* ಭಾರತ-ವೆಸ್ಟ್ ಇಂಡೀಸ್ ನಡುವಿನ ಸರಣಿ ಜುಲೈ 12ರಿಂದ ಆರಂಭ* ಎರಡು ಪಂದ್ಯಗಳ ಟೆಸ್ಟ್ ಸರಣಿ ಆಡಲಿರುವ ಉಭಯ ತಂಡಗಳು* ಟೆಸ್ಟ್ ಸರಣಿಯ ಸಂಪೂರ್ಣ ವೇಳಾಪಟ್ಟಿ ಹೀಗಿದೆ

ಡೊಮಿನಿಕಾ(ಜು.11): ವಿಶ್ವ ನಂ.1 ಟೆಸ್ಟ್ ತಂಡವಾದ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಸದ್ಯ ಕೆರಿಬಿಯನ್ ಪ್ರವಾಸದಲ್ಲಿದ್ದು, ವೆಸ್ಟ್ ಇಂಡೀಸ್ ಎದುರು ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲು ಸಜ್ಜಾಗಿದೆ. ಎರಡು ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯವು ಜುಲೈ 12ರಿಂದ ಇಲ್ಲಿನ ವಿಂಡ್ಸರ್ ಪಾರ್ಕ್‌ ಮೈದಾನದಲ್ಲಿ ಆರಂಭವಾಗಲಿದೆ. ಆತಿಥೇಯ ವೆಸ್ಟ್ ಇಂಡೀಸ್ ತಂಡವು ಸದ್ಯ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ 8ನೇ ಸಾಲಿನಲ್ಲಿದ್ದು, ತವರಿನಲ್ಲಿ ಬಲಿಷ್ಠ ಭಾರತ ತಂಡದ ಎದುರು ಸಾಮರ್ಥ್ಯ ಅನಾವರಣ ಮಾಡಬೇಕಾದ ಅಗ್ನಿಪರೀಕ್ಷೆಗೆ ಸಿಲುಕಿದೆ. 

ವೆಸ್ಟ್ ಇಂಡೀಸ್ ತಂಡವು ಇದೇ ಮೊದಲ ಬಾರಿಗೆ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಅರ್ಹತೆಗಿಟ್ಟಿಸಿಕೊಳ್ಳಲು ವಿಫಲವಾಗಿತ್ತು. ಸೀಮಿತ ಓವರ್‌ಗಳ ಕ್ರಿಕೆಟ್‌ಗೆ ಹೋಲಿಸಿದರೆ, ಟೆಸ್ಟ್ ಕ್ರಿಕೆಟ್ ವಿಭಿನ್ನ ಮಾದರಿಯದ್ದಾಗಿದೆ. ಹೀಗಾಗಿ ತವರಿನಲ್ಲಿ ಹೊಸ ಹುರುಪಿನೊಂದಿಗೆ ವೆಸ್ಟ್ ಇಂಡೀಸ್ ತಂಡವು ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ತನ್ನ ಜರ್ನಿ ಆರಂಭಿಸಲು ಸಜ್ಜಾಗಿದೆ.

ವಿಂಡೀಸ್‌ ಎದುರು ಮೊದಲ ಟೆಸ್ಟ್‌: ಪಾದಾರ್ಪಣೆ ಮಾಡಲು ಮೂವರು ಕ್ರಿಕೆಟಿಗರು ಫೈಟ್..! ಯಾರಿಗೆ ಸಿಗತ್ತೆ ಚಾನ್ಸ್?

ಇನ್ನೊಂದೆಡೆ ಟೀಂ ಇಂಡಿಯಾ, ಬರೋಬ್ಬರಿ ನಾಲ್ಕು ವರ್ಷಗಳ ಬಳಿಕ ಟೆಸ್ಟ್ ಪಂದ್ಯವನ್ನಾಡಲು ಕೆರಿಬಿಯನ್ ನಾಡಿಗೆ ಬಂದಿಳಿದಿದೆ. ಇತ್ತೀಚೆಗಷ್ಟೇ ಮುಕ್ತಾಯವಾದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಎದುರು 209 ರನ್‌ಗಳ ಹೀನಾಯ ಸೋಲು ಅನುಭವಿಸಿರುವ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಗಾಯಗೊಂಡ ಹುಲಿಯಂತೆ ಆಗಿದೆ. ಕೆಲವು ಯುವ ಆಟಗಾರರಿಗೆ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದ್ದು, ಟೀಂ ಮ್ಯಾನೇಜ್‌ಮೆಂಟ್ ನಂಬಿಕೆ ಉಳಿಸಿಕೊಳ್ಳಲು ಯುವ ಆಟಗಾರರು ಎದುರು ನೋಡುತ್ತಿದ್ದಾರೆ.

