ಐದು ಟಿ-ಟ್ವೆಂಟಿ ಸರಣಿಯಲ್ಲಿ 3-1 ರ ಮೂಲಕ ಸರಣಿಯನ್ನ ಕೈವಶ ಮಾಡಿಕೊಂಡ ಟೀಂ ಇಂಡಿಯಾ

ಫ್ಲೋರಿಡಾ(ಆ.07):  ಆತಿಥೆಯ ವೆಸ್ಟ್‌ಇಂಡೀಸ್‌ ವಿರುದ್ಧದ 4 ನೇ ಪಂದ್ಯದಲ್ಲಿ ಭರ್ಜರಿ ಗೆಲವು ದಾಖಲಿಸುವ ಮೂಲಕ ಟೀಂ ಇಂಡಿಯಾ ಐದು ಟಿ-ಟ್ವೆಂಟಿ ಸರಣಿಯಲ್ಲಿ 3-1 ರ ಮೂಲಕ ಸರಣಿಯನ್ನ ಕೈವಶ ಮಾಡಿಕೊಂಡಿದೆ. ಟಾಸ್‌ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಭಾರತ ತಂಡಕ್ಕೆ ರೋಹಿತ್‌ ಶರ್ಮಾ(33) ಸೂರ್ಯಕುಮಾರ್‌ ಯಾದವ್‌(24) ಭರ್ಜರಿ ಆರಂಭ ನೀಡಿದ್ದರು. ಇನ್ನು ನಂತರ ಬಂದ ದೀಪಲ್‌ ಹೂಡಾ(21), ರಿಷಬ್‌ ಪಂತ್‌(44), ಸಂಜು ಸ್ಯಾಮ್ಸನ್‌(30), ಕಾರ್ತಿಕ್‌(6) ಹಾಗೂ ಅಕ್ಷರ್‌ ಪಟೇಲ್‌(20) ರನ್‌ ಗಳಿಸುವ ಮೂಲಕ ಭಾರತ 5 ವಿಕೆಟ್‌ ಕಳೆದುಕೊಂಡು 191 ರನ್‌ ಪೇರಿಸಿತ್ತು. 

ವಿಂಡೀಸ್‌ ತಂಡದ ಪರ ಅಕೇಲ್ ಹೊಸೈನ್(1), ಒಬೆಡ್ ಮೆಕಾಯ್ ಹಾಗೂ ಅಲ್ಜಾರಿ ಜೋಸೆಫ್ ತಲಾ ವಿಕೆಟ್‌ ಕಬಳಿಸಿದ್ದರು. 

Commonwealth Games 2022: ಇತಿಹಾಸ ನಿರ್ಮಿಸಿದ ಭಾರತ ಮಹಿಳಾ ಕ್ರಿಕೆಟ್‌ ತಂಡ!

ಭಾರತ ನೀಡಿದ 192 ರನ್‌ಗಳ ಬೃಹತ್‌ ಗುರಿ ಬೆನ್ನತ್ತಿದ್ದ ವಿಂಡೀಸ್‌ ತಂಡದ ಆರಂಭಿಕ ಆಟಗಾರರಾದ ಬ್ರಂಡನ್ ಕಿಂಗ್(13) ಹಾಗೂ ಕೈಲ್ ಮೇಯರ್ಸ್(14) ರನ್‌ ಗಳಿಸಿ ಔಟಾದರು. ಇನ್ನು ನಂತರ ಬಂದ ನಿಕೋಲಾಸ್‌ ಪೂರನ್‌(24),ರೋವ್ಮನ್ ಪೊವೆಲ್(24), ಶಿಮ್ರಾನ್ ಹೆಟ್ಮೆಯರ್(19), ಜೇಸನ್‌ ಹೋಲ್ಡರ್‌(13) ಗಳಿಸಿ ತಂಡಕ್ಕೆ ನೆರವಾದರೂ ತಂಡ ಗೆಲವಿನ ದಡ ಸೇರಿಸುವಲ್ಲಿ ವಿಫಲರಾದರು. ಅಂತಿಮವಾಗಿ ವೆಸ್ಟ್‌ಇಂಡೀಸ್‌ ತಂಡ ಆಲ್‌ಔಟ್‌ ಆಗುವ ಮೂಲಕ ಸೋಲಿಗೆ ಶರಣಾಯಿತು.

ಭಾರತ ತಂಡದ ಅವೇಶ್‌ ಖಾನ್‌(2), ಅಕ್ಷರ್‌ ಪಟೇಲ್‌(2), ಅರ್ಶದೀಪ್‌ ಸಿಂಗ್‌(3), ರವಿ ಬಿನ್ಷೊಲ್‌ ತಲಾ 2 ವಿಕೆಟ್‌ ಪಡೆದು ಸಂಭ್ರಮಿಸಿದರು.