Asianet Suvarna News Asianet Suvarna News

IND vs SA: ಡೇವಿಡ್‌ ಮಿಲ್ಲರ್‌ ಸಾರಥ್ಯದಲ್ಲಿ ಕಣಕ್ಕಿಳಿದ ದಕ್ಷಿಣ ಆಫ್ರಿಕಾ

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಅಂತಿಮ ಪಂದ್ಯ ದೆಹಲಿಯಲ್ಲಿ ಆರಂಭವಾಗಿದ್ದು, ಟಾಸ್‌ ಗೆದ್ದ ಟೀಮ್‌ ಇಂಡಿಯಾ ನಾಯಕ ಶಿಖರ್‌ ಧವನ್‌ ಫೀಲ್ಡಿಂಗ್‌ ನಿರ್ಣಯ ಮಾಡಿದ್ದಾರೆ.

India vs South Africa Shikhar Dhawan Won the toss opt to bowl san
Author
First Published Oct 11, 2022, 2:13 PM IST

ನವದೆಹಲಿ (ಅ.11): ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಅಂತಿಮ ಪಂದ್ಯ ದೆಹಲಿಯ ಫಿರೋಜ್‌ ಷಾ ಕೋಟ್ಲಾ ಮೈದಾನದಲ್ಲಿ ಆರಂಭವಾಗಿದೆ. ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಹಾಗೂ 2ನೇ ಪಂದ್ಯದಲ್ಲಿ ಭಾರತ ತಂಡ ಗೆಲುವು ಸಾಧಿಸಿದ್ದು, ಅರುಣ್‌ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಅಂತಿಮ ಪಂದ್ಯದಲ್ಲಿ ವಿಜೇತರ ನಿರ್ಣಯವಾಗಲಿದೆ. ಟೀಮ್‌ ಇಂಡಿಯಾ ನಾಯಕ ಶಿಖರ್‌ ಧವನ್‌, ಟಾಸ್‌ ಗೆದ್ದಿದ್ದು ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡಿದ್ದಾರೆ. ಹಾಲಿ ಏಕದಿನ ಸರಣಿಯ ಮೊದಲ ಎರಡು ಏಕದಿನ ಪಂದ್ಯಗಳಲ್ಲಿ ಟೆಂಬಾ ಬವುಮಾ ತಂಡವನ್ನು ಮುನ್ನಡೆಸಿದ್ದರೆ, ಕೊನೆಯ ಪಂದ್ಯಕ್ಕೆ ಡೇವಿಡ್‌ ಮಿಲ್ಲರ್‌ ನಾಯಕರಾಗಿದ್ದರು. ಮೊದಲು ಬ್ಯಾಟಿಂಗ್ ಮಾಡಿರುವ ದಕ್ಷಿಣ ಆಫ್ರಿಕಾ ತಂಡ ಆರಂಭದಲ್ಲಿಯೇ ಆಘಾತ ಕಂಡಿದ್ದು, ಅನುಭವಿ ಬ್ಯಾಟ್ಸ್‌ಮನ್‌ ಕ್ವಿಂಟನ್‌ ಡಿ ಕಾಕ್‌ 10 ಎಸೆತಗಳಲ್ಲಿ 6 ರನ್ ಬಾರಿಸಿ ವಾಷ್ಟಿಂಗ್ಟನ್‌ ಸುಂದರ್‌ ಎಸೆತದಲ್ಲಿ ಆವೇಶ್‌ ಖಾನ್‌ಗೆ ಕ್ಯಾಚ್‌ ನೀಡಿ ಹೊರನಡೆದರು. ಸರಣಿಯಲ್ಲಿ ಗೆಲುವು ಸಾಧಿಸುವ ವಿಶ್ವಾಸದಲ್ಲಿರುವ ಟೀಮ್‌ ಇಂಡಿಯಾ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ದಕ್ಷಿಣ ಆಫ್ರಿಕಾ ತಂಡದಲ್ಲಿ ಮೂರು ಬದಲಾವಣೆ: ನಿರ್ಣಾಯಕ ಪಂದ್ಯಕ್ಕಾಗಿ ದಕ್ಷಿಣ ಆಫ್ರಿಕಾ ತಂಡದಲ್ಲಿ ಮೂರು ಪ್ರಮುಖ ಬದಲಾವಣೆಯನ್ನು ಮಾಡಲಾಗಿದೆ. ಟಾಸ್‌ ವೇಳೆ ಮಾತನಾಡಿದ ನಾಯಕ ಡೇವಿಡ್‌ ಮಿಲ್ಲರ್‌, "ತಂಡದ ನಾಯಕನಾಗಿ ಆಡುವುದು ಬಹಳ ಹೆಮ್ಮೆಯ ವಿಚಾರ. ನಾವೂ ಕೂಡ ಮೊದಲು ಬೌಲಿಂಗ್‌ ಮಾಡಬೇಕು ಎಂದು ನಿರ್ಧರಿಸಿದ್ದೆವು. ಕೆಲವು ಅಟಗಾರರು ಅನಾರೋಗ್ಯಕ್ಕೆ ಈಡಾಗಿದ್ದಾರೆ. ಕೇಶವ್‌ ಮಹಾರಾಜ್‌, ತಬರೇಜ್‌ ಶಮ್ಸಿ ಹಾಗೂ ಟೆಂಬಾ ಬವುಮಾ (Temba Bavuma) ಕೂಡ ಅನಾರೋಗ್ಯಕ್ಕೆ ತುತ್ತಾಗಿರುವ ಕಾರಣ ಅವರ ಬದಲು ಬೇರೆ ಆಟಗಾರರನ್ನು ಆಯ್ಕೆ ಮಾಡಿದ್ದೇವೆ' ಎಂದು ಹೇಳಿದರು.

