Asianet Suvarna News Asianet Suvarna News

Cricket News: ಮುಂಬರುವ ದಿನಗಳಲ್ಲಿ ದಿಟ್ಟ ನಿರ್ಧಾರ ಕೈಗೊಳ್ಳುವ ಸುಳಿವು ಕೊಟ್ಟ ದ್ರಾವಿಡ್

- ಟೀಂ ಇಂಡಿಯಾ ಟೆಸ್ಟ್ ಪ್ರದರ್ಶನದ ಬಗ್ಗೆ ಕೋಚ್ ದ್ರಾವಿಡ್ ಮೆಚ್ಚುಗೆ
- ಮುಂಬರುವ ದಿನಗಳಲ್ಲಿ ದಿಟ್ಟ ನಿರ್ಧಾರ ಕೈಗೊಳ್ಳುವ ಸುಳಿವು ಕೊಟ್ಟ 'ದಿ ವಾಲ್'
- ಯುವ ಆಟಗಾರರ ಪ್ರದರ್ಶನವನ್ನು ಶ್ಲಾಘಿಸಿದ ಕೋಚ್ ದ್ರಾವಿಡ್

India grand victory in the coach Dravid first Test series against new Zealand
Author
Bengaluru, First Published Dec 6, 2021, 8:47 PM IST

ಮುಂಬೈ (ಡಿ.06): ಮುಂದಿನ ದಿನಗಳಲ್ಲಿ ಟೀಮ್ ಇಂಡಿಯಾದ (Team India) ಮ್ಯಾನೇಜ್ ಮೆಂಟ್ ಇನ್ನಷ್ಟು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲಿದೆ ಎನ್ನುವ ಸುಳಿವನ್ನು ಮುಖ್ಯ ಕೋಚ್ ರಾಹುಲ್ ದ್ರಾವಿಡ್ (Rahul Dravid )ಬಿಟ್ಟುಕೊಟ್ಟಿದ್ದಾರೆ. 

ಎಲ್ಲಿಯವರೆಗೂ ಆಟಗಾರರೊಂದಿಗೆ ಸಂವಹನ ಸ್ಪಷ್ಟವಾಗಿರಲಿದೆಯೋ ಅಲ್ಲಿಯವರೆಗೂ ಕಠಿಣ ನಿರ್ಧಾರ ಮಾಡುವುದು ನಮಗೆ ಸವಾಲಲ್ಲ ಎಂದು ಹೇಳಿದ್ದಾರೆ.

ಕೋಚ್ ಆಗಿ ತಮ್ಮ ಮೊದಲ ಸರಣಿಯಲ್ಲಿಯೇ ಸಾಕಷ್ಟು ಅಚ್ಚರಿಯ ಆಯ್ಕೆಗಳ ಮೂಲಕ ದ್ರಾವಿಡ್ ಅಚ್ಚರಿ ಮೂಡಿಸಿದ್ದಾರೆ.  ಅಗ್ರ ಬ್ಯಾಟ್ಸ್ ಮನ್ ರೋಹಿತ್ ಶರ್ಮಗೆ (Rohit Sharma)ಸಂಪೂರ್ಣ ಟೆಸ್ಟ್ ಸರಣಿಗೆ ವಿಶ್ರಾಂತಿ ನೀಡಿದ್ದರೆ, ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ವಿರಾಟ್ ಕೊಹ್ಲಿ ಇಲ್ಲದೇ ಕಣಕ್ಕಿಳಿದಿತ್ತು. ಅನುಭವಿ ಬ್ಯಾಟ್ಸ್ ಮನ್ ಗಾದ ಚೇತೇಶ್ವರ ಪೂಜಾರ (Cheteshwar Pujara) ಹಾಗೂ ಅಜಿಂಕ್ಯ ರಹಾನೆ (Ajinkya Rahane)ಕಳಪೆ ಫಾರ್ಮ್ ನಲ್ಲಿದ್ದು ಮುಂಬರುವ ದಕ್ಷಿಣ ಆಫ್ರಿಕಾ ಸರಣಿಗೆ ತಂಡದಲ್ಲಿ ಸ್ಥಾನ ಪಡೆದುಕೊಳ್ಳುವ ಬಗ್ಗೆ ಅನುಮಾನಗಳಿವೆ. ಅದರ ನಡುವೆ ದ್ರಾವಿಡ್ ಅವರ ಈ ಮಾತುಗಳು ಮಹತ್ವ ಪಡೆದುಕೊಂಡಿವೆ.

