ಇಂಗ್ಲೆಂಡ್ ವಿರುದ್ಧ ಟಿ20 ಸರಣಿ ಸೋತಿರುವ ಭಾರತ ತಂಡ, ಮಂಗಳವಾರದಿಂದ ಏಕದಿನ ಸರಣಿಯಲ್ಲಿ ಸೆಣಸಾಡಲಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಅವರಂತಹ ಹಿರಿಯ ಆಟಗಾರರ ವಾಪಸಾತಿಯೊಂದಿಗೆ, 2027ರ ವಿಶ್ವಕಪ್‌ ಸಿದ್ಧತೆಗೆ ಈ ಸರಣಿ ಭಾರತಕ್ಕೆ ನಿರ್ಣಾಯಕವಾಗಿದೆ.

ಬರ್ಮಿಂಗ್‌ಹ್ಯಾಮ್‌: ಕಳೆದ 2 ವಾರದಲ್ಲಿ ಭಾರತ ತಂಡ ಬರೀ ಸೋಲುಗಳನ್ನೇ ಕಂಡಿದೆ. ಇಂಗ್ಲೆಂಡ್‌ ವಿರುದ್ಧ ಟಿ20 ಸರಣಿ ಸೋತು ಕುಗ್ಗಿರುವ ಭಾರತಕ್ಕೆ ಮಂಗಳವಾರದಿಂದ ಏಕದಿನ ಸವಾಲು ಶುರುವಾಗಲಿದೆ. 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ, ಮಂಗಳವಾರ ಇಲ್ಲಿನ ಎಡ್ಜ್‌ಬಾಸ್ಟನ್‌ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಭಾರತಕ್ಕೆ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ, ಜನ್‌ಪ್ರೀತ್‌ ಬುಮ್ರಾ, ಕೆ.ಎಲ್‌.ರಾಹುಲ್‌, ಶುಭ್‌ಮನ್‌ ಗಿಲ್‌ ಬಲ ತುಂಬಲಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

2027ರ ಏಕದಿನ ವಿಶ್ವಕಪ್‌ಗೆ 15 ತಿಂಗಳು ಬಾಕಿ

2027 ಏಕದಿನ ವಿಶ್ವಕಪ್‌ಗೆ ಇನ್ನು ಕೇವಲ 15 ತಿಂಗಳು ಬಾಕಿ ಇದ್ದು, 50 ಓವರ್‌ ಮಾದರಿಯಲ್ಲಿ ಭಾರತ ಇತ್ತೀಚೆಗೆ ಮಿಶ್ರ ಫಲ ಅನುಭವಿಸಿದೆ. 2024ರ ಜುಲೈನಿಂದ ಈ ವರೆಗೂ ಆಡಿರುವ 6 ದ್ವಿಪಕ್ಷೀಯ ಏಕದಿನ ಸರಣಿಗಳಲ್ಲಿ ಭಾರತ 3ರಲ್ಲಿ ಸೋತಿದೆ. ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ ಪ್ರವಾಸಗಳಲ್ಲಿ ಸೋಲು ಎದುರಾದರೆ, ತವರಲ್ಲೇ ನ್ಯೂಜಿಲೆಂಡ್‌ ವಿರುದ್ಧ ಪರಾಭವಗೊಂಡಿತ್ತು. ಹೀಗಾಗಿ, ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಮುಂದಿನ ವಿಶ್ವಕಪ್‌ಗೆ ಸರಿಯಾದ ರೀತಿಯಲ್ಲಿ ಸಿದ್ಧತೆ ನಡೆಸಲು ಈ ಸರಣಿ ಉಪಯೋಗವಾಗಲಿದೆ.

ಸಂಭವನೀಯರ ಪಟ್ಟಿ

ಭಾರತ: ರೋಹಿತ್‌, ಗಿಲ್‌(ನಾಯಕ), ಕೊಹ್ಲಿ, ಶ್ರೇಯಸ್‌, ಅಕ್ಷರ್‌, ರಾಹುಲ್‌, ದುಬೆ/ವಾಷಿಂಗ್ಟನ್‌, ಕುಲ್ದೀಪ್‌, ಬೂಮ್ರಾ, ಅರ್ಶ್‌ದೀಪ್‌, ಪ್ರಸಿದ್ಧ್‌/ಗುರ್ನೂರ್‌.

ಇಂಗ್ಲೆಂಡ್‌ (ಪ್ಲೇಯಿಂಗ್‌ XI): ಡಕೆಟ್‌, ಬೆಥೆಲ್‌, ರೂಟ್‌, ಬ್ರೂಕ್‌ (ನಾಯಕ), ಬಟ್ಲರ್‌, ಸ್ಯಾಮ್‌ ಕರ್ರನ್‌, ಜ್ಯಾಕ್ಸ್‌, ಆರ್ಚರ್‌, ಡಾಸನ್‌, ಜೋಶ್‌ ಟಂಗ್‌, ರಶೀದ್‌

ಪಂದ್ಯ: ಮಧ್ಯಾಹ್ನ 3.30ಕ್ಕೆ, ನೇರ ಪ್ರಸಾರ: ಸೋನಿ ಸ್ಪೋರ್ಟ್ಸ್‌/ಜಿಯೋ ಹಾಟ್‌ಸ್ಟಾರ್‌