ಮೂರು ಪಂದ್ಯಗಳ ಸರಣಿಯಲ್ಲಿ ಮೊದಲ ಪಂದ್ಯ ಗೆಲ್ಲುವ ಮೂಲಕ ಭಾರತ ಶುಭಾರಂಭ ಮಾಡಿದೆ
ಟ್ರಿನಿಡ್ಯಾಡ್(ಜು.23): ವೆಸ್ಟ್‌ಇಂಡೀಸ್ ಹಾಗೂ ಭಾರತ ನಡುವಣ ಏಕದಿನ ಸರಣಿಯ ಮೊದಲನೇ ಪಂದ್ಯದಲ್ಲಿ ಟೀಂ ಇಂಡಿಯಾ ಜಯಭೇರಿ ಬಾರಿಸಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ ಮೊದಲ ಪಂದ್ಯ ಗೆಲ್ಲುವ ಮೂಲಕ ಭಾರತ ಶುಭಾರಂಭ ಮಾಡಿದೆ. ಟ್ರಿನಿಡ್ಯಾಡ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ವಿಂಡೀಸ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಭಾರತದ ಪರ ಆರಂಭಿಕ ಆಟಗಾರರಾದ ನಾಯಕ ಶಿಖರ್ ಧವನ್ ಆಕರ್ಷಕ 97 ರನ್ ಸಿಡಿಸಿ ಔಟ್ ಆಗುವ ಮೂಲಕ ಶತಕ ವಂಚಿತರಾದರು. ಇನ್ನು ಶುಭಮನ್ ಗಿಲ್ ಕೂಡ ನಾಯಕ ಶಿಖರ್ ಧವನ್‌ಗೆ ಉತ್ತಮ ಸಾಥ್ ನೀಡಿ 64 ರನ್ ಪೇರಿಸಿ ರನ್ ಔಟ್ ಆಗಿದ್ದರು. ನಂತರ ಬಂದ ಶ್ರೇಯಸ್ ಅಯ್ಯರ್ ಕೂಡ 54 ರನ್ ಸಿಡಿಸಿ ಮೋತಿಗೆ ವಿಕೆಟ್ ಒಪ್ಪಿಸಿದ್ದರು. ಇನ್ನು ನಂತರ ಬಂದ ಸೂರ್ಯಕುಮಾರ್ ಯಾದವ್, ಸ್ಯಾಮ್ಸನ್, ದೀಪಕ್ ಕೂಡ ಮತ್ತು ಅಕ್ಸರ್ ಪಟೇಲ್ ಉತ್ತಮ ರನ್ ಕಲೆ ಹಾಕಿ 7 ಕೆಳೆದುಕೊಂಡು ಟೀಂ ಇಂಡಿಯಾ 308 ರನ್ ಗಳಿಸಿತ್ತು.
WI VS IND ಧವನ್ ನಾಯಕನ ಆಟ, ವೆಸ್ಟ್ ಇಂಡೀಸ್‌ಗೆ ಬೃಹತ್ ಟಾರ್ಗೆಟ್!
ವಿಂಡೀಸ್ ಪರ ಅಲ್ಜಾರಿ ಜೋಸೆಫ್ 2 ವಿಕೆಟ್, ಮೋತಿ 2 ವಿಕೆಟ್, ರೊಮಾರಿಯೋ ಶೆಫರ್ಡ್ ಹಾಗೂ ಅಕೇಲ್ ಹೋಸೇನ್ ತಲಾ ಒಂದು ವಿಕೆಟ್ ಕಬಳಿಸಿದ್ದರು.
ಸವಾಲಿನ ಮೊತ್ತ ಬೆನ್ನತ್ತಿದ ವಿಂಡೀಸ್ ತಂಡದ ಆರಂಭಿಕ ಆಟಗಾರರಾದ ಶಾಯ್ ಹೋಪ್ ಕೇವಲ 7 ರನ್ ಗಳಿಸಿ ಔಟಾದರು. ನಂತರ ಬಂದ ಶಮರ್ ಬ್ರೂಕ್ಸ್ ಕೂಡ 46 ರನ್ ಗಳಿಸಿ ಶಾರ್ದೂಲ್ ಠಾಕೂರ್‌ಗೆ ವಿಕೆಟ್ ಒಪ್ಪಿಸಿದರು. ಕೈಲ್ ಮೇಯರ್ಸ್ 75 ರನ್ ಗಳಿಸಿ ನಿರ್ಮಿಸಿದ್ದರು. ಬ್ರಂಡನ್ ಕಿಂಗ್(54) ನಿಕೋಲಸ್ ಪೂರನ್ 24 ರನ್ ಗಳಿಸಿ ಔಟಾದರು. ರೊಮಾರಿಯೋ ಶೆಫರ್ಡ್ ಹಾಗೂ ಅಕೇಲ್ ಹೋಸೇನ್ ಉತ್ತರ ಆಡಿದರಾದರು ವಿಂಡೀಸ್ ತಂಡ ಗೆಲವು ಪಡೆಯಲು ಸಫಲರಾಗಲಿಲ್ಲ. ಅಂತಿಮವಾಗಿ ವಿಂಡೀಸ್ ತಂಡ 305 ಗಳಿಸುವ ಮೂಲಕ ಸೋಲಿಗೆ ಶರಣಾಯಿತು.
ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲನೇ ಪಂದ್ಯ ಗೆಲ್ಲುವ ಮೂಲಕ ಟೀಂ ಇಂಡಿಯಾ 1-0 ಮುನ್ನಡೆಯನ್ನ ಸಾಧಿಸಿದೆ. ಭಾರತದ ಪರ ಮೊಹಮ್ಮದ್ ಸಿರಾಜ್(2), ಶಾರ್ದೂಲ್ ಠಾಕೂರ್(2), ಯಜುವೇಂದ್ರ ಚಹಾಲ್(2) ತಲಾ ಎರಡು ವಿಕೆಟ್ ಕಬಳಿಸಿದ್ದಾರೆ. ಪಂದ್ಯದ ಕೊನೆಯ ಎಸೆತದವರರೆಗೂ ತೀವ್ರ ಕುತೂಹಲ ಕೆರಳಿಸಿತ್ತು. ಎರಡನೇ ಪಂದ್ಯ ಜು.24 ರಂದು ಟ್ರಿನಿಡ್ಯಾಡ್‌ನಲ್ಲಿ ನಡೆಯಲಿದೆ.
