Asianet Suvarna News Asianet Suvarna News

ಇಂಗ್ಲೆಂಡ್‌ಗೆ ಮೊದಲ ಟೆಸ್ಟಲ್ಲೇ ಭಾರತದಿಂದ ಸ್ಪಿನ್‌ ಪರೀಕ್ಷೆ? ರಾಹುಲ್ ದ್ರಾವಿಡ್‌

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದ್ರಾವಿಡ್‌, ‘ಪಿಚ್‌ ಬಗ್ಗೆ ಈಗಲೇ ನಿರ್ಧಾರಕ್ಕೆ ಬರುವುದು ಕಷ್ಟ. ಪಂದ್ಯ ಸಾಗಿದಂತೆ ಪಿಚ್‌ ಹೇಗೆ ವರ್ತಿಸಲಿದೆ ಎಂಬುದು ಗೊತ್ತಾಗಲಿದೆ. ಆದರೆ ಪಿಚ್‌ ಸ್ವಲ್ಪ ತಿರುವು ಇರಬಹುದು. ಪಂದ್ಯ ಸಾಗಿದಂತೆ ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವು ನೀಡಬಹುದು’ ಎಂದಿದ್ದಾರೆ.

India vs England Hyderabad pitch a good one but may spin a little bit says Rahul Dravid kvn
Author
First Published Jan 24, 2024, 1:40 PM IST

ಹೈದರಾಬಾದ್‌(ಜ.24): 5 ಪಂದ್ಯಗಳ ಟೆಸ್ಟ್‌ ಸರಣಿ ಆಡಲು ಭಾರತಕ್ಕೆ ಆಗಮಿಸಿರುವ ಇಂಗ್ಲೆಂಡ್‌ ತಂಡಕ್ಕೆ ನಿರೀಕ್ಷೆಯಂತೆಯೇ ಆರಂಭಿಕ ಟೆಸ್ಟ್‌ನಲ್ಲಿ ಸ್ಪಿನ್‌ ಸವಾಲು ಎದುರಾಗುವ ಸಾಧ್ಯತೆಯಿದೆ. ಈ ಬಗ್ಗೆ ಕೆಲ ಮಾಧ್ಯಮಗಳಲ್ಲಿ ವರದಿಯಾಗಿದ್ದು, ಜೊತೆಗೆ ಭಾರತ ತಂಡದ  ನಾಯಕ ರಾಹುಲ್‌ ದ್ರಾವಿಡ್‌ ಕೂಡಾ ಪಿಚ್‌ ಸ್ಪಿನ್ನರ್‌ಗಳಿಗೆ ನೆರವಾಗುವ ಸುಳಿವು ನೀಡಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದ್ರಾವಿಡ್‌, ‘ಪಿಚ್‌ ಬಗ್ಗೆ ಈಗಲೇ ನಿರ್ಧಾರಕ್ಕೆ ಬರುವುದು ಕಷ್ಟ. ಪಂದ್ಯ ಸಾಗಿದಂತೆ ಪಿಚ್‌ ಹೇಗೆ ವರ್ತಿಸಲಿದೆ ಎಂಬುದು ಗೊತ್ತಾಗಲಿದೆ. ಆದರೆ ಪಿಚ್‌ ಸ್ವಲ್ಪ ತಿರುವು ಇರಬಹುದು. ಪಂದ್ಯ ಸಾಗಿದಂತೆ ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವು ನೀಡಬಹುದು’ ಎಂದಿದ್ದಾರೆ.

Breaking: ಇಂಗ್ಲೆಂಡ್ ಎದುರಿನ ಮೊದಲೆರಡು ಟೆಸ್ಟ್‌ ಪಂದ್ಯದಿಂದ ಕೊನೆಯ ಕ್ಷಣದಲ್ಲಿ ಹಿಂದೆ ಸರಿದ ವಿರಾಟ್ ಕೊಹ್ಲಿ..!

