ಮಳೆಯಿಂದಾಗಿ 19 ಓವರ್‌ಗೆ ಸಮೀತಗೊಳಿಸಿದ ಪಂದ್ಯ ಪಂದ್ಯ ಆರಂಭಗೊಂಡ ಬೆನ್ನಲ್ಲೇ 2 ವಿಕೆಟ್ ಪತನ ಇದೀಗ ಮತ್ತೆ ಮಳೆ ಅಡ್ಡಿ, ಪಂದ್ಯ ಸ್ಥಗಿತ

ಬೆಂಗಳೂರು(ಜೂ.19): ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ 5ನೇ ಹಾಗೂ ಅಂತಿಮ ಟಿ20 ಪಂದ್ಯಕ್ಕೆ ಮತ್ತೆ ಮಳೆ ಅಡ್ಡಿಯಾಗಿದೆ. ಪಂದ್ಯ ಆರಂಭಗೊಂಡ 3.3 ಓವರ್ ಮುಗಿಯುವಷ್ಟರಲ್ಲೇ ಮತ್ತೆ ಮಳೆ ವಕ್ಕರಿಸಿದೆ. ಇದರಿದ ಪಂದ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಟಾಸ್ ಬೆನ್ನಲ್ಲೇ ಮಳೆ ಅಡ್ಡಿಪಡಿಸಿತು. ಹೀಗಾಗಿ 7 ಗಂಟೆಗೆ ಆರಂಭವಾಗಬೇಕಿದ್ದ ಪಂದ್ಯ 7.50ಕ್ಕೆ ಆರಂಭಗೊಂಡಿತ್ತು.ಪಂದ್ಯ ವಿಳಂಬವಾದ ಕಾರಣ 19 ಓವರ್‌ಗೆ ಸೀಮಿತಗೊಳಿಸಲಾಯಿತು. ಟಾಸ್ ಸೋತು ಬ್ಯಾಟಿಂಗ್ ಇಳಿದ ಟೀಂ ಇಂಡಿಯಾ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಆತಂಕ ಎದುರಿಸಿತು.

IND vs SA ಬೆಂಗಳೂರು ಪಂದ್ಯದಲ್ಲಿ ಟಾಸ್ ಗೆದ್ದ ಸೌತ್ ಆಫ್ರಿಕಾ!

ಇಶಾನ್ ಕಿಶನ್ ಕೇವಲ 15 ರನ್ ಸಿಡಿಸಿ ಔಟಾದರು. ಇತ್ತ ರುತುರಾಜ್ ಗಾಯಕ್ವಾಡ್ 10 ರನ್ ಸಿಡಿಸಿ ಔಟಾದರು. ಎರಡನೇ ವಿಕೆಟ್ ಪತನವಾಗುತ್ತಿದ್ದಂತೆ ಮತ್ತೆ ಮಳೆ ಆರಂಭವಾಯಿತು. ನಾಯಕ ರಿಷಬ್ ಪಂತ್ ಒಂದು ಎಸೆತ ಎದುರಿಸುತ್ತಿದ್ದಂತೆ ಮಳೆ ಜೋರಾಯಿತು.

ಮಳೆ ಕಾರಣದಿಂದ ಪಂದ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಪಂದ್ಯ ವಿಳಂಬವಾಗುತ್ತಿದ್ದಂತೆ ಮತ್ತೆ ಓವರ್ ಕಡಿತಗೊಳ್ಳಲಿದೆ. ಸದ್ಯ ಮಳೆ ಸುರಿಯುತ್ತಿದ್ದು ಪಂದ್ಯ ಆರಂಭಕ್ಕಾಗಿ ಕಾಯುತ್ತಿದ್ದಾರೆ. ಮಳೆ ನಿಂತ ಬಳಿಕ ಮೈದಾನ ಸಜ್ಜುಗೊಳಿಸಿ ಪಂದ್ಯ ಆರಂಭಗೊಳ್ಳಲಿದೆ.

