿಸಿಐನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಸಂಸ್ಥೆಗೆ ಬಿಸಿಸಿಐನಿಂದ ಮಾನ್ಯತೆ ಸಿಗುವ ನಿರೀಕ್ಷೆ ಇದ್ದು, ಬಿಸಿಸಿಐ ಚಿಹ್ನೆಯೊಂದಿಗೆ ವಿಕಲಾಂಗ ತಂಡಗಳು ಸ್ಪರ್ಧಿಸಲಿವೆ. ಎಲ್ಲಕ್ಕಿಂತ ಮುಖ್ಯವಾಗಿ ತಂಡಗಳಿಗೆ ಬಿಸಿಸಿಐನಿಂದ ಆರ್ಥಿಕ ನೆರವು ಸಿಗಲಿದೆ.