Asianet Suvarna News Asianet Suvarna News

ಮದುವೆ ಮನೆಯಲ್ಲಿ ಭಾರತ-ಇಂಗ್ಲೆಂಡ್‌ ಕ್ರಿಕೆಟ್ ನೇರ ಪ್ರಸಾರ: ಫೋಟೋ ವೈರಲ್

ಭಾರತ-ಇಂಗ್ಲೆಂಡ್‌ ನಡುವಿನ ಎರಡನೇ ಟೆಸ್ಟ್‌ ಪಂದ್ಯ ಮದುವೆ ಮನೆಯಲ್ಲಿ ಟಿವಿಯಲ್ಲಿ ನೇರಪ್ರಸಾರದ ವ್ಯವಸ್ಥೆ ಮಾಡಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

India vs England 1st Test Live Streams at Wedding Ceremony in Chennai Picture goes Viral kvn
Author
Chennai, First Published Feb 9, 2021, 9:37 AM IST

ಚೆನ್ನೈ(ಫೆ.09): ಸಾಮಾನ್ಯವಾಗಿ ಮದುವೆ ಮನೆಗಳಲ್ಲಿ ವಿವಾಹ ಕಾರ್ಯಕ್ರಮದ ವಿಡಿಯೋಗಳನ್ನು ಟೀವಿಗಳಲ್ಲಿ ಪ್ರಸಾರ ಮಾಡಲಾಗುತ್ತದೆ. ಆದರೆ ಮದುವೆ ಮನೆಗಳಲ್ಲಿ ಕ್ರಿಕೆಟ್‌ ಪಂದ್ಯದ ನೇರಪ್ರಸಾರ ಮಾಡುವುದು ಎಲ್ಲಾದರೂ ಕೇಳಿದ್ದೀರಾ?

ಭಾರತದಲ್ಲಿ ಕ್ರಿಕೆಟ್‌ ಅನ್ನು ಒಂದು ಧರ್ಮ ಎನ್ನುವಂತೆ ಆರಾಧಿಸುವ ವರ್ಗವೇ ಇದೆ. ಅದರಲ್ಲೂ ಆಧುನಿಕ ಡಿಜಿಟಲ್ ಜಗತ್ತಿನಲ್ಲಿ ಕ್ರಿಕೆಟ್‌ ಎನ್ನುವ ಜಂಟಲ್‌ಮನ್‌ ಕ್ರೀಡೆ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗುತ್ತಿದೆ. ಅದರಲ್ಲೂ ಬರೋಬ್ಬರಿ ವರ್ಷದ ಬಳಿಕ ಭಾರತದಲ್ಲಿ ನಡೆಯುತ್ತಿರುವ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯ ಸಾಕಷ್ಟು ರೋಚಕತೆ ಹುಟ್ಟುಹಾಕಿದೆ.

ಚೆನ್ನೈ ಟೆಸ್ಟ್‌: 100 ವರ್ಷಕ್ಕೂ ಹಳೆಯದಾದ ಅಪರೂಪದ ದಾಖಲೆ ಬ್ರೇಕ್‌ ಮಾಡಿದ ಅಶ್ವಿನ್‌..!

ಹೌದು, ಇಲ್ಲಿನ ಚೆಪಾಕ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್‌ ನಡುವಿನ ಚೆನ್ನೈ ಟೆಸ್ಟ್‌ ಪಂದ್ಯವನ್ನು ಸೋಮವಾರ ಇಲ್ಲಿನ ಮದುವೆಮನೆ ಆರತಕ್ಷತೆ ಕಾರ್ಯಕ್ರಮದಲ್ಲಿ ನೇರ ಪ್ರಸಾರ ಮಾಡಲಾಗಿದೆ. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ತವರಿನಲ್ಲಿ ದಾಖಲೆ ಬರೆದ ರವಿಚಂದ್ರನ್ ಅಶ್ವಿನ್‌: ಭಾರತ-ಇಂಗ್ಲೆಂಡ್‌ ನಡುವಿನ ಚೆನ್ನೈ ಟೆಸ್ಟ್ ಪಂದ್ಯದಲ್ಲಿ ಲೋಕಲ್ ಹೀರೋ ರವಿಚಂದ್ರನ್‌ ಅಶ್ವಿನ್‌ ಟೀಂ ಇಂಡಿಯಾ ಪಾಲಿಗೆ ಆಪತ್ಭಾಂಧವ ಎನಿಸಿಕೊಂಡರು. ಮೊದಲ ಇನಿಂಗ್ಸ್‌ನಲ್ಲಿ ಕೇವಲ 337 ರನ್‌ಗಳಿಗೆ ಆಲೌಟ್‌ ಆಗುವ ಮೂಲಕ ಆತಂಕದಲ್ಲಿ ಭಾರತಕ್ಕೆ ಅಶ್ವಿನ್‌ ಎರಡನೇ ಇನಿಂಗ್ಸ್‌ನ ಮೊದಲ ಎಸೆತದಲ್ಲೇ ವಿಕೆಟ್‌ ಕಬಳಿಸುವ ಮೂಲಕ ಪ್ರವಾಸಿ ಇಂಗ್ಲೆಂಡ್ ತಂಡಕ್ಕೆ ಶಾಕ್ ನೀಡಿದರು. ಅಲ್ಲದೇ ತವರಿನ ಪಿಚ್‌ನ ಲಾಭ ಪಡೆದ ಅಶ್ವಿನ್‌ ಕೇವಲ 61 ರನ್‌ ನೀಡಿ 6 ವಿಕೆಟ್‌ ಕಬಳಿಸುವ ಮೂಲಕ ಇಂಗ್ಲೆಂಡ್‌ ತಂಡ 178 ರನ್‌ ಗಳಿಗೆ ಆಲೌಟ್ ಮಾಡುವಲ್ಲಿ ಅಶ್ವಿನ್ ಪ್ರಮುಖ ಪಾತ್ರವಹಿಸಿದರು. ಚೆನ್ನೈ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 3 ಹಾಗೂ ಎರಡನೇ ಇನಿಂಗ್ಸ್‌ 6 ವಿಕೆಟ್‌ ಕಬಳಿಸುವ ಮೂಲಕ ಒಟ್ಟಾರೆ 9 ಬಲಿ ಪಡೆಯುವಲ್ಲಿ ಅಶ್ವಿನ್ ಯಶಸ್ವಿಯಾಗಿದ್ದಾರೆ. 

ಸದ್ಯ ಟೀಂ ಇಂಡಿಯಾ ಗೆಲ್ಲಲು 420 ರನ್‌ಗಳ ಗುರಿ ಪಡೆದಿದ್ದು, ನಾಲ್ಕನೇ ದಿನದಾಟದಂತ್ಯಕ್ಕೆ ಒಂದು ವಿಕೆಟ್ ಕಳೆದುಕೊಂಡು 39 ರನ್ ಬಾರಿಸಿದ್ದು, ಕೊನೆಯ ದಿನ ಭಾರತ ಗೆಲ್ಲಲು 381 ರನ್‌ ಕಲೆಹಾಕಬೇಕಿದೆ.
 

Follow Us:
Download App:
  • android
  • ios