INDvsSA ಏಕದಿನ ಪಂದ್ಯಕ್ಕೆ ಮಳೆ ಅಡ್ಡಿ: ಪಂದ್ಯ ನಡೆಯುತ್ತಾ? ಗೊಂದಲಕ್ಕೆ ಇಲ್ಲಿದೆ ಉತ್ತರ!
ಭಾರತ ಹಾಗೂ ಸೌತ್ ಆಫ್ರಿಕಾ ಏಕದಿನ ಸರಣಿಯ ಮೊದಲ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. ನಿರಂತರ ಸುರಿದ ಮಳೆಯಿಂದ ಮೈದಾನ ಸಂಪೂರ್ಣ ಒದ್ದೆಯಾಗಿದೆ. 1 ಗಂಟೆಗೆ ನಡೆಯಬೇಕಿದ್ದ ಟಾಸ್ ಪ್ರಕ್ರಿಯೆ ಇದೀಗ ವಿಳಂಬವಾಗಿದೆ. ಸದ್ಯ ಅಭಿಮಾನಿಗಳಲ್ಲಿ ಪಂದ್ಯ ನಡೆಯುತ್ತಾ ಅಥವಾ ರದ್ದಾಗುತ್ತಾ ಅನ್ನೋ ಗೊಂದಲಕ್ಕೆ ಇಲ್ಲಿದೆ ಉತ್ತರ
ಧರ್ಮಶಾಲಾ(ಮಾ.12): ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಏಕದಿನ ಸರಣಿಗೆ ಆರಂಭಲ್ಲಿ ಕೊರೋನಾ ವೈರಸ್ ಆತಂಕ ತಟ್ಟಿತ್ತು. ಆದರೆ ಬಿಸಿಸಿಐ ಮುತುವರ್ಜಿ ವಹಿಸಿರುವ ಕಾರಣ ಪಂದ್ಯ ಆಯೋಜನೆಗೆ ತೊಡಕಾಗಲಿಲ್ಲ. ಆದರೆ ಮೊದಲ ಪಂದ್ಯಕ್ಕೆ ಮಳೆ ಅಡ್ಡಿಯಾದ ಕಾರಣ ಪಂದ್ಯ ಇನ್ನೂ ಆರಂಭಗೊಂಡಿಲ್ಲ.
ಭಾರತ-ಸೌತ್ ಆಫ್ರಿಕಾ 1ನೇ ಏಕದಿನ; ಇಲ್ಲಿದೆ ಸಂಭವನೀಯ ತಂಡ!.
1 ಗಂಟೆಗೆ ನಡೆಯಬೇಕಿದ್ದ ಟಾಸ್ ಪ್ರಕ್ರಿಯೆ ವಿಳಂಬವಾಗಿದೆ. ಸದ್ಯ ಮಳೆ ನಿಂತಿದ್ದೂ, ಮೈದಾನದ ಕವರ್ ತೆಗೆಯಲಾಗಿದೆ. ಆದರೆ ಪಿಚ್‌ಗೆ ಹಾಕಲಾಗಿದ್ದ ಕವರ್ ಉಳಿಸಲಾಗಿದೆ. ಅಂಪೈರ್ ಹಾಗೂ ಮ್ಯಾಚ್ ರೆಫ್ರಿ ಮೈದಾನದ ತಪಾಸಣೆ ನಡೆಸಿದ್ದಾರೆ. ಒದ್ದೆಯಾಗಿರುವ ಮೈದಾನದಲ್ಲಿನ ನೀರನ್ನು ಹೊರಹಾಕುವ ಕಾರ್ಯ ನಡೆಯುತ್ತಿದೆ. 6.30 ಕಟ್ ಆಫ್ ಟೈಮ್ ನೀಡಿದ್ದಾರೆ. 6.30ರ ಒಳಗೆ ಪಂದ್ಯ ಆರಂಭವಾಗದಿದ್ದರೆ, ಬಳಿಕ 20-20 ಓವರ್ ಪಂದ್ಯ ಆಯೋಜಿಸಲಾಗುತ್ತೆ.
ಧರ್ಮಶಾಲಾದಲ್ಲಿಂದು ಇಂಡೋ-ಆಫ್ರಿಕಾ ಮೊದಲ ಒನ್ ಡೇ ಮ್ಯಾಚ್
ಮೊದಲ ಪಂದ್ಯ ಆರಂಭಿಕ ಭಾಗ ಮಳೆಗೆ ಆಗುತಿಯಾದ ಕಾರಣ ಇದೀಗ ಅಭಿಮಾನಿಗಳ ಚಿತ್ತ ಇನ್ನುಳಿದ ಪಂದ್ಯಗಳತ್ತ ನೆಟ್ಟಿದೆ. 2ನೇ ಏಕದಿನ ಪಂದ್ಯ ಮಾರ್ಚ್ 15 ರಂದು ಲಕ್ನೋದಲ್ಲಿ ನಡೆಯಲಿದೆ. ಇನ್ನು 3 ಹಾಗೂ ಅಂತಿಮ ಏಕದಿನ ಪಂದ್ಯ ಮಾರ್ಚ್ 18 ರಂದು ಕೋಲ್ಕತಾದಲ್ಲಿ ನಡೆಯಲಿದೆ.
ಮಾರ್ಚ್ 12ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