ಟೀಂ ಇಂಡಿಯಾ ಕಳೆದ 11 ವರ್ಷಗಳಿಂದಲೂ ತವರಿನಲ್ಲಿ ಅಜೇಯವಾಗಿದ್ದು, ಯಾವುದೇ ಟೆಸ್ಟ್‌ ಸರಣಿ ಸೋತಿಲ್ಲ. ಕೊನೆ ಬಾರಿ 2012ರಲ್ಲಿ ತಂಡಕ್ಕೆ ತವರಲ್ಲಿ ಸೋಲು ಎದುರಾಗಿದ್ದು ಇಂಗ್ಲೆಂಡ್‌ ವಿರುದ್ಧವೇ. ಈಗ ಅದೇ ಇಂಗ್ಲೆಂಡ್‌ ವಿರುದ್ಧ ಮತ್ತೆ ಭಾರತ ಸೆಣಸಲಿದ್ದು, ಕ್ರೀಡಾಭಿಮಾನಿಗಲ್ಲಿ ಭಾರೀ ಕುತೂಹಲ ಮನೆ ಮಾಡಿದೆ.

ಹೈದರಾಬಾದ್(ಜ.25) ಹೈವೋಲ್ಟೇಜ್‌ ಸರಣಿಯ ಮೊದಲ ಪಂದ್ಯಕ್ಕೆ ಹೈದ್ರಾಬಾದ್‌ ಆತಿಥ್ಯ ವಹಿಸಿದೆ. ಭಾರತದ ಸ್ಪಿನ್‌ ಬಾಲ್‌ vs ಇಂಗ್ಲೆಂಡ್‌ನ ಬಾಜ್‌ಬಾಲ್‌ ಕದನ ಕುತೂಹಲ ಕೆರಳಿಸಿದೆ. ಭಾರತದ ತವರಿನ ಜಯದ ಓಟಕ್ಕೆ ಬ್ರೇಕ್‌ ಹಾಕಲು ಇಂಗ್ಲೆಂಡ್‌ ಕೂಡಾ ಕಾತರವಾಗಿದೆ. ಇತ್ತಂಡದಲ್ಲೂ ತಲಾ 3 ತಜ್ಞ ಸ್ಪಿನ್ನರ್ಸ್‌ ಕಣಕ್ಕೆ ಇಳಿಯಲಿದ್ದು, ದಿಗ್ಗಜ ಬ್ಯಾಟರ್‌ ವಿರಾಟ್‌ ಕೊಹ್ಲಿ ಗೈರಾಗಲಿದ್ದಾರೆ.

ಹೈದರಾಬಾದ್‌: ಒಂದೆಡೆ ತವರಿನಲ್ಲಿ ತನ್ನನ್ನು ಟೆಸ್ಟ್‌ನಲ್ಲಿ ಸೋಲಿಸುವವರೇ ಇಲ್ಲ ಎಂಬಂತೆ ಮೆರೆದಾಡುತ್ತಿರುವ ಟೀಂ ಇಂಡಿಯಾ. ಮತ್ತೊಂದೆಡೆ ‘ಬಾಜ್‌ಬಾಲ್‌’ ಹೆಸರಿನಲ್ಲಿ ಆಕ್ರಮಣಕಾರಿ ಆಟದ ಮೂಲಕ ಟೆಸ್ಟ್‌ ಕ್ರಿಕೆಟ್‌ನ ಶೈಲಿಯನ್ನೇ ಬದಲಿಸಿರುವ ಬಲಿಷ್ಠ ಇಂಗ್ಲೆಂಡ್‌. ಎರಡೂ ತಂಡಗಳು ಸ್ಪಿನ್ನರ್‌ಗಳ ಸ್ವರ್ಗವೆನಿಸಿರುವ ಪಿಚ್‌ಗಳಲ್ಲಿ ಪರಸ್ಪರ ಎದುರಾದರೆ ಏನಾಗಬಹುದು ಎಂಬುದಕ್ಕೆ ಗುರುವಾರದಿಂದ ಉತ್ತರ ಸಿಗಲಿದೆ. ಭಾರತ-ಇಂಗ್ಲೆಂಡ್‌ ನಡುವಿನ 5 ಪಂದ್ಯಗಳ ಹೈವೋಲ್ಟೇಜ್‌ ಟೆಸ್ಟ್‌ ಸರಣಿಗೆ ವೇದಿಕೆ ಸಜ್ಜುಗೊಂಡಿದ್ದು, ಗುರುವಾರ ಆರಂಭಗೊಳ್ಳಲಿರುವ ಮೊದಲ ಪಂದ್ಯಕ್ಕೆ ಹೈದ್ರಾಬಾದ್‌ ಆತಿಥ್ಯ ವಹಿಸಲಿದೆ.

