ಧರ್ಮಶಾಲಾ(ಮಾ.11): ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿ ಹಾಗೂ ಟೆಸ್ಟ್  ಸರಣಿ ಕೈಚೆಲ್ಲಿ ಟೀಕೆ ಎದುರಿಸಿದ ಟೀಂ ಇಂಡಿಯಾ ಇದೀಗ ಸೌತ್ ಆಫ್ರಿಕಾ ವಿರುದ್ಧ ಅಬ್ಬರಿಸಲು ರೆಡಿಯಾಗಿದೆ. ತವರಿನ ಸರಣಿಯಲ್ಲಿ ದಿಟ್ಟ ಪ್ರದರ್ಶನ ನೀಡಿ ಟೀಕೆಗೆ ಉತ್ತರಿಸುವ ಲೆಕ್ಕಾಚಾರದಲ್ಲಿದೆ. ಧರ್ಮಶಾಲಾದಲ್ಲಿ ನಡೆಯಲಿರುವ ಮೊದಲ ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ.

ಕೊರೋನಾ ಪರಿಣಾಮ, INDvsSA ಮೊದಲ ಪಂದ್ಯದ ಟಿಕೆಟ್ ಅನ್‌ಸೋಲ್ಡ್!

ಕೊರೋನಾ ವೈರಸ್ ಭೀತಿಯ ನಡುವೆಯೂ ಸರಣಿ ಆಯೋಜಿಸಲು ಬಿಸಿಸಿಐ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ. ಕ್ರೀಡಾಂಗಣದಲ್ಲಿ ವೈದ್ಯರ ತಂಡ, ಶುಚಿತ್ವ ಕಾಪಾಡಲು ವ್ಯವಸ್ಥೆಗಳನ್ನು ಮಾಡಿದೆ. ಇನ್ನು ಆಟಗಾರರಿಗೆ ಕಟ್ಟು ನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ. ಅಭಿಮಾನಿಗಳ ಜೊತೆಗೆ ಕೈಕುಲುಕುವ, ಸೆಲ್ಫಿ ತೆಗೆದುಕೊಳ್ಳುವ ಅವಕಾಶ ನಿರಕರಿಸಲಾಗಿದೆ. 

ಕೊರೋನಾ ವೈರಸ್ ಆತಂಕ; IPL ವೇಳಾಪಟ್ಟಿಯಲ್ಲಿ ಕೊಂಚ ಬದಲಾವಣೆ?

ಮೈದಾನದಲ್ಲಿ ಹೆಚ್ಚಿನ ಭದ್ರತೆಯನ್ನು ಕೈಗೊಳ್ಳಲಾಗಿದೆ. ಇದೀಗ ಈ ಮಹತ್ವದ ಪಂದ್ಯ ಬಲಿಷ್ಠ ತಂಡವವನ್ನು ಕಣಕ್ಕಿಳಿಸಲು ಟೀಂ ಇಂಡಿಯಾ ನಿರ್ಧರಿಸಿದೆ. ಭಾರತ ಸಂಭವನೀಯ ತಂಡದ ವಿವರ ಇಲ್ಲಿದೆ.

ಭಾರತ ಸಂಭವನೀಯ ತಂಡ:
ಪೃಥ್ವಿ ಶಾ, ಶಿಖರ್ ಧವನ್, ವಿರಾಟ್ ಕೊಹ್ಲಿ,  ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಯಜುವೇಂದ್ರ ಚಹಾಲ್, ಕುಲ್ದೀಪ್ ಯಾದವ್, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