ಯಾವಾಗ? ಎಲ್ಲಿ ನೇರ ಪ್ರಸಾರ?:

ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಎರಡು ಟೆಸ್ಟ್ ಪಂದ್ಯಗಳು ಭಾರತೀಯ ಕಾಲಮಾನ ಸಂಜೆ 7.30ರಿಂದ ಆರಂಭವಾಗಲಿವೆ. ಭಾರತದಲ್ಲಿ ಕೇಬಲ್ ನೆಟ್‌ವರ್ಕ್‌ ಹೊಂದಿರುವವರು ಡಿಡಿ ಸ್ಪೋರ್ಟ್ಸ್‌ನಲ್ಲಿ ಪಂದ್ಯವನ್ನು ವೀಕ್ಷಿಸಬಹುದು. ಆದರೆ ಡಿಟಿಎಚ್‌ ಚಂದಾದಾರರು ಡಿಡಿ ಸ್ಪೋರ್ಟ್ಸ್‌ನಲ್ಲಿ ಈ ಟೆಸ್ಟ್ ಪಂದ್ಯಗಳು ಪ್ರಸಾರವಾಗುವುದಿಲ್ಲ. ಇನ್ನು ಜಿಯೋ ಸಿನಿಮಾ ಆಪ್‌ನಲ್ಲಿ, ವೆಬ್‌ಸೈಟ್‌ನಲ್ಲಿ ಹಾಗೂ ಫ್ಯಾನ್‌ಕೋಡ್‌ನಲ್ಲಿ ಪಂದ್ಯ ವೀಕ್ಷಿಸಬಹುದು. ಜಿಯೋ ಸಿನಿಮಾ ಆಪ್‌ನಲ್ಲಿ ಈ ಟೆಸ್ಟ್ ಪಂದ್ಯಗಳನ್ನು ಉಚಿತವಾಗಿ ವೀಕ್ಷಿಸಲು ಅವಕಾಶ ನೀಡಲಾಗಿದೆ.

ಯಾರ್ಕರ್ ಸ್ಪೆಷಲಿಸ್ಟ್​ ಜಸ್ಪ್ರೀತ್ ಬುಮ್ರಾ ಕಮ್​ಬ್ಯಾಕ್​ಗೆ ಮುಹೂರ್ತ ಫಿಕ್ಸ್..!

ಟೆಸ್ಟ್ ಸರಣಿಗೆ ಭಾರತ ತಂಡ ಹೀಗಿದೆ:

ರೋಹಿತ್ ಶರ್ಮಾ(ನಾಯಕ), ಶುಭ್‌ಮನ್‌ ಗಿಲ್‌, ಶುಭ್‌ಮನ್‌ ಗಿಲ್‌, ಋತುರಾಜ್ ಗಾಯಕ್ವಾಡ್‌, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್‌, ಅಜಿಂಕ್ಯ ರಹಾನೆ(ಉಪನಾಯಕ), ಕೆ ಎಸ್ ಭರತ್(ವಿಕೆಟ್ ಕೀಪರ್), ಇಶಾನ್‌ ಕಿಶನ್‌(ವಿಕೆಟ್‌ ಕೀಪರ್), ರವಿಚಂದ್ರನ್ ಅಶ್ವಿನ್‌, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಮೊಹಮ್ಮದ್ ಸಿರಾಜ್, ಮುಕೇಶ್ ಕುಮಾರ್, ಜಯದೇವ್ ಉನಾದ್ಕತ್, ನವದೀಪ್ ಸೈನಿ.

ಮೊದಲ ಟೆಸ್ಟ್‌ಗೆ ವೆಸ್ಟ್‌ ಇಂಡೀಸ್‌ ತಂಡ ಹೀಗಿದೆ:

ಕ್ರೆಗ್ ಬ್ರಾಥ್‌ವೇಟ್‌(ನಾಯಕ), ಜೆರ್ಮೈನ್‌ ಬ್ಲಾಕ್‌ವುಡ್‌(ಉಪನಾಯಕ), ಎಲಿಕ್ ಅಥಂಜೆ, ಜೋಮೆಲ್ ವಾರ್ವಿಕನ್, ತೇಗ್‌ನಾರಾಯಣ್‌ ಚಂದ್ರಪಾಲ್, ರಾಕೀಂ ಕಾರ್ನ್‌ವಾಲ್, ಜೋಶ್ವಾ ಡಿ ಸಿಲ್ವಾ, ಶೆನೊನ್‌ ಗೇಬ್ರಿಯಲ್‌, ಜೇಸನ್ ಹೋಲ್ಡರ್, ಅಲ್ಜರಿ ಜೋಸೆಫ್‌, ರೈಮನ್‌ ರೀಫರ್, ಕೀಮರ್ ರೋಚ್‌, ಜೊಮೆಲ್‌ ವಾರ್ರಿಕನ್‌.