ರೋಡ್ ಸೇಫ್ಟಿ ಸೀರೀಸ್‌: ಸಚಿನ್‌, ಯುವಿ ಅಬ್ಬರ, ಫೈನಲ್‌ಗೆ ಲಗ್ಗೆಯಿಟ್ಟ ಭಾರತ

ಸಚಿನ್‌ ತೆಂಡುಲ್ಕರ್ ನೇತೃತ್ವದ ಇಂಡಿಯಾ ಲೆಜೆಂಡ್ಸ್‌ ತಂಡವು ರೋಡ್ ಸೇಫ್ಟಿ ಸೀರೀಸ್‌ನಲ್ಲಿ ಫೈನಲ್‌ ಪ್ರವೇಶಿಸಿದೆ. ಈ ಕುರಿಯಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

India Legends All Round Performance Storm Into Final in Road Safety World Series kvn

ರಾಯ್ಪುರ(ಮಾ.18): ಮಾಸ್ಟರ್‌ ಬ್ಲಾಸ್ಟರ್‌ ಸಚಿನ್ ತೆಂಡುಲ್ಕರ್ ಆಕರ್ಷಕ ಅರ್ಧಶತಕ ಹಾಗೂ ಯುವರಾಜ್ ಸಿಂಗ್ ಸ್ಫೋಟಕ 49 ರನ್‌ಗಳ ನೆರವಿನಿಂದ ಇಂಡಿಯಾ ಲೆಜೆಂಡ್ಸ್‌ ತಂಡವು ರೋಡ್ ಸೇಪ್ಟಿ ಸೀರೀಸ್‌ನಲ್ಲಿ ವೆಸ್ಟ್ ಇಂಡೀಸ್‌ ಲೆಜೆಂಡ್ಸ್‌ ತಂಡವನ್ನು 13 ರನ್‌ಗಳಿಂದ ಮಣಿಸಿ ಫೈನಲ್‌ಗೆ ಲಗ್ಗೆಯಿಟ್ಟಿದೆ. 

ಹೌದು, ಭಾರತ ನೀಡಿದ್ದ 219 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್‌ ತಂಡವು 6 ವಿಕೆಟ್‌ ಕಳೆದುಕೊಂಡು 206 ರನ್‌ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ 13 ರನ್‌ಗಳ ರೋಚಕ ಸೋಲು ಕಂಡಿತು. ವಿಂಡೀಸ್ ಪರ ಡ್ವೇನ್‌ ಬ್ರಾವೋ(63), ನರಸಿಂಗ ಡಿಯೊನಾರೆನೆ(59) ಹಾಗೂ ನಾಯಕ ಬ್ರಿಯನ್‌ ಲಾರ 56 ರನ್‌ ಬಾರಿಸಿದರಾದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ಈ ಮೂವರನ್ನು ಹೊರತುಪಡಿಸಿದರೆ ಉಳಿದ್ಯಾವ ಬ್ಯಾಟ್ಸ್‌ಮನ್‌ಗಳು ಎರಡಂಕಿ ಮೊತ್ತ ದಾಖಲಿಸಲು ಯಶಸ್ವಿಯಾಗಲಿಲ್ಲ.

ಇಂಡಿಯಾ ಲೆಜೆಂಡ್ಸ್‌ ಪರ ಕನ್ನಡದ ವೇಗಿ ವಿನಯ್‌ ಕುಮಾರ್ ಕೇವಲ 26 ರನ್‌ ನೀಡಿ 2 ವಿಕೆಟ್‌ ಪಡೆದರೆ, ಪ್ರಗ್ಯಾನ್‌ ಓಜಾ, ಇರ್ಫಾನ್‌ ಪಠಾನ್ ಹಾಗೂ ಮನ್‌ಪ್ರೀತ್ ಗೋಣಿ ತಲಾ ಒಂದೊಂದು ವಿಕೆಟ್‌ ಪಡೆದರು.

ಇದಕ್ಕೂ ಮೊದಲು ಟಾಸ್ ಸೋತರೂ ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಇಂಡಿಯಾ ಲೆಜೆಂಡ್ಸ್‌ ತಂಡಕ್ಕೆ ಆರಂಭಿಕರಾದ ವಿರೇಂದ್ರ ಸೆಹ್ವಾಗ್ ಹಾಗೂ ಸಚಿನ್‌ ತೆಂಡುಲ್ಕರ್ ಜೋಡಿ ಮೊದಲ ವಿಕೆಟ್‌ಗೆ 5.3 ಓವರ್‌ಗಳಲ್ಲಿ 56 ರನ್‌ಗಳ ಜತೆಯಾಟವಾಡುವ ಮೂಲಕ ಸ್ಪೋಟಕ ಆರಂಭ ಒದಗಿಸಿಕೊಟ್ಟಿತು. ವಿರೇಂದ್ರ ಸೆಹ್ವಾಗ್‌ ಕೇವಲ 17 ಎಸೆತಗಳಲ್ಲಿ 35 ರನ್‌ ಬಾರಿಸಿ ಬೆಸ್ಟ್‌ಗೆ ವಿಕೆಟ್‌ ಒಪ್ಪಿಸಿದರು.

ನಾನು 5ನೇ ಸಿಕ್ಸ್‌ ಬಾರಿಸಬೇಕೆಂದುಕೊಂಡಿದ್ದೆ, ಅದರೆ..? ಯುವಿ ಬಿಚ್ಚಿಟ್ಟ ಸೀಕ್ರೇಟ್‌ ಇದು..!

ಇನ್ನು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ 42 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 65 ರನ್ ಬಾರಿಸಿ ಎರಡನೇ ಬಲಿಯಾದರು. ಮೊಹಮ್ಮದ್ ಕೈಫ್ 27 ಹಾಗೂ ಯೂಸುಪ್ ಪಠಾಣ್‌ 37 ರನ್‌ ಬಾರಿಸಿದರು. ಇನ್ನು ಕೊನೆಯಲ್ಲಿ ಸಿಕ್ಸರ್ ಕಿಂಗ್‌ ಖ್ಯಾತಿಯ ಯುವರಾಜ್ ಸಿಂಗ್‌ ಕೇವಲ 20 ಎಸೆತಗಳಲ್ಲಿ 1 ಬೌಂಡರಿ ಹಾಗೂ 6 ಆಕರ್ಷಕ ಸಿಕ್ಸರ್‌ಗಳ ನೆರವಿನಿಂದ ಅಜೇಯ 49 ರನ್‌ ಬಾರಿಸುವ ಮೂಲಕ ಇಂಡಿಯಾ ಲೆಜೆಂಡ್ಸ್‌ ಬೃಹತ್ ಮೊತ್ತ ಕಲೆಹಾಕಲು ನೆರವಾದರು.
 

Latest Videos
Follow Us:
Download App:
  • android
  • ios