'ಇನ್ನಾದರೂ...?' ಶೋಯೆಬ್ ಮಲಿಕ್ ಮದುವೆಯಾಗಿದ್ದನ್ನ ಲೇವಡಿ ಮಾಡಿದ ಶಾಹಿದ್ ಅಫ್ರಿದಿ..! ಏನಂದ್ರು ನೀವೇ ನೋಡಿ

ಟೀಂ ಇಂಡಿಯಾ ಕಳೆದ 11 ವರ್ಷಗಳಿಂದಲೂ ತವರಿನಲ್ಲಿ ಅಜೇಯವಾಗಿದ್ದು, ಯಾವುದೇ ಟೆಸ್ಟ್‌ ಸರಣಿ ಸೋತಿಲ್ಲ. ಕೊನೆ ಬಾರಿ 2012ರಲ್ಲಿ ತಂಡಕ್ಕೆ ತವರಲ್ಲಿ ಸೋಲು ಎದುರಾಗಿದ್ದು ಇಂಗ್ಲೆಂಡ್‌ ವಿರುದ್ಧವೇ. ಈಗ ಅದೇ ಇಂಗ್ಲೆಂಡ್‌ ವಿರುದ್ಧ ಮತ್ತೆ ಭಾರತ ಸೆಣಸಲಿದ್ದು, ಕ್ರೀಡಾಭಿಮಾನಿಗಲ್ಲಿ ಭಾರೀ ಕುತೂಹಲ ಮನೆ ಮಾಡಿದೆ.

ಸ್ಪಿನ್ನರ್‌ಗಳ ಅಧಿಪತ್ಯ: ಹೈದರಾಬಾದ್ ಪಿಚ್‌ ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವು ನೀಡಲಿರುವ ಕಾರಣ ಇತ್ತಂಡಗಳೂ ತಲಾ 3 ತಜ್ಞ ಸ್ಪಿನ್ನರ್‌ಗಳನ್ನು ಕಣಕ್ಕಿಳಿಸಲಿದೆ. ಭಾರತ ತಂಡದಲ್ಲಿ ಆರ್‌.ಅಶ್ವಿನ್‌, ರವೀಂದ್ರ ಜಡೇಜಾ ಆಡಲಿದ್ದು, 3ನೇ ಸ್ಪಿನ್ನರ್‌ ಸ್ಥಾನಕ್ಕೆ ಅಕ್ಷರ್‌ ಪಟೇಲ್‌ ಹಾಗೂ ಕುಲ್ದೀಪ್‌ ಯಾದವ್‌ ನಡುವೆ ಪೈಪೋಟಿ ಇದೆ. ಆದರೆ ಬ್ಯಾಟಿಂಗ್‌ ಕಾರಣಕ್ಕೆ ಅಕ್ಷರ್‌ಗೆ ಅವಕಾಶ ಲಭಿಸಬಹುದು. ಇನ್ನು, ವೈಯಕ್ತಿಕ ಕಾರಣಕ್ಕೆ ವಿರಾಟ್‌ ಕೊಹ್ಲಿ ಈ ಪಂದ್ಯ ಸೇರಿ ಮೊದಲೆರಡು ಪಂದ್ಯ ಆಡುವುದಿಲ್ಲ. ಹೀಗಾಗಿ ಶ್ರೇಯಸ್‌ ಅಯ್ಯರ್‌ ತಂಡದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಆರಂಭಿಕರಾಗಿ ನಾಯಕ ರೋಹಿತ್‌ ಶರ್ಮಾ ಜೊತೆ ಯಶಸ್ವಿ ಜೈಸ್ವಾಲ್ ಆಡುವ ನಿರೀಕ್ಷೆಯಿದ್ದು, ಶುಭ್‌ಮನ್‌ ಗಿಲ್‌ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿಯಬಹುದು. ಕೆ.ಎಲ್‌.ರಾಹುಲ್‌ ಕೇವಲ ಬ್ಯಾಟರ್‌ ಆಗಿಯೇ ಆಡಲಿರುವ ಕಾರಣ ಕೆ.ಎಸ್‌.ಭರತ್‌ ವಿಕೆಟ್‌ ಕೀಪಿಂಗ್ ಮಾಡಬಹುದು. ಬೂಮ್ರಾ, ಮೊಹಮದ್‌ ಸಿರಾಜ್‌ ಭಾರತದ 2 ವೇಗದ ಬೌಲಿಂಗ್‌ ಆಯ್ಕೆಗಳು.

