ನವದೆಹಲಿ(ಏ.05): ಭಾರತ ಮಹಿಳಾ ಟಿ20 ಕ್ರಿಕೆಟ್‌ ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ವಿಭಿನ್ನ ರೀತಿಯಲ್ಲಿ ಕೊರೋನಾ ಜಾಗೃತಿ ಕೈಗೊಂಡಿದ್ದಾರೆ. ಮೈದಾನದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸುವ ಕೌರ್‌ ಅವರ ಮತ್ತೊಂದು ಕೌಶಲ್ಯ ಬೆಳಕಿಗೆ ಬಂದಿದೆ.

ಗಪ್ ಚುಪ್ ಪ್ರೀತಿ ಬಹಿರಂಗ ಪಡಿಸಿದ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧನಾ!

ಪಂಜಾಬ್‌ನ ಮೊಗಾದಲ್ಲಿರುವ ತಮ್ಮ ನಿವಾಸದಲ್ಲಿ ತಾವೇ ಸ್ವತಃ ಮಾಸ್ಕ್‌ ಹೊಲಿದು, ಜಾಗೃತಿ ಕೈಗೊಂಡಿದ್ದಾರೆ. ಸೋಂಕು ತಡೆಗೆ ಮಾಸ್ಕ್‌ ಧರಿಸುವಂತೆ ಸಾರ್ವಜನಿಕರಿಗೆ ಕರೆ ನೀಡಿದ್ದಾರೆ. ಇದೇ ವೇಳೆ ತಾನು ತನ್ನ ಪೋಷಕರನ್ನು ಇಷ್ಟ ಪಡುತ್ತೇನೆ. ನನ್ನ ತಂದೆ ಬ್ಯಾಟ್ ಬೀಸುವುದು ಹೇಗೆ ಎಂದು ಕಲಿಸಿಕೊಟ್ಟರು. ಆದರೆ ಇಂದು ನನ್ನ ಅಮ್ಮ ನನಗೆ ಸ್ಟಿಚ್ಚಿಂಗ್ ಮಾಡುವುದು ಕಲಿಸಿಕೊಟ್ಟಿರುವುದನ್ನು ನಿಮಗೆ ತೋರಿಸುತ್ತೇನೆಂದು ವಿಡಿಯೋವೊಂದನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಮಹಿಳಾ ಟೀಂ ಇಂಡಿಯಾ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿತ್ತು. ಆದರೆ ಮಾರ್ಚ್ 08ರಂದು ನಡೆದ ಫೈನಲ್ ಪಂದ್ಯದಲ್ಲಿ  ಆಸ್ಟ್ರೇಲಿಯಾ ವಿರುದ್ಧ ಭಾರತ ಮುಗ್ಗರಿಸಿತ್ತು.