ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಇಶಾನ್ ಕಿಶನ್ ಅವರ ಸ್ಪೋಟಕ 77 ರನ್‌ಗಳ ನೆರವಿನಿಂದ ಭಾರತ 7 ವಿಕೆಟ್‌ಗೆ 175 ರನ್ ಗಳಿಸಿತು. ಇದು ಟಿ20 ವಿಶ್ವಕಪ್‌ನಲ್ಲಿ ಭಾರತದ ಗರಿಷ್ಠ ಮೊತ್ತವಾಗಿದ್ದು, ಪಾಕಿಸ್ತಾನಕ್ಕೆ ಕಠಿಣ ಗುರಿಯನ್ನು ನೀಡಿದೆ.

ಕೊಲಂಬೋ: ಆರಂಭಿಕ ಬ್ಯಾಟರ್ ಇಶಾನ್ ಕಿಶನ್ ಬಾರಿಸಿದ ಸ್ಪೋಟಕ ಅರ್ಧಶತಕದ ನೆರವಿನಿಂದ ಭಾರತ ತಂಡವು ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 175 ರನ್ ಬಾರಿಸಿದ್ದು, ಬದ್ದ ಎದುರಾಳಿ ಪಾಕಿಸ್ತಾನಕ್ಕೆ ಕಠಿಣ ಗುರಿ ನೀಡಿದೆ. ಇದು ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ದಾಖಲಿಸಿದ ಗರಿಷ್ಠ ರನ್ ಎನಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಲ್ಲಿನ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಲಿಳಿದ ಟೀಂ ಇಂಡಿಯಾ, ಮೊದಲ ಓವರ್‌ನಲ್ಲೇ ಅಭಿಷೇಕ್ ಶರ್ಮಾ ವಿಕೆಟ್ ಕಳೆದುಕೊಂಡಿತು. ಅಭಿಷೇಕ್ ಶರ್ಮಾ ಖಾತೆ ತೆರೆಯುವ ಮುನ್ನವೇ ಪಾಕ್ ನಾಯಕ ಸಲ್ಮಾನ್ ಅಲಿ ಅಘಾಗೆ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ನಡೆದದ್ದು ಇಶಾನ್ ಕಿಶನ್ ರುದ್ರನರ್ತನ.

ಸ್ಪೋಟಕ ಅರ್ಧಶತಕ ಸಿಡಿಸಿದ ಇಶಾನ್ ಕಿಶನ್:

ಆರಂಭದಲ್ಲೇ ಅಭಿಷೇಕ್ ಶರ್ಮಾ ವಿಕೆಟ್ ಕಳೆದುಕೊಂಡರೂ ಮತ್ತೊಂದು ತುದಿಯಲ್ಲಿ ವಿಸ್ಪೋಟಕ ಬ್ಯಾಟಿಂಗ್ ನಡೆಸುವ ಮೂಲಕ ಇಶಾನ್ ಕಿಶನ್, ಪಾಕ್ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿದರು. ಪಾಕ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಇಶಾನ್ ಕಿಶನ್ ಕೇವಲ 27 ಎಸೆತಗಳನ್ನು ಎದುರಿಸಿ ಆಕರ್ಷಕ ಅರ್ಧಶತಕ ಚಚ್ಚಿದರು. ಇದಾದ ಬಳಿಕವೂ ಸ್ಪೋಟಕ ಬ್ಯಾಟಿಂಗ್ ಮುಂದುವರೆಸಿದ ಇಶಾನ್ ಕಿಶನ್ ಕೇವಲ 40 ಎಸೆತಗಳನ್ನು ಎದುರಿಸಿ 10 ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ ಸ್ಪೋಟಕ 77 ರನ್ ಸಿಡಿಸಿದರು.

Scroll to load tweet…

ಇದಾದ ಬಳಿಕ ತಿಲಕ್ ವರ್ಮಾ 24 ಎಸೆತಗಳನ್ನು ಎದುರಿಸಿ 25 ರನ್ ಸಿಡಿಸಿದರೆ, ನಾಯಕ ಸೂರ್ಯಕುಮಾರ್ ಯಾದವ್ 29 ಎಸೆತಗಳನ್ನು ಎದುರಿಸಿ 3 ಬೌಂಡರಿ ಸಹಿತ 32 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಹಾರ್ದಿಕ್ ಪಾಂಡ್ಯ ಶೂನ್ಯ ಸುತ್ತಿ ನಿರಾಸೆ ಅನುಭವಿಸಿದರೆ, ಕೊನೆಯಲ್ಲಿ ಶಿವಂ ದುಬೆ 17 ಎಸೆತಗಳಲ್ಲಿ 27 ಹಾಗೂ ರಿಂಕು ಸಿಂಗ್ ಕೇವಲ 4 ಎಸೆತಗಳಲ್ಲಿ 11 ರನ್ ಸಿಡಿಸುವ ಮೂಲಕ ತಂಡದ ಮೊತ್ತವನ್ನು 175ರ ಗಡಿ ಮುಟ್ಟಿಸುವಲ್ಲಿ ಯಶಸ್ವಿಯಾದರು.

ಭಾರತ ಎದುರು 6 ಸ್ಪಿನ್ನರ್‌ಗಳನ್ನು ಬಳಸಿದ ಪಾಕ್

ಇನ್ನು ಭಾರತದ ಬಲಿಷ್ಠ ಬ್ಯಾಟಿಂಗ್ ವಿಭಾಗವನ್ನು ಕಟ್ಟಿಹಾಕಲು ಪಾಕಿಸ್ತಾನ ತಂಡವು ಬರೋಬ್ಬರಿ ಆರು ಸ್ಪಿನ್ನರ್‌ಗಳನ್ನು ಬಳಸಿಕೊಂಡಿತು. ಈ ಮೂಲಕ ಟಿ20 ವಿಶ್ವಕಪ್ ಇತಿಹಾಸದಲ್ಲಿ ತಂಡವೊಂದು ಇನ್ನಿಂಗ್ಸ್‌ವೊಂದರಲ್ಲಿ ಬಳಸಿದ ಅತಿಹೆಚ್ಚು ಸ್ಪಿನ್ನರ್‌ಗಳು ಎನಿಸಿಕೊಂಡಿತು. ಪಾಕಿಸ್ತಾನದ 6 ಬೌಲರ್‌ಗಳು ಒಟ್ಟು 18 ಓವರ್ ಬೌಲಿಂಗ್ ಮಾಡಿದರು. ಇನ್ನು ಶಾಹೀನ್ ಶಾ ಅಫ್ರಿದಿ ಎರಡು ಓವರ್ ಬೌಲಿಂಗ್ ಮಾಡಿದರು.