Ind vs NZ Mumbai Test: ಕಿವೀಸ್‌ ಬಗ್ಗುಬಡಿದು ಟೆಸ್ಟ್ ಸರಣಿ ಗೆದ್ದ ಟೀಂ ಇಂಡಿಯಾ

"ಯುವ ಆಟಗಾರರು ಉತ್ತಮ ಪ್ರದರ್ಶನ ತೋರಿದಾಗ ತಂಡದ ಆಯ್ಕೆಯ ತಲೆನೋವು ಬಹಳ ಖುಷಿ ಕೊಡುತ್ತದೆ. ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಹೆಚ್ಚಾಗಬಹುದು ಆಗ ನಮ್ಮ ನಿರ್ಧಾರಗಳೂ ಕಠಿಣವಾಗಿರಬಹುದು. ಎಲ್ಲಿಯವರೆಗೆ ಆಟಗಾರರೊಂದಿಗೂ ನಮ್ಮ ಸಂವಹನ ಸ್ಪಷ್ಟವಾಗಿರುತ್ತದೆಯೋ ಅಲ್ಲಿಯವರೆಗೂ ಯಾವ ಸಮಸ್ಯೆಯೂ ಆಗುವುದಿಲ್ಲ" ಎನ್ನುವುದು ದಿ ವಾಲ್ ಖ್ಯಾತಿಯ ದ್ರಾವಿಡ್ ಮಾತು.
ಕಾನ್ಪುರದಲ್ಲೂ ನಾವು ಗೆಲುವಿನ ಸಮೀಪ ಬಂದಿದ್ದೆವು. ಆದರೆ, ಕೊನೆಯ ವಿಕೆಟ್ ಉರುಳಿಸಲು ಸಾಧ್ಯವಾಗಲಿಲ್ಲ. ಇಲ್ಲಿ ಕಿವೀಸ್ ತಂಡವನ್ನು ಮಣಿಸಲು ಪರಿಶ್ರಮ ಪಟ್ಟಿದ್ದೇವೆ. ಟ್ರೋಫಿ ಗೆದ್ದು ಸರಣಿ ಮುಗಿಸಿದ್ದಕ್ಕೆ ಖುಷಿ ಇದೆ ಎಂದರು.

Ind vs NZ: ಶುಭ್‌ಮನ್‌ ಗಿಲ್‌ ಕುರಿತಂತೆ ಮಹತ್ವದ ಹೇಳಿಕೆ ನೀಡಿದ ಸಚಿನ್ ತೆಂಡುಲ್ಕರ್‌..!

ಪ್ರತಿ ಪಂದ್ಯದಲ್ಲೂ ಆಟಗಾರರು ಪ್ರಗತಿ ಕಾಣಬೇಕು ಎಂದು ಹೇಳಿದ ದ್ರಾವಿಡ್, "ಯುವ ಆಟಗಾರರು ಸಿಕ್ಕಿರುವ ಅವಕಾಶ ಬಳಸಿಕೊಂಡು ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಹಿರಿಯ ಆಟಗಾರರು ಈ ಪಂದ್ಯದಲ್ಲಿ ಇರಲಿಲ್ಲ. ಹಾಗಿದ್ದರೂ ಇದು ತಂಡಕ್ಕೆ ಹಿನ್ನಡೆ ಎನಿಸಲಿಲ್ಲ. ಜಯಂತ್ ಗೆ ನಿನ್ನೆಯ ದಿನ ಕಷ್ಟವಾಗಿತ್ತು. ತಮ್ಮ ತಪ್ಪಿನಿಂದ ಕಲಿತು ಇಂದು