Asianet Suvarna News Asianet Suvarna News

ಯಶಸ್ವಿ ಜೈಸ್ವಾಲ್ ಏಕಾಂಗಿ ಹೋರಾಟ, ಅಬ್ಬರಿಸಿದರೂ 6 ವಿಕೆಟ್ ಕಳೆದುಕೊಂಡ ಭಾರತ!

ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೊದಲ ದಿನ ಭಾರತ ದಿಟ್ಟ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ಆದರೆ ತಂಡದ ಪರ ಯಶಸ್ವಿ ಜೈಸ್ವಾಲ್ ದ್ವಿಶತಕದ ಸನಿಹದಲ್ಲಿದ್ದರೆ, ಇತರರಿಂದ ಉತ್ತಮ ಸಾಥ್ ಸಿಗಲಿಲ್ಲ. ದಿನದಾಟದ ಅಂತ್ಯಕ್ಕೆ ಭಾರತ 6 ವಿಕೆಟ್ ನಷ್ಟಕ್ಕೆ 336 ರನ್ ಸಿಡಿಸಿದೆ.

India vs England 2nd test Yashasvi Jaiswal 179 not out help India to score 336 in day 1 ckm
Author
First Published Feb 2, 2024, 6:08 PM IST

ವಿಶಾಖಪಟ್ಟಣಂ(ಫೆ.02) ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಮುಗ್ಗರಿಸಿದ ಟೀಂ ಇಂಡಿಯಾ ದ್ವಿತೀಯ ಪಂದ್ಯದ ಆರಂಭದಲ್ಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿದೆ. ಆದರೆ ಈ ಅಗ್ರೆಸ್ಸೀವ್ ಹೋರಾಟದಲ್ಲಿ ಯಶಸ್ವಿ ಜೈಸ್ವಾಲ್ ಯಶಸ್ವಿಯಾದರೆ, ಇನ್ನುಳಿದ ಬ್ಯಾಟ್ಸ್‌ಮನ್‌ಗಳು ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ವಿಶಾಖಪಟ್ಣಣಂನಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಭಾರತ 6 ವಿಕೆಟ್ ಕಳೆದುಕೊಂಡು 336 ರನ್ ಸಿಡಿಸಿದೆ. ಯಶಸ್ವಿ ಜೈಸ್ವಾಲ್ ಅಜೇಯ 179 ರನ್ ಸಿಡಿಸಿದ್ದರೆ, ಆರ್ ಅಶ್ವಿನ್ 5 ರನ್ ಸಿಡಿಸಿ ಕ್ರಿಸ್ ಕಾಯ್ದುಕೊಂಡಿದ್ದಾರೆ.

2ನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ನಾಯಕ ರೋಹಿತ್ ಶರ್ಮಾ ಹಾಗೂ ಯಶಸ್ವಿ ಜೈಸ್ವಾಲ್ ಹೋರಾಟ ಆರಂಭಗೊಂಡಿತು. ಆದರೆ ರೋಹಿತ್ ಶರ್ಮಾ 14 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. ಈ ಮೂಲಕ ಭಾರತ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಶುಬಮನ್ ಗಿಲ್ ಹೋರಾಟ ನೀಡಿದರೂ 34 ರನ್ ಗಡಿ ದಾಟಲಿಲ್ಲ.

Ind vs Eng: ವೈಜಾಗ್ ಟೆಸ್ಟ್‌ನಲ್ಲಿ ಯಶಸ್ವಿ ಜೈಸ್ವಾಲ್ ಭರ್ಜರಿ ಶತಕ, ಬೃಹತ್ ಮೊತ್ತದತ್ತ ಭಾರತ

ಯಶಸ್ವಿ ಜೈಸ್ವಾಲ್ ಏಕಾಂಗಿ ಹೋರಾಟ ನೀಡಿದರೆ, ಇತರರ ಬ್ಯಾಟಿಂಗ್ ಅಲ್ಪ ಮೊತ್ತಕ್ಕೆ ಸೀಮಿತವಾಗಿತ್ತು. ಆಕರ್ಷಕ ಶತಕ ಸಿಡಿಸಿ ಮಿಂಚಿದ ಜೈಸ್ವಾಲ್ ಭಾರತಕ್ಕೆ ನೆರವಾದರು. ಆದರೆ ಮತ್ತೊಂದೆಡೆ ವಿಕೆಟ್ ಪತನ ಮುಂದುವರಿದಿತ್ತು. ಶ್ರೇಯಸ್ ಅಯ್ಯರ್ 27 ಹಾಗೂ ರಜತ್ ಪಾಟೀದಾರ್ 32 ರನ್ ಸಿಡಿಸಿ ಔಟಾದರು. ಇತ್ತ ಜೈಸ್ವಾಲ್ 150 ರನ್ ಸಿಡಿಸಿ ದ್ವಿಶತಕದತ್ತ ದಾಪುಗಾಲಿಟ್ಟರು.

ಅಕ್ಸರ್ ಪಟೇಲ್ 27 ರನ್ ಸಿಡಿಸಿ ಮುಗ್ಗರಿಸಿದರೆ, ಶ್ರೀಕಾರ್ ಭರತ್ 17ರನ್ ಸಿಡಿಸಿ ಔಟಾದರು. ದಿನದಾಟದ ಅಂತ್ಯದ ವೇಳೆ ಜೈಸ್ವಾಲ್ ಅಜೇಯ 179 ರನ್ ಸಿಡಿಸಿದರು. ಭಾರತ 6 ವಿಕೆಟ್ ನಷ್ಟಕ್ಕೆ 336 ರನ್ ಸಿಡಿಸಿದೆ.

ಇಂಗ್ಲೆಂಡ್‌ ವಿರುದ್ಧ 3ನೇ ಟೆಸ್ಟ್‌ಗೂ ವಿರಾಟ್ ಕೊಹ್ಲಿ ಗೈರು?

ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ಬೃಹತ್ ಮೊತ್ತ ಸಿಡಿಸಿತ್ತು. ಆದರೆ ಇಂಗ್ಲೆಂಡ್ ಹೋರಾಟದ ಮುಂದೆ ಮಂಡಿಯೂರಿತ್ತು. ಗೆಲವು ಸಾಧಿಸುವ ಪಂದ್ಯವನ್ನು ಕೈಚೆಲ್ಲಿ ಕೂತಿತ್ತು. ಭಾರತ ನೆಲದಲ್ಲಿ ಟೆಸ್ಟ್ ಪಂದ್ಯ ಸೋತ ಮುಖಭಂಗ ಎದುರಿಸಿದೆ. 

Follow Us:
Download App:
  • android
  • ios