ಭಾರತ ಮಹಿಳಾ ತಂಡದ ಆಟಗಾರ್ತಿ ವನಿತಾ ವಿಆರ್ ಎಲ್ಲಾ ಮಾದರಿ ಕ್ರಿಕೆಟ್‌ಗೆ ಹೆಮ್ಮೆಯ ಕನ್ನಡತಿ ವಿದಾಯ 2014ರಲ್ಲಿ ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದ್ದ ವನಿತಾ
ಬೆಂಗಳೂರು(ಫೆ.21): ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ, ಹೆಮ್ಮೆಯ ಕನ್ನಡತಿ ವನಿತಾ ವಿಆರ್ ಎಲ್ಲಾ ಮಾದರಿ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. 2014ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ವನಿತಾ ಆರ್ ಭಾರತದ ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ಆಗಿ ಗುರುತಿಸಿಕೊಂಡಿದ್ದರು.
31ರ ಹರೆಯದ ವನಿತಾ ವಿಆರ್ ಟ್ವಿಟರ್ ಮೂಲಕ ಮಾಹಿತಿ ಬಹಿರಂಗ ಪಡಿಸಿದ್ದಾರೆ. ಇದೇ ವೇಳೆ ಕುಟುಂಬ ಸದಸ್ಯರು, ಮಾರ್ಗದರ್ಶಕರು, ಸ್ನೇಹಿತರು, ಮಹಿಳಾ ತಂಡದ ಜುಲನ್ ಗೋಸ್ವಾಮಿ, ಮಿಥಾಲಿ ರಾಜ್, ಕರ್ನಾಟಕ ಕ್ರಿಕೆಟ್ ಸೇರಿದಂತೆ ತಮ್ಮ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ.
ಆಸೀಸ್ ಸತತ 26 ಪಂದ್ಯಗಳ ಗೆಲುವಿನ ನಾಗಾಲೋಟಕ್ಕೆ ಭಾರತೀಯ ಮಹಿಳಾ ತಂಡ ಬ್ರೇಕ್..!
ಟಿ20 ಕ್ರಿಕೆಟ್‌ನಲ್ಲಿ ವನಿತಾ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದರೆ, ಏಕದಿನದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ಪ್ರತಿಭಾನ್ವಿತ ವನಿತಾಗೆ ಹೆಚ್ಚಿನ ಅವಕಾಶಗಳು ಒಲಿದು ಬರಲಿಲ್ಲ. ಟೀಂ ಇಂಡಿಯಾ ಪರ 6 ಏಕದಿನ ಹಾಗೂ 16 ಟಿ20 ಪಂದ್ಯಗಳನ್ನು ಆಡಿದ್ದಾರೆ. 6 ಏಕದಿನ ಪಂದ್ಯಗಳಿಂದ 85 ರನ್ ಸಿಡಿಸಿದ್ದರ, 16 ಟಿ20 ಪಂದ್ಯಗಳಿಂದ 216ರನ್ ಸಿಡಿಸಿದ್ದಾರೆ. ಟಿ20ಯಲ್ಲಿ 27 ಹಾಗೂ ಏಕದಿನದಲ್ಲಿ 41 ರನ್ ವನಿತಾ ಗರಿಷ್ಟ ಸ್ಕೋರ್.
ಕರ್ನಾಟಕ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದ ವನಿತಾಗೆ ಕೊನೆಗೆ ಅವಕಾಶಗಳು ಕಡಿಮೆಯಾಯಿತು. ಹೀಗಾಗಿ ಬಂಗಳಾ ಕ್ರಿಕಟ್ ತಂಡದ ಪರವೂ ವನಿತಾ ಆಡಿದ್ದಾರೆ. ಬಂಗಾಳ ಪರ ಉತ್ತಮ ಪ್ರದರ್ಶನ ನೀಡುವಲ್ಲಿ ವನಿತಾ ಯಶಸ್ವಿಯಾಗಿದ್ದಾರೆ. 2021-22ರ ಸಾಲಿನಲ್ಲಿ ನಡೆದ ಮಹಿಳಾ ಏಕದಿನ ಟ್ರೋಫಿ ಟೂರ್ನಿಯಲ್ಲಿ ಬಂಗಾಳ ತಂಡವನ್ನು ಸೆಮಿಫೈನಲ್ ಕೊಂಡೊಯ್ಯುವಲ್ಲಿ ವನಿತಾ ಮುಖ್ಯ ಪಾತ್ರ ನಿರ್ವಹಿಸಿದ್ದರು. ಹೈದರಾಬಾದ್ ವಿರುದ್ಧ 71 ಎಸೆತದಲ್ಲಿ 101 ರನ್ ಸಿಡಿಸಿದ್ದರೆ, ಆಂಧ್ರ ಪ್ರದೇಶ ವಿರುದ್ಧ 61 ರನ್ ಸಿಡಿಸಿದ್ದರು.
ಶ್ರೀಲಂಕಾ ವಿರುದ್ಧದ ಪಂದ್ಯದ ಮೂಲಕ ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದ ವನಿತಾ 2016ರಲ್ಲಿ ಕೊನೆಯ ಬಾರಿಗೆ ಟೀಂ ಇಂಡಿಯಾ ಪರ ಆಡಿದ್ದಾರೆ. ಬಳಿಕ ಟೀಂ ಇಂಡಿಯಾದಲ್ಲಿ ಅವಕಾಶ ವಂಚಿತರಾದ ವನಿತಾ, ದೇಸಿ ಕ್ರಿಕೆಟ್‌ಗೆ ಸೀಮಿತವಾಗಿದ್ದರು.
Women's Cricket: ಕ್ರಿಕೆಟ್ ವೃತ್ತಿಬದುಕಿನಲ್ಲಿ 20,000 ರನ್ ಪೂರೈಸಿದ ಮಿಥಾಲಿ ರಾಜ್!
19 ವರ್ಷಗಳ ಹಿಂದೆ ಕ್ರಿಕೆಟ್ ಆಡಲು ಆರಂಭಿಸಿದ್ದೆ. ಅಂದು ನಾನು ಕ್ರೀಡೆಯನ್ನು ಪ್ರೀತಿಸುವ ಸಣ್ಣ ಹುಡುಗಿಯಾಗಿದ್ದೆ. ಆದರೆ ಇಂದಿಗೂ ಕ್ರಿಕೆಟ್ ಮೇಲಿನ ಪ್ರೀತಿ ಹಾಗೇ ಇದೆ. ಆದರೆ ಈಗ ಮಾರ್ಗ ಬದಲಾಗಿದೆ. ನನ್ನ ಮನಸ್ಸು ಹೇಳುತ್ತಿದೆ ಕ್ರಿಕೆಟ್ ಆಡಲು, ಆದರೆ ದೇಹ ಕ್ರಿಕೆಟ್ ಆಟ ನಿಲ್ಲಿಸಲು ಹೇಳುತ್ತಿದೆ. ಹೀಗಾಗಿ ನಾನು ಎಲ್ಲಾ ಮಾದರಿ ಕ್ರಿಕೆಟ್‌ಗೆ ವಿದಾಯ ಹೇಳುತ್ತಿದ್ದೇನೆ ಎಂದು ತಮ್ಮ ಪತ್ರದಲ್ಲಿ ವನಿತಾ ವಿಆರ್ ಹೇಳಿದ್ದಾರೆ.
ಕ್ರಿಕೆಟ್ ಕರಿಯರ್‌ನಲ್ಲಿ ಹಲವು ಏರಿಳಿತಗಳನ್ನು ಕಂಡಿದ್ದೇನೆ. ಸಂತಸ, ಅಡೆ ತಡೆ ಸೇರಿದಂತೆ ಎಲ್ಲವನ್ನೂ ಕ್ರಿಕೆಟ್‌ನಿಂದ ಪಡೆದುಕೊಂಡಿದ್ದೇನೆ. ಭಾರತ ತಂಡವನ್ನು ಪ್ರತಿನಿಧಿಸಲು ಸಿಕ್ಕ ಅವಕಾಶಕ್ಕಾಗಿ ನಾನು ಯಾವತ್ತಿಗೂ ಕೃತಜ್ಞನಾಗಿದ್ದೇನೆ. ನಾನು ಕ್ರಿಕೆಟ್ ಆಟದಿಂದ ನಿವೃತ್ತಿ ತೆಗೆದುಕೊಳ್ಳುತ್ತಿದ್ದೆ. ಇದರೊಂದಿಗೆ ಹೊಸ ಸವಾಲುಗಳು ಆರಂಭಗೊಳ್ಳುತ್ತಿದೆ ಎಂದು ವನಿತಾ ವಿಆರ್ ಹೇಳಿದ್ದಾರೆ.
