ಕಿಂಗ್ ಕೊಹ್ಲಿಯನ್ನ ಎದುರು ಹಾಕಿಕೊಂಡ ಗಂಭೀರ್‌ಗೆ ಸಂಕಷ್ಟ..!
ಇನ್ನೂ ನಿಂತಿಲ್ಲ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ನಡುವಿನ ಕಿರಿಕ್
16ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲೂ ಕೊಹ್ಲಿ ಕೆಣಕ್ಕಿದ್ದ ಗಂಭೀರ್
ಇದೀಗ ಗಂಭೀರ್‌ಗೆ ಲಖನೌ ಫ್ರಾಂಚೈಸಿ ಗೇಟ್ ಪಾಸ್ ನೀಡುವ ಸಾಧ್ಯತೆ
ಬೆಂಗಳೂರು(ಜು.10): ವಿರಾಟ್ ಕೊಹ್ಲಿ.! ಇದು ಬರೀ ಹೆಸರಲ್ಲ ಕ್ರಿಕೆಟ್ ದುನಿಯಾದ ಬಿಗ್ಗೆಸ್ಟ್ ಬ್ರ್ಯಾಂಡ್. ಭಾರತ ಗೆಲ್ಲಬೇಕು ಅಂದ್ರು, ಕೊಹ್ಲಿ ಅಬ್ಬರಿಸಬೇಕು. BCCIಗೆ ಕೋಟಿ, ಕೋಟಿ ಆದಾಯ ಹರಿದು ಬರಬೇಕಂದ್ರು, ವಿರಾಟ್ ಫೀಲ್ಡ್ಗಿಳಿಯಲೇಬೇಕು ಆಡಲೇಬೇಕು. ಇದೇ ಕಾರಣಕ್ಕೆ ಕೊಹ್ಲಿಯನ್ನ ಯಾರೂ ಎದುರು ಹಾಕಿಕೊಳ್ಳಲ್ಲ. ಆದ್ರೆ, ಟೀಂ ಇಂಡಿಯಾದ ಮಾಜಿ ಆಟಗಾರ ಗೌತಮ್ ಗಂಭೀರ್, ಕೊಹ್ಲಿ ವಿರುದ್ಧ ತೊಡೆತಟ್ಟಿ ತಮ್ಮ ಸ್ಥಾನಕ್ಕೆ ಕುತ್ತು ತಂದುಕೊಂಡಿದ್ದಾರೆ.
ಹೌದು, IPLನಲ್ಲಿ ಗೌತಮ್ ಗಂಭೀರ್, ಲಖನೌ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಆಗಿದ್ದಾರೆ. ಆದ್ರೀಗ, ಗಂಭೀರ್ ಸ್ಥಾನಕ್ಕೆ ಕುತ್ತು ಬಂದಿದೆ. ಮೆಂಟರ್ ಸ್ಥಾನದಿಂದ ಗಂಭೀರ್‌ಗೆ ಗೇಟ್ಪಾಸ್ ನೀಡಲು ಲಖನೌ ಫ್ರಾಂಚೈಸಿ ಚಿಂತಿಸ್ತಿದೆ. ವಿರಾಟ್ ಕೊಹ್ಲಿ ಜೊತೆಗಿನ ಗಂಭೀರ್ ಜಗಳವೇ ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.
ಈ ಬಾರಿಯ IPLನಲ್ಲಿ ಗೌತಮ್ ಗಂಭೀರ್ ಅನಗತ್ಯವಾಗಿ RCB ಅಭಿಮಾನಿಗಳನ್ನ ಕೆಣಕಿದ್ರು. ಲಖನೌದಲ್ಲಿ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಗಂಭೀರ್‌ಗೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ನೀಡಿದ್ರು. ಇದರಿಂದ ಗಂಭೀರ್ ಕೊಹ್ಲಿ ವಿರುದ್ಧ ಕಾಲು ಕೆರೆದುಕೊಂಡು ಜಗಳಕ್ಕಿಳಿದಿದ್ರು. ಇದು ಕೊಹ್ಲಿ ಅಭಿಮಾನಿಗಳು ಮತ್ತಷ್ಟು ಕೆರಳುವಂತೆ ಮಾಡ್ತು. ಲಖನೌ ತಂಡದ ಇಮೇಜ್ಗು ದೊಡ್ಡ ಪೆಟ್ಟು ಬಿತ್ತು.