ಭಾರತದಲ್ಲಿ ದ್ವಿಪಕ್ಷೀಯ ಸರಣಿಯಲ್ಲಿ (bilateral series In India) ಗೆಲುವು ಸಾಧಿಸುವುದು ಬಹಳ ಕಷ್ಟ, ಅದರಲ್ಲೂ ಏಕದಿನ ಸರಣಿಯಲ್ಲಿ (ODI Series) ಬಹುತೇಕ ಅಸಾಧ್ಯ ಎಂದೇ ಹೇಳಬಹುದು. ಈ ಪಂದ್ಯದಲ್ಲಿ ತಂಡ ಗೆಲುವು ಸಾಧಿಸಿದರೆ, ವಿಶ್ವಕಪ್‌ಗೆ ಇದರ ವಿಶ್ವಾಸದಲ್ಲಿಯೇ ಆಡಬಹುದು. ಭಾರತದಂಥ (Team India) ದೇಶದಲ್ಲಿ ದ್ವಿಪಕ್ಷೀಯ ಸರಣಿ ಗೆಲುವು ಕಾಣುವುದು ಆಟದ ಮೇಲೆ ಬಹಳ ವಿಶ್ವಾಸ ತುಂಬುತ್ತದೆ. ಬ್ಯಾಟ್ಸ್‌ಮನ್‌ಗಳು ಇನ್ನೂ ಜವಾಬ್ದಾರಿಯಿಂದ ಆಡಬೇಕಿದೆ. ಬೌಲರ್‌ಗಳು ಕೂಡ ಅಷ್ಟೇ ಸ್ಮಾರ್ಟ್‌ ಆಗಿ ಬೌಲಿಂಗ್ ನಡೆಸಬೇಕು. ಇಡೀ ಸರಣಿಯಲ್ಲಿ ನಮ್ಮ ಕೆಟ್ಟ ಬ್ಯಾಟಿಂಗ್‌ ನಿರ್ವಹಣೆ ಬಂದಿದ್ದು, ಮೊದಲ ಟಿ20 ಪಂದ್ಯದಲ್ಲಿ ಮಾತ್ರ. ಆದರೆ. ಮತ್ತೆಲ್ಲಾ ಪಂದ್ಯಗಳಲ್ಲಿ ಉತ್ತಮವಾಗಿ ಆಡಿದ್ದೇವೆ. ನಮ್ಮ ಪ್ರಮುಖ ಗಮನ ಬೌಲಿಂಗ್ ಕಡೆ ಇರುತ್ತದೆ. ಇಂದಿನ ಪಂದ್ಯದಲ್ಲಿ ನಮ್ಮ ಬೌಲಿಂಗ್‌ ಆಕ್ರಮಣಕಾರಿಯಾಗಿ ಇರೋದನ್ನು ನೀವು ಗಮನಿಸುತ್ತೀರಿ ಎಂದು ದಕ್ಷಿಣ ಆಫ್ರಿಕಾ (South Africa) ತಂಡದ ಕೋಚ್‌ ಮಾರ್ಕ್‌ ಬೌಷರ್‌ ಹೇಳಿದ್ದಾರೆ.

Team India ಪಂದ್ಯ ಗೆದ್ದ ಬಳಿಕ ದಕ್ಷಿಣ ಆಫ್ರಿಕಾ ನಾಯಕ ಕೇಶವ್ ಮಹರಾಜ್‌ಗೆ ಥ್ಯಾಂಕ್ಸ್‌ ಹೇಳಿದ ಶಿಖರ್ ಧವನ್‌..!

ದಕ್ಷಿಣ ಆಫ್ರಿಕಾ  ಪ್ಲೇಯಿಂಗ್‌ ಇಲೆವೆನ್‌:  ಕ್ವಿಂಟನ್ ಡಿ ಕಾಕ್ (ವಿ.ಕೀ), ಜಾನ್ನೆಮನ್ ಮಲನ್, ರೀಜಾ ಹೆಂಡ್ರಿಕ್ಸ್, ಏಡೆನ್‌ ಮಾರ್ಕ್ರಾಮ್, ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್ (ನಾಯಕ), ಮಾರ್ಕೊ ಜಾನ್ಸೆನ್, ಆಂಡಿಲ್ ಪೆಹ್ಲುಕ್‌ವಾಯೋ, ಜಾರ್ನ್ ಫೋರ್ಚುಯಿನ್, ಲುಂಗಿ ಎನ್‌ಗಿಡಿ, ಆನ್ರಿಚ್ ನಾರ್ಟ್ಜೆ.

IND vs SA ಅಯ್ಯರ್ ಸೆಂಚುರಿ, ಸೌತ್ ಆಫ್ರಿಕಾ ವಿರುದ್ಧ ಭಾರತಕ್ಕೆ ಗೆಲುವಿನ ನಗಾರಿ!

ಭಾರತ ಪ್ಲೇಯಿಂಗ್‌ ಇಲೆವೆನ್‌: ಶಿಖರ್ ಧವನ್ (ನಾಯಕ), ಶುಭಮನ್ ಗಿಲ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್ (ವಿ.ಕೀ), ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಅವೇಶ್ ಖಾನ್.

Follow Us:
Download App:
  • android
  • ios