ರಾಹುಲ್‌ ವಿಕೆಟ್‌ ಕೀಪರ್‌ ಅಲ್ಲ

ಇಂಗ್ಲೆಂಡ್‌ ವಿರುದ್ಧದ ಸರಣಿಯಲ್ಲಿ ಕೆ.ಎಲ್‌.ರಾಹುಲ್‌ ವಿಕೆಟ್‌ ಕೀಪರ್‌ ಆಗಿ ಆಡಲ್ಲ ಎಂದು ಕೋಚ್‌ ದ್ರಾವಿಡ್‌ ಖಚಿತಪಡಿಸಿದ್ದಾರೆ. ರಾಹುಲ್‌ ತಜ್ಞ ಬ್ಯಾಟರ್ ಆಗಿ ಆಡಿಸುತ್ತೇವೆ. ತಂಡದಲ್ಲಿರುವ ಇತರ ಇಬ್ಬರನ್ನು(ಕೆ.ಎಸ್‌.ಭರತ್‌ ಮತ್ತು ಧ್ರುವ್‌ ಜುರೆಲ್‌) ವಿಕೆಟ್‌ ಕೀಪರ್‌ ಸ್ಥಾನಕ್ಕೆ ಪರಿಗಣಿಸುತ್ತೇವೆ ಎಂದು ದ್ರಾವಿಡ್‌ ತಿಳಿಸಿದ್ದಾರೆ.

ವಿರಾಟ್ ಕೊಹ್ಲಿ ಬದಲು ರಜತ್ ಪಾಟೀದಾರ್ ಟೀಂ ಇಂಡಿಯಾಗೆ ಸೇರ್ಪಡೆ

ಹೈದರಾಬಾದ್: ವೈಯುಕ್ತಿಕ ಕಾರಣದಿಂದಾಗಿ ಇಂಗ್ಲೆಂಡ್ ವಿರುದ್ದದ ಮೊದಲ ಎರಡು ಟೆಸ್ಟ್ ಪಂದ್ಯಗಳಿಗೆ ವಿರಾಟ್ ಕೊಹ್ಲಿ ಗೈರಾಗಿರುವ ಕಾರಣ ಅವರ ಬದಲು ರಜತ್ ಪಾಟೀದಾರ್ ಭಾರತ ಕ್ರಿಕೆಟ್ ತಂಡಕ್ಕೆ ಸೇರಿದ್ದಾರೆ. ದೇಶಿ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನದ ಮೂಲಕ ಮಿಂಚಿರುವ ಪಾಟೀದಾರ್, ಇದೀಗ ಆಯ್ಕೆಗಾರರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ವಿರಾಟ್ ಕೊಹ್ಲಿ ಇಂಗ್ಲೆಂಡ್ ಎದುರಿನ ಮೂರನೇ ಟೆಸ್ಟ್ ಪಂದ್ಯದ ವೇಳೆಗೆ ಭಾರತ ಕ್ರಿಕೆಟ್ ತಂಡವನ್ನು ಕೂಡಿಕೊಳ್ಳುವ ಸಾಧ್ಯತೆಯಿದೆ.

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯವು ಜನವರಿ 25ರಿಂದ ಹೈದರಾಬಾದ್‌ನಲ್ಲಿ ಆರಂಭವಾಗಲಿದೆ. ಇನ್ನು ಇದಾದ ಬಳಿಕ ಫೆಬ್ರವರಿ ಎರಡರಿಂದ ವೈಜಾಗ್, ರಾಜ್‌ಕೋಟ್, ರಾಂಚಿ ಹಾಗೂ ಕೊನೆಯ ಟೆಸ್ಟ್ ಪಂದ್ಯವು ಮಾರ್ಚ್‌ 7-11ರ ವರೆಗೆ ಧರ್ಮಶಾಲಾದಲ್ಲಿ ನಡೆಯಲಿದೆ.

ಇಂಗ್ಲೆಂಡ್ ಎದುರಿನ ಮೊದಲೆರಡು ಟೆಸ್ಟ್‌ಗೆ ಇಂಗ್ಲೆಂಡ್ ತಂಡ ಹೀಗಿದೆ:

ರೋಹಿತ್ ಶರ್ಮಾ (ನಾಯಕ ), ಶುಭ್‌ಮನ್‌ ಗಿಲ್, ಯಶಸ್ವಿ ಜೈಸ್ವಾಲ್, ರಜತ್ ಪಾಟೀದಾರ್, ಶ್ರೇಯಸ್‌ ಅಯ್ಯರ್, ಕೆಎಲ್ ರಾಹುಲ್ , ಕೆಎಸ್ ಭರತ್ (ವಿ.ಕೀ), ಧ್ರುವ್ ಜುರೆಲ್ (ವಿ.ಕೀ), ಆರ್ ಅಶ್ವಿನ್, ಆರ್ ಜಡೇಜಾ, ಅಕ್ಸರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್. ಸಿರಾಜ್, ಮುಖೇಶ್ ಕುಮಾರ್, ಜಸ್ಪ್ರೀತ್ ಬುಮ್ರಾ (ಉಪನಾಯಕ), ಅವೇಶ್ ಖಾನ್.
 

Follow Us:
Download App:
  • android
  • ios