ಭಾರತ-ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯಕ್ಕೆ Stop Adani ಪ್ರತಿಭಟನೆಯ ಬಿಸಿ ತಟ್ಟಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಸಿಡ್ನಿ(ನ.27): ಬರೋಬ್ಬರಿ 9 ತಿಂಗಳುಗಳ ಬಳಿಕ ಟೀಂ ಇಂಡಿಯಾ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನಾಡುತ್ತಿದ್ದು, ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೊದಲ ಪಂದ್ಯವನ್ನಾಡುತ್ತಿದೆ.
ಬಹುನಿರೀಕ್ಷಿತ ಕ್ರಿಕೆಟ್ ಸರಣಿಗೆ ಇಲ್ಲಿನ ಸ್ಥಳೀಯಾಡಳಿತ ಪಂದ್ಯಾವಳಿ ವೀಕ್ಷಣೆಗೆ 50% ವೀಕ್ಷಕರಿಗೆ ಅನುವು ಮಾಡಿಕೊಟ್ಟಿದೆ. ಈ ನಡುವೆ ಪ್ರತಿಭಟನಾಕಾರನೊಬ್ಬ ಒಂದು ಬಿಲಿಯನ್ ಆಸ್ಟ್ರೇಲಿಯನ್ ಡಾಲರ್ ಹಣವನ್ನು ಅದಾನಿಗೆ ಸಾಲ ನೀಡಬಾರದು ಎನ್ನುವ ಭಿತ್ತಿಪತ್ರ ಹಿಡಿದು ಮೈದಾನ ಪ್ರವೇಶಿಸಿದ ನಾಟಕೀಯ ಸನ್ನಿವೇಷಕ್ಕೆ ಈ ಪಂದ್ಯ ಸಾಕ್ಷಿಯಾಯಿತು. ಈ ಕ್ಷಣದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಫಿಂಚ್, ಸ್ಮಿತ್ ಶತಕದಬ್ಬರ; ಟೀಂ ಇಂಡಿಯಾಗೆ ಕಠಿಣ ಗುರಿ ನೀಡಿದ ಆಸೀಸ್
ಭಾರತ-ಆಸ್ಟ್ರೇಲಿಯಾ ನಡುವಿನ ಪಂದ್ಯಕ್ಕೆ ಆತಿಥ್ಯ ವಹಿಸಿರುವ ಸಿಡ್ನಿ ಕ್ರಿಕೆಟ್ ಮೈದಾನದ ಹೊರಗೂ ಪ್ರತಿಭಟನಾಕಾರರು ಅದಾನಿ ವಿರುದ್ಧ ದೊಡ್ಡ ಪ್ರತಿಭಟನೆ ನಡೆಸಿ ಗಮನ ಸೆಳೆದಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಯಾಕಾಗಿ ಪ್ರತಿಭಟನೆ..?
ಭಾರತದ ಉದ್ಯಮಿ ಗೌತಮ್ ಅದಾನಿಯ ಸಂಸ್ಥೆ ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್‌ನಲ್ಲಿ ಕಲ್ಲಿದ್ದಲು ಗಣಿಗಾರಿಕೆ ನಡೆಸಲು ಮುಂದಾಗಿದೆ. ಕಲ್ಲಿದ್ದಲು ಉತ್ಫಾದನೆಯಿಂದ ಹೊರಬರುವ ಇಂಗಾಲದ ಬಗ್ಗೆ ಪರಿಸರ ಪ್ರೇಮಿಗಳು ಆತಂಕ ವ್ಯಕ್ತಪಡಿಸುವುದರ ಜತಗೆ ಈ ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇದರ ಭಾಗವಾಗಿಯೇ ಪ್ರತಿಭಟನಾಕಾರನೊಬ್ಬ ಅದಾನಿಗೆ ಒಂದು ಬಿಲಿಯನ್ ಡಾಲರ್ ಹಣವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಾಲ ನೀಡಬಾರದು ಎನ್ನುವ ಭಿತ್ತಿ ಪತ್ರಹಿಡಿದು ಮೈದಾನ ಪ್ರವೇಶಿಸುವ ಮೂಲಕ ಗಮನ ಸೆಳೆಯುವ ಯತ್ನ ಮಾಡಿದ್ದಾರೆ