ಗಂಭೀರ್- ಕೊಹ್ಲಿ ಜಗಳದ ನಂತರ ಪಾತಾಳಕ್ಕೆ ಕುಸಿದ LSG ಫ್ಯಾನ್ಬೇಸ್..!
ಯೆಸ್, ಗಂಭೀರ್- ಕೊಹ್ಲಿ ಜಗಳದ ನಂತರ ಲಕ್ನೋ ತಂಡದ ಫ್ಯಾನ್ ಬೇಸ್ ಪಾತಾಳಕ್ಕೆ ಕುಸಿದಿದೆ. ತಂಡವನ್ನ ಅಭಿಮಾನಿಸುವವರಿಗಿಂತ, ದ್ವೇಷ ಮಾಡುವವರ ಸಂಖ್ಯೆಯೇ ಹೆಚ್ಚಾಗಿದೆ. ಇದರಿಂದ ಎಚ್ಚೆತ್ತುಕೊಂಡಿರೋ ಫ್ರಾಂಚೈಸಿ, ಸೋಷಿಯಲ್ ಮೀಡಿಯಾ ಇನ್ಚಾರ್ಜ್ಗೆ ಗೇಟ್ಪಾಸ್ ನೀಡಿದೆ. ಈಗ ಗಂಭೀರ್ಗೂ ಗೇಟ್ಪಾಸ್ ನೀಡಲು ಯೋಚಿಸ್ತಿದೆ. ಈ ವರ್ಷ ನಡೆಯುವ ಐಪಿಎಲ್ ಮಿನಿ ಆಕ್ಷನ್ಗು ಮುನ್ನ ಗಂಭಿರ್ನ ಮನೆಗೆ ಕಳಿಸಲು ಮುಂದಾಗಿದೆ. ಫ್ಯಾನ್ಬೇಸ್ ಜೊತೆಗೆ ಕೊಹ್ಲಿ ಜೊತೆಗಿನ ಸಂಬಂಧವನ್ನ ಉತ್ತಮ ಪಡಿಸಿಕೊಳ್ಳೋದು ಕೂಡ ಲಖನೌ ಫ್ರಾಂಚೈಸಿ ಯೋಚನೆಯಾಗಿದೆ.
ಚೆನ್ನೈಗೆ ಬಂದಿಳಿದ ಎಂ ಎಸ್ ಧೋನಿ; ಹೂ ಮಳೆ ಸುರಿಸಿ ಸ್ವಾಗತಿಸಿದ ಫ್ಯಾನ್ಸ್..! ವಿಡಿಯೋ ವೈರಲ್
ಅಲ್ಲದೇ, ಗಂಭೀರ್ ಕಾರ್ಯವೈಖರಿ ಬಗ್ಗೆಯೂ ಫ್ರಾಂಚೈಸಿ ತೃಪ್ತಿ ಹೊಂದಿಲ್ಲ. ಗೌತಮ್ ಗಂಭೀರ್ ಕೋಚ್ ಆ್ಯಂಡಿ ಫ್ಲವರ್ ಜೊತೆ ಚರ್ಚಿಸದೇ ಏಕಪಕ್ಷೀಯವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಅನ್ನೋದು, ಫ್ರಾಂಚೈಸಿಯ ಅಸಮಾಧಾನಕ್ಕೆ ಕಾರಣವಾಗಿದೆ. ಒಟ್ಟಿನಲ್ಲಿ ಗಂಭೀರ್ - ಕೊಹ್ಲಿ ಜಗಳದಿಂದಾಗಿ ಲಖನೌ ಫ್ರಾಂಚೈಸಿ ಭಾರಿ ನಷ್ಟವಾಗಿರೋದಂತೂ ನಿಜ. ವಿರಾಟ್ ಕೊಹ್ಲಿ ಅಭಿಮಾನಿಗಳು LSG ಹೆಸರು ಕೇಳಿದ್ರೆ ಉರಿದು ಬೀಳ್ತಿದ್ದಾರೆ. ಇದರಿಂದ ಫ್ರಾಂಚೈಸಿ ಗಂಭೀರ್ನ ಮೆಂಟರ್ ಸ್ಥಾನದಿಂದ ತೆಗೆದು ಹಾಕಿ, ಕೊಹ್ಲಿ ಅಭಿಮಾನಿಗಳ ಸಮಾಧಾನ ಪಡಿಸೋ ಪ್ಲಾನ್ ಮಾಡಿದೆ.