Asianet Suvarna News Asianet Suvarna News

India Tour of South Africa: ಆಫ್ರಿಕಾ ಪ್ರವಾಸದ ಕುರಿತಂತೆ ಮಹತ್ವದ ಬೆಳವಣಿಗೆ..!

* ಭಾರತ ತಂಡದ ಆಫ್ರಿಕಾ ಪ್ರವಾಸದ ಕುರಿತಂತೆ ಮಹತ್ವದ ತೀರ್ಮಾನ ಪ್ರಕಟ

* ಡಿಸೆಂಬರ್ ತಿಂಗಳಿನಲ್ಲಿ ಆಫ್ರಿಕಾ ಪ್ರವಾಸ ಕೈಗೊಳ್ಳಬೇಕಿರುವ ಟೀಂ ಇಂಡಿಯಾ

* ಸದ್ಯ ತವರಿನಲ್ಲಿ ಕಿವೀಸ್ ಎದುರು ಟೆಸ್ಟ್ ಸರಣಿಯಲ್ಲಿ ಪಾಲ್ಗೊಂಡಿರುವ ಭಾರತ

India Tour of South Africa as per Schedule Says Cricket South Africa kvn
Author
Bengaluru, First Published Nov 30, 2021, 9:30 AM IST

ನವದೆಹಲಿ(ನ.30): ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ನಡುವೆ ತವರಿನಲ್ಲಿ ಟೆಸ್ಟ್ ಸರಣಿ ನಡೆಯುತ್ತಿದೆ. ಇದಾದ ಬಳಿಕ ಟೀಂ ಇಂಡಿಯಾ (Team India), ದಕ್ಷಿಣ ಆಫ್ರಿಕಾ ಪ್ರವಾಸ (South Africa Tour) ಮಾಡಬೇಕಿದೆ. ಇದರ ನಡುವೆ ಆಫ್ರಿಕಾ ರಾಷ್ಟ್ರಗಳಲ್ಲಿ ಒಮಿಕ್ರೋನ್‌ ಭೀತಿ (Omicron Variant Threat) ಕಾಣಿಕೊಂಡ ಹಿನ್ನೆಲೆಯಲ್ಲಿ ಟೂರ್ನಿ ಆಯೋಜನೆಯ ಕುರಿತಂತೆ ಅನಿಶ್ಚಿತತೆ ಮನೆ ಮಾಡಿತ್ತು. ಇದೀಗ ಹರಿಣಗಳ ನಾಡಿನ ಪ್ರವಾಸದ ಕುರಿತಂತೆ ಮಹತ್ವದ ತೀರ್ಮಾನವೊಂದು ಹೊರಬಿದ್ದಿದೆ. 

ಹೌದು, ನ್ಯೂಜಿಲೆಂಡ್‌ ವಿರುದ್ಧದ 2ನೇ ಟೆಸ್ಟ್‌ ಮುಕ್ತಾಯಗೊಂಡ ಬಳಿಕ ಡಿಸೆಂಬರ್ 9ರಂದು ಭಾರತ ತಂಡ, ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳಬೇಕಿದೆ. ಅಲ್ಲಿ ಸುಮಾರು 7 ವಾರಗಳ ಕಾಲ ಇರಬೇಕಿರುವ ಟೀಂ ಇಂಡಿಯಾ, ಆತಿಥೇಯ ತಂಡದ ವಿರುದ್ಧ 3 ಟೆಸ್ಟ್‌, 3 ಏಕದಿನ ಹಾಗೂ 4 ಟಿ20 ಪಂದ್ಯಗಳನ್ನು ಆಡಬೇಕಿದೆ.  ಒಮಿಕ್ರೋನ್‌ ವೈರಸ್‌ ಹಬ್ಬುತ್ತಿರುವ ಕಾರಣ ಭಾರತ ತಂಡ ಪ್ರವಾಸ ರದ್ದುಗೊಳಿಸಬಹುದು ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಮಂಡಳಿ (Cricket South Africa), ಸರಣಿಯು ಪೂರ್ವ ನಿಗದಿಯಂತೆ ನಡೆಯಲಿದೆ ಎಂದಿದೆ. ಡಿಸೆಂಬರ್ 17ರಿಂದ ಮೊದಲ ಟೆಸ್ಟ್‌ ಆರಂಭವಾಗಬೇಕಿದೆ.

ಇಂದಿನಿಂದ ಭಾರತ ‘ಎ’ ಹಾಗೂ ದಕ್ಷಿಣ ಆಫ್ರಿಕಾ ‘ಎ’ ನಡುವಿನ 2ನೇ ಟೆಸ್ಟ್‌ ಪಂದ್ಯ

ಬ್ಲೂಮ್‌ಫೌಂಟೇನ್‌: ಆಫ್ರಿಕಾ ಭಾಗದಲ್ಲಿ ಹೊಸ ರೂಪಾಂತರಿ ವೈರಸ್‌(ಒಮಿಕ್ರೋನ್‌) ಕಾಣಿಸಿಕೊಂಡಿರುವ ನಡುವೆಯೇ ಭಾರತ ‘ಎ’ ಹಾಗೂ ದಕ್ಷಿಣ ಆಫ್ರಿಕಾ ‘ಎ’ ನಡುವಿನ 2ನೇ ಅನಧಿಕೃತ ಟೆಸ್ಟ್‌ ಪಂದ್ಯ ಮಂಗಳವಾರ ಆರಂಭವಾಗಲಿದೆ. 