ಸದ್ಯ ಟೀಂ ಇಂಡಿಯಾ 3.3 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 28ರನ್ ಸಿಡಿಸಿದೆ. ಶ್ರೇಯಸ್ ಅಯ್ಯರ್ ಒಂದು ಎಸೆತ ಎದಿರಿಸಿದ್ದಾರೆ. ಆದರೆ ಖಾತೆ ತೆರೆದಿಲ್ಲ. ಇತ್ತ ನಾಯಕ ರಿಷಬ್ ಪಂತ್ 1 ಎಸೆತದಲ್ಲಿ ಅಜೇಯ 1 ರನ್ ಸಿಡಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣ ಬ್ಯಾಟಿಂಗ್‌ ಸ್ನೇಹಿ ಪಿಚ್‌ ಆಗಿದ್ದು, ಇಲ್ಲಿ ನಡೆದ 7 ಟಿ20 ಪಂದ್ಯಗಳಲ್ಲಿ 5ರಲ್ಲಿ ರನ್‌ ಬೆನ್ನತ್ತಿದ ತಂಡ ಗೆಲುವು ಸಾಧಿಸಿದೆ. ಸಣ್ಣ ಬೌಂಡರಿಗಳಿರುವ ಕಾರಣ ರನ್‌ ಹೊಳೆಯೇ ಹರಿಯುವ ನಿರೀಕ್ಷೆ ಇತ್ತು. ಆದರೆ ಮಳೆಯಿಂದಾಗಿ ಮೈದಾನ ಒದ್ದೆಯಾಗಿದೆ. ಹೀಗಾಗಿ ಬ್ಯಾಟ್ಸ್‌ಮನ್‌ಗಳ ರನ್ ಗಳಿಸಲು ಹೆಚ್ಚಿನ ಶ್ರಮ ಹಾಕಬೇಕಿದೆ. ವಿಕೆಟ್ ಉಳಿಸಿಕೊಂಡು ಬ್ಯಾಟಿಂಗ್ ಮಾಡುವುದೇ ದೊಡ್ಡ ಸಾವಲಾಗಲಿದೆ. ಸದ್ಯ ಮಳೆ ನಡುವೆ ಬ್ಯಾಾಟಿಂಗ್ ಮಾಡಿದ ಭಾರತ ಆರಂಭದಲ್ಲೇ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಸದ್ಯ ಮಳೆ ಮುಂದುವರಿದಿದೆ. ಹೀಗಾಗಿ ಅಭಿಮಾನಿಗಳು ಮಳೆಗೆ ಹಿಡಿ ಶಾಪ ಹಾಕುತ್ತಿದ್ದಾರೆ.

IND vs SA 2 ವರ್ಷಗಳ ಬಳಿಕ ಬೆಂಗಳೂರಿನಲ್ಲಿ ಪಂದ್ಯ, ಕ್ರೀಡಾಂಗಣ ಸುತ್ತ ಭಾರಿ ಭದ್ರತೆ!

ಯುವ ಕ್ರಿಕೆಟಿಗರೊಂದಿಗೆ ಸರಣಿ ಆಡುತ್ತಿರುವ ಭಾರತ ಮೊದಲೆರಡು ಪಂದ್ಯಗಳನ್ನು ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ವೈಫಲ್ಯದಿಂದ ಕಳೆದುಕೊಂಡಿತ್ತು. ಆದರೆ ಕಳೆದೆರಡು ಪಂದ್ಯಗಳಲ್ಲಿ ತಂಡ ಸಂಘಟಿತ ಪ್ರದರ್ಶನ ತೋರುತ್ತಿದ್ದು, ಅದೇ ಆಟ ಮುಂದುವರಿಸುವ ನಿರೀಕ್ಷೆಯಲ್ಲಿದೆ. ಇಶಾನ್‌ ಕಿಶಾನ್‌, ಋುತುರಾಜ್‌ ಗಾಯಕ್ವಾಡ್‌, ಶ್ರೇಯಸ್‌ ಅಯ್ಯರ್‌ ಲಯ ಮುಂದುವರಿಸಲು ಎದುರು ನೋಡುತ್ತಿದ್ದು, ಪಂತ್‌ ನಾಯಕತ್ವ ಒತ್ತಡದಿಂದ ಹೊರಬಂದು ಸ್ಫೋಟಕ ಆಟದ ನಿರೀಕ್ಷೆಯಲ್ಲಿದ್ದಾರೆ. ಹಾರ್ದಿಕ್‌ ಪಾಂಡ್ಯ, ದಿನೇಶ್‌ ಕಾರ್ತಿಕ್‌ ಅಬ್ಬರಿಸಿದರೆ ದ.ಆಫ್ರಿಕಾಕ್ಕೆ ಉಳಿಗಾಲವಿಲ್ಲ. ಇವರಿಬ್ಬರ ಅಬ್ಬರದ ಪ್ರದರ್ಶನಕ್ಕೆ ಕಡಿವಾಣ ಹಾಕುವುದೇ ದ.ಆಫ್ರಿಕಾ ಬೌಲರ್‌ಗಳಿಗೆ ಸವಾಲಾಗಿ ಪರಿಣಮಿಸಿದೆ.