ಭಾರತದಿಂದ ವಿಶ್ವಕಪ್ ಕಿತ್ತುಕೊಂಡ ಆಸೀಸ್ ಕ್ರಿಕೆಟಿಗನಿಗೆ ವಕ್ಕರಿಸಿದ ಕೊರೋನಾ ವೈರಸ್..!

ಸವಾಲಿಗೆ ಇಂಗ್ಲೆಂಡ್‌ ಸಿದ್ಧ: ಭಾರತದ ಸವಾಲು ಹಿಮ್ಮೆಟ್ಟಿಸಲು ಅತ್ತ ಇಂಗ್ಲೆಂಡ್‌ ಕೂಡಾ ಸಜ್ಜಾಗಿದ್ದು, ಕಠಿಣ ಅಭ್ಯಾಸದೊಂದಿಗೆ ಭಾರತಕ್ಕೆ ಆಗಮಿಸಿದೆ. ಹಲವು ಯುವ ಆಟಗಾರರನ್ನೊಳಗೊಂಡ ತಂಡದಲ್ಲಿ ವಿಶ್ವ ಶ್ರೇಷ್ಠ, ಅನುಭವಿ ಆಟಗಾರರೂ ಇದ್ದಾರೆ. ಈಗಾಗಲೇ ಮೊದಲ ಪಂದ್ಯಕ್ಕೆ ಆಡುವ 11ರ ಬಳಗವನ್ನೂ ಪ್ರಕಟಿಸಿದೆ. ಆಕ್ರಮಣಕಾರಿ ಆಟಕ್ಕೆ ಹೆಸರುವಾಸಿಯಾಗಿರುವ ಇಂಗ್ಲೆಂಡ್‌, ಭಾರತದ ನೆಲದಲ್ಲಿ ಹೇಗೆ ಸ್ಪಿನ್‌ ಸವಾಲನ್ನು ಎದುರಿಸಲಿದೆ ಎಂಬ ಕುತೂಹಲವಿದೆ.

ಆಟಗಾರರ ಪಟ್ಟಿ

ಭಾರತ(ಸಂಭವನೀಯ): ರೋಹಿತ್‌(ನಾಯಕ), ಜೈಸ್ವಾಲ್‌, ಶುಭ್‌ಮನ್‌, ಶ್ರೇಯಸ್‌, ರಾಹುಲ್‌, ಭರತ್‌, ಜಡೇಜಾ, ಅಕ್ಷರ್‌, ಅಶ್ವಿನ್‌, ಬೂಮ್ರಾ, ಸಿರಾಜ್‌.

ಇಂಗ್ಲೆಂಡ್(ಆಡುವ 11): ಜ್ಯಾಕ್‌ ಕ್ರಾವ್ಲಿ, ಡಕೆಟ್‌, ಓಲಿ ಪೋಪ್‌, ರೂಟ್‌, ಬೇರ್‌ಸ್ಟೋವ್‌, ಸ್ಟೋಕ್ಸ್‌, ಬೆನ್‌ ಫೋಕ್ಸ್‌, ರಿಹಾನ್‌, ಹಾರ್ಟ್ಲೆ, ವುಡ್‌, ಜ್ಯಾಕ್‌ ಲೀಚ್‌

ಒಟ್ಟು ಮುಖಾಮುಖಿ: 131

ಭಾರತ: 31

ಇಂಗ್ಲೆಂಡ್‌: 50

ಡ್ರಾ: 50

ಪಿಚ್‌ ರಿಪೋರ್ಟ್:

ಹೈದ್ರಾಬಾದ್‌ ಪಿಚ್‌ ಸಾಮಾನ್ಯವಾಗಿ ಬ್ಯಾಟರ್‌ಗಳಿಗೆ ಹೆಚ್ಚಿನ ನೆರವು ನೀಡಿದರೂ, ಬೌಲರ್‌ಗಳೂ ಯಶಸ್ಸು ಸಾಧಿಸಿದ ಉದಾಹರಣೆ ಇದೆ. ಪಂದ್ಯ ಸಾಗಿದಂತೆ ಹೆಚ್ಚು ತಿರುವು ಉಂಟಾಗಲಿದ್ದು, ಸ್ಪಿನ್ನರ್‌ಗಳೇ ಮೇಲುಗೈ ಸಾಧಿಸುವ ಸಾಧ್ಯತೆ ಹೆಚ್ಚು.

ಪಂದ್ಯ ಆರಂಭ: ಬೆಳಗ್ಗೆ 9.30ಕ್ಕೆ, 
ನೇರಪ್ರಸಾರ: ಜಿಯೋ ಸಿನಿಮಾ, ಸ್ಪೋರ್ಟ್ಸ್‌ 18.