ಭಾರತ ವಿರುದ್ದ ಮಾರ್ಚ್‌ 23ರಿಂದ ಆರಂಭವಾಗಲಿರುವ 3 ಪಂದ್ಯಗಳ ಏಕದಿನ ಸರಣಿಗೆ ಬಲಿಷ್ಠ ಇಂಗ್ಲೆಂಡ್ ತಂಡ ಪ್ರಕಟಗೊಂಡಿದ್ದು, ಜೋಫ್ರಾ ಆರ್ಚರ್‌ ಹೊರಬಿದ್ದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಲಂಡನ್(ಮಾ.22)‌: ಭಾರತ ವಿರುದ್ಧ ಮಾರ್ಚ್ 23ರಿಂದ ಆರಂಭಗೊಳ್ಳಲಿರುವ 3 ಪಂದ್ಯಗಳ ಏಕದಿನ ಸರಣಿಗೆ ಇಂಗ್ಲೆಂಡ್‌ ತಂಡ ಪ್ರಕಟಗೊಂಡಿದೆ. 14 ಸದಸ್ಯರ ತಂಡವನ್ನು ಇಯಾನ್‌ ಮಾರ್ಗನ್‌ ಮುನ್ನಡೆಸಲಿದ್ದಾರೆ. 

ಹಾಲಿ ವಿಶ್ವ ಚಾಂಪಿಯನ್‌ ತಂಡದ ಬ್ಯಾಟಿಂಗ್‌ ಬಲಿಷ್ಠವಾಗಿದ್ದು, ಬೌಲಿಂಗ್‌ ವಿಭಾಗದ ಅನನುಭವಿಗಳಿಂದ ಕೂಡಿದೆ. ಜೋಫ್ರಾ ಆರ್ಚರ್‌ ಮೊಣಕೈ ನೋವಿನ ಚಿಕಿತ್ಸೆಗಾಗಿ ತವರಿಗೆ ವಾಪಸಾಗಲಿದ್ದಾರೆ. ಮೂವರು ಆಟಗಾರರನ್ನು ಮೀಸಲು ಪಡೆಯಲ್ಲಿ ಇರಿಸಲಾಗಿದೆ. ಟೆಸ್ಟ್‌ ಸರಣಿ ಬಳಿಕ ತವರಿಗೆ ತೆರಳಿದ್ದ ಜೋ ರೂಟ್‌ ಭಾರತಕ್ಕೆ ವಾಪಸಾಗಿಲ್ಲ. ಹೀಗಾಗಿ ಸರಣಿಗೆ ಅವರು ಅಲಭ್ಯರಾಗಲಿದ್ದಾರೆ.

ಸರಣಿ ಸೋತ ಬೆನ್ನಲ್ಲೇ ಇಂಗ್ಲೆಂಡ್‌ಗೆ ಮತ್ತೊಂದು ಆಘಾತ; IPL ಟೂರ್ನಿ ಮೇಲೂ ಎಫೆಕ್ಟ್!

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮಾರ್ಚ್‌ 23, 26 ಹಾಗೂ 28ರಂದು ಮೂರು ಏಕದಿನ ಪಂದ್ಯಗಳು ನಡೆಯಲಿದ್ದು, ಪುಣೆ ಮೈದಾನ ಆತಿಥ್ಯವನ್ನು ವಹಿಸಿದೆ.

Scroll to load tweet…

ತಂಡ: ಮೊರ್ಗನ್‌(ನಾಯಕ), ಬೇರ್‌ಸ್ಟೋವ್‌, ರಾಯ್‌, ಲಿವಿಂಗ್‌ಸ್ಟೋನ್‌, ಬಿಲ್ಲಿಂಗ್ಸ್‌, ಬಟ್ಲರ್‌, ಅಲಿ, ಸ್ಯಾಮ್‌ ಕರ್ರನ್‌, ಟಾಮ್‌ ಕರ್ರನ್‌, ರೀಸ್‌ ಟಾಪ್ಲೆ, ರಶೀದ್‌, ಪಾರ್ಕಿನ್‌ಸನ್‌, ವುಡ್‌. ಮೀಸಲು ಆಟಗಾರರು: ಮಲಾನ್‌, ಜೋರ್ಡನ್‌, ಜೇಕ್‌ ಬಾಲ್‌.