2007ರ ಟಿ20 ವಿಶ್ವಕಪ್ ಹೀರೋ ಇದೀಗ ಸಿನಿಮಾದತ್ತ ಮುಖ ಮಾಡಿದ್ದಾರೆ. ತಮಿಳು ಚಿತ್ರದಲ್ಲಿ ಈ ಕ್ರಿಕೆಟಿಗ ಅದೃಷ್ಠಪರೀಕ್ಷೆಗೆ ಮುಂದಾಗಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ನವದೆಹಲಿ[ಅ.15]: 2007ರ ಟಿ20 ಫೈನಲ್ ಪಂದ್ಯದ ಹೀರೋ ಇರ್ಫಾನ್ ಪಠಾಣ್ ತಮಿ​ಳು ಚಿತ್ರರಂಗಕ್ಕೆ ಕಾಲಿ​ಡುವ ಮೂಲಕ ಹೊಸ ಇನ್ನಿಂಗ್ಸ್‌ ಆರಂಭಿ​ಸು​ತ್ತಿ​ದ್ದಾರೆ. 

ಟಿ20 ವಿಶ್ವಕಪ್ 2007: ಟ್ರೋಫಿ ಗೆಲ್ಲಿಸಿಕೊಟ್ಟ ಟಾಪ್ 5 ಹೀರೋಗಳಿವರು..!

ಹೌದು, ಖ್ಯಾತ ನಟ ವಿಕ್ರಂ ಅವ​ರೊಂದಿಗೆ ಚಿತ್ರದಲ್ಲಿ ನಟಿ​ಸು​ತ್ತಿ​ರು​ವು​ದಾಗಿ ಪಠಾಣ್‌ ಟ್ವೀಟರ್‌ನಲ್ಲಿ ಬಹಿ​ರಂಗಪಡಿ​ಸಿ​ದ್ದಾರೆ. ಆದರೆ ಚಿತ್ರದಲ್ಲಿ ತಮ್ಮ ಪಾತ್ರವೇನು ಎನ್ನುವುದನ್ನು ಪಠಾಣ್‌ ಗುಟ್ಟು ಬಿಟ್ಟುಕೊಟ್ಟಿಲ್ಲ.

Scroll to load tweet…

2012ರ ಬಳಿಕ ಅಂತಾ​ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡದ ಪಠಾಣ್‌, ಜಮ್ಮು-ಕಾಶ್ಮೀರ ತಂಡಕ್ಕೆ ಮೆಂಟರ್‌ ಹಾಗೂ ಆಟಗಾರನಾಗಿ ಕಾರ್ಯ​ನಿ​ರ್ವ​ಹಿ​ಸುತ್ತಿ​ದ್ದಾರೆ. ಜತೆಗೆ ವೀಕ್ಷಕ ವಿವ​ರಣೆಗಾರ​ರಾ​ಗಿಯೂ ಕಾಣಿ​ಸಿ​ಕೊ​ಳ್ಳು​ತ್ತಿ​ದ್ದಾರೆ. ಇರ್ಫಾನ್ ಭಾರತ ಪರ ಅಕ್ಟೋಬರ್ 02, 2012ರಲ್ಲಿ ಶ್ರೀಲಂಕಾ ವಿರುದ್ಧ ಕೊನೆಯ ಬಾರಿಗೆ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಿದ್ದರು. 

ಪಾಕ್ ನಾಯಕನಿಗೆ ಗೂಗ್ಲಿ ಪ್ರಶ್ನೆ ; ಪತ್ರಕರ್ತನಿಗೆ ನಿಷೇಧ ಹೇರಿದ PCB!

ಟೆಸ್ಟ್ ಕ್ರಿಕೆಟ್’ನಲ್ಲಿ ಭಾರತ ಪರ ಹ್ಯಾಟ್ರಿಕ್ ವಿಕೆಟ್ ಪಡೆದ ಎರಡನೇ ಬೌಲರ್ ಎನ್ನುವ ದಾಖಲೆ ಇರ್ಫಾನ್ ಪಠಾಣ್ ಹೆಸರಿನಲ್ಲಿದೆ. ಭಾರತದ ಸ್ಟಾರ್ ಆಲ್ರೌಂಡರ್ ಎನ್ನುವಂತಹ ಪ್ರದರ್ಶನ ತೋರಿದ್ದ ಪಠಾಣ್ ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರಬೀಳಬೇಕಾಯಿತು. ಭಾರತ ಪರ 29 ಟೆಸ್ಟ್ ಪಂದ್ಯಗಳನ್ನಾಡಿರುವ ಪಠಾಣ್ 100 ವಿಕೆಟ್ ಕಬಳಿಸಿದ್ದಾರೆ. ಇನ್ನು ಬ್ಯಾಟಿಂಗ್’ನಲ್ಲೂ ಒಂದು ಶತಕ ಸಹಿತ 1,105 ರನ್ ಗಳಿಸಿದ್ದಾರೆ. 102 ಏಕದಿನ ಪಂದ್ಯಗಳನ್ನಾಡಿರುವ ಪಠಾಣ್ 173 ವಿಕೆಟ್ ಹಾಗೂ 1,544 ರನ್ ಬಾರಿಸಿದ್ದಾರೆ. ಇನ್ನು 24 ಟಿ20 ಪಂದ್ಯಗಳನ್ನಾಡಿ 28 ಬ್ಯಾಟ್ಸ್’ಮನ್’ಗಳನ್ನು ಪೆವಿಲಿಯನ್’ಗೆ ಅಟ್ಟಿದ್ದಾರೆ. ಅದರಲ್ಲೂ 2007ರ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಪ್ರಮುಖ ಮೂರು ವಿಕೆಟ್ ಕಬಳಿಸುವುದರೊಂದಿಗೆ ಪಂದ್ಯ ಶ್ರೇಷ್ಠ ಗೌರವಕ್ಕೂ ಭಾಜನರಾಗಿದ್ದರು.