* ಭಾರತ ಹಾಗೂ ಆಸ್ಟ್ರೇ;ಲಿಯಾ ಮಹಿಳಾ ಕ್ರಿಕೆಟ್ ತಂಡಗಳ ನಡುವೆ ಚೊಚ್ಚಲ ಪಿಂಕ್‌ ಬಾಲ್ ಟೆಸ್ಟ್‌* ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾರಿಂದ ಮಾಹಿತಿ* ಆಸ್ಟ್ರೇಲಿಯಾ ವಿರುದ್ದ ಬರೋಬ್ಬರಿ 15 ವರ್ಷಗಳ ಬಳಿಕ ಮೊದಲ ಟೆಸ್ಟ್‌ ಪಂದ್ಯವಾಡಲಿರುವ ಭಾರತ ಮಹಿಳಾ ತಂಡ

ನವದೆಹಲಿ(ಮೇ.21): ಭಾರತ ಮಹಿಳಾ ಕ್ರಿಕೆಟ್‌ ತಂಡ ಸೆಪ್ಟೆಂಬರ್ 30ರಿಂದ ಮೊದಲ ಬಾರಿಗೆ ಹಗಲು-ರಾತ್ರಿ ಟೆಸ್ಟ್‌ ಪಂದ್ಯವನ್ನಾಡಲಿದೆ. ಆಸ್ಪ್ರೇಲಿಯಾ ವಿರುದ್ಧ ಪರ್ತ್‌ನಲ್ಲಿ ಪಂದ್ಯ ನಡೆಯಲಿದೆ ಎಂದು ಬಿಸಿಸಿಐ ಕಾರ‍್ಯದರ್ಶಿ ಜಯ್‌ ಶಾ, ಗುರುವಾರ ತಿಳಿಸಿದ್ದಾರೆ. 

ಮಹಿಳಾ ಕ್ರಿಕೆಟ್‌ ಇತಿಹಾಸದಲ್ಲಿ ನಡೆಯಲಿರುವ 2ನೇ ಪಿಂಕ್‌ ಬಾಲ್‌ ಟೆಸ್ಟ್ ಪಂದ್ಯ ಇದಾಗಲಿದೆ. ಈ ಮೊದಲು 2017ರಲ್ಲಿ ಇಂಗ್ಲೆಂಡ್‌ ಹಾಗೂ ಆಸ್ಪ್ರೇಲಿಯಾ ತಂಡಗಳು ಸಿಡ್ನಿಯಲ್ಲಿ ಹಗಲು-ರಾತ್ರಿ ಟೆಸ್ಟ್‌ ಆಡಿದ್ದವು. ಆ ಪಂದ್ಯ ಡ್ರಾಗೊಂಡಿತ್ತು. ಆಸ್ಪ್ರೇಲಿಯಾ ಪ್ರವಾಸದಲ್ಲಿ ಭಾರತ 3 ಏಕದಿನ, 3 ಟಿ20 ಪಂದ್ಯಗಳ ಸರಣಿಯನ್ನೂ ಆಡಲಿದೆ.

Scroll to load tweet…
Scroll to load tweet…

ಆಸೀಸ್‌ ಪ್ರವಾಸದಲ್ಲಿ ಏಕೈಕ ಟೆಸ್ಟ್ ಪಂದ್ಯವಾಡಲಿದೆ ಭಾರತ ತಂಡ

ಭಾರತ ಹಾಗೂ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡಗಳ ನಡುವೆ ನಡುವೆ ಬರೋಬ್ಬರಿ 15 ವರ್ಷಗಳ ಬಳಿಕ ಮೊದಲ ಟೆಸ್ಟ್‌ ಪಂದ್ಯ ಇದು ಎನಿಸಿಲಿದೆ. ಮಿಥಾಲಿ ರಾಜ್‌ ನೇತೃತ್ವದ ಭಾರತ ಟೆಸ್ಟ್ ತಂಡವು ಇಂಗ್ಲೆಂಡ್‌ ವಿರುದ್ದ ಜೂನ್‌ 16ರಂದು ಟೆಸ್ಟ್ ಪಂದ್ಯವನ್ನಾಡಲು ಸಜ್ಜಾಗಿದೆ. ಬರೋಬ್ಬರಿ 7 ವರ್ಷಗಳ ಬಳಿಕ ಭಾರತ ಮಹಿಳಾ ಕ್ರಿಕೆಟ್ ತಂಡವು ಮೊದಲ ಟೆಸ್ಟ್‌ ಪಂದ್ಯ ಆಡಲಿದೆ.