Ind vs NZ Kanpur Test: ಕಿವೀಸ್‌ ಪಡೆಯನ್ನು ಸೋಲಿನಿಂದ ಪಾರು ಮಾಡಿದ 'ಭಾರತದ' ಜೋಡಿ..!

ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ- ನೆದರ್‌ಲೆಂಡ್ಸ್‌ ನಡುವಿನ ಏಕದಿನ ಸರಣಿ ಅರ್ಧಕ್ಕೆ ಮೊಟಕುಗೊಳಿಸಲಾಗಿತ್ತು. ಹೀಗಾಗಿ ಭಾರತ ಹಾಗೂ ದ.ಆಫ್ರಿಕಾ ‘ಎ’ ತಂಡಗಳ ನಡುವಿನ ಅನಧಿಕೃತ ಟೆಸ್ಟ್‌ ಸರಣಿಯೂ ಸ್ಥಗಿತಗೊಳ್ಳಲಿದೆ ಎನ್ನಲಾಗಿತ್ತು. ಆದರೆ ಬಯೋಬಬಲ್‌ನಲ್ಲಿರುವ ಆಟಗಾರರು ಮಂಗಳವಾರದಿಂದ 2ನೇ ಟೆಸ್ಟ್‌ ಆಡಲಿದ್ದು, ಪಂದ್ಯ ಖಾಲಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಮಳೆ ಬಾಧಿತ ಮೊದಲ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತ್ತು.

ಟೆಸ್ಟ್‌: ಬಾಂಗ್ಲಾ ವಿರುದ್ಧ ಜಯದ ಹೊಸ್ತಿಲಲ್ಲಿ ಪಾಕ್‌

ಚಿತ್ತಗಾಂಗ್‌: ಬಾಂಗ್ಲಾದೇಶ (Bangladesh Cricket Team) ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಪಾಕಿಸ್ತಾನ (Pakistan Cricket Team) ಜಯದ ಹೊಸ್ತಿಲಲ್ಲಿದೆ. ಗೆಲುವಿಗೆ 202 ರನ್‌ ಗುರಿ ಪಡೆದಿರುವ ಪಾಕಿಸ್ತಾನ, 4ನೇ ದಿನದಂತ್ಯಕ್ಕೆ ವಿಕೆಟ್‌ ನಷ್ಟವಿಲ್ಲದೆ 109 ರನ್‌ ಗಳಿಸಿದ್ದು, ಅಂತಿಮ ದಿನವಾದ ಮಂಗಳವಾರ 99 ರನ್‌ ಗಳಿಸಬೇಕಿದೆ. ತಲಾ ಅರ್ಧಶತಕ ಸಿಡಿಸಿರುವ ಆಬಿದ್‌ ಅಲಿ(56) ಹಾಗೂ ಅಬ್ದುಲ್ಲಾ ಶಫೀಕ್‌(53) ಕ್ರೀಸ್‌ ಕಾಯ್ದುಕೊಂಡಿದ್ದಾರೆ. ಇದಕ್ಕೂ ಮೊದಲು 3ನೇ ದಿನದಂತ್ಯಕ್ಕೆ 4 ವಿಕೆಟ್‌ಗೆ 39 ರನ್‌ ಗಳಿಸಿದ್ದ ಬಾಂಗ್ಲಾ, ಸೋಮವಾರ 157 ರನ್‌ ಗಳಿಸಿ ಆಲೌಟಾಯಿತು.

ಸ್ಕೋರ್‌: ಬಾಂಗ್ಲಾ 330/10 ಮತ್ತು 157/10
ಪಾಕ್‌ 286/10 ಮತ್ತು 109/0
(* ನಾಲ್ಕನೇ ದಿನದಾಟದಂತ್ಯದ ವೇಳೆಗೆ)

ವಿಂಡೀಸ್‌ ವಿರುದ್ಧದ 2ನೇ ಟೆಸ್ಟ್‌: ಶ್ರೀಲಂಕಾ 113/1

ಗಾಲೆ: ವೆಸ್ಟ್‌ಇಂಡೀಸ್‌ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ತಂಡ (Sri Lanka Cricket Team) ಮೊದಲ ದಿನದಂತ್ಯಕ್ಕೆ 1 ವಿಕೆಟ್‌ ನಷ್ಟಕ್ಕೆ 113 ರನ್‌ ಗಳಿಸಿದೆ. ಭಾರಿ ಮಳೆಯಿಂದಾಗಿ ಸೋಮವಾರ ಪಂದ್ಯ 4 ಗಂಟೆ ತಡವಾಗಿ ಆರಂಭವಾಯಿತು. ನಾಯಕ ದಿಮುತ್‌ ಕರುಣರತ್ನೆ 42 ರನ್‌ ಗಳಿಸಿ ಔಟಾಗಿದ್ದು, ಪಥುಮ್‌ ನಿಸ್ಸಂಕ(61) ಹಾಗೂ ಫೆರ್ನಾಂಡೊ(02) 2ನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ. ರೋಸ್ಟನ್‌ ಚೇಸ್‌ 1 ವಿಕೆಟ್‌ ಕಬಳಿಸಿದರು.
 

Follow Us:
Download App:
  • android
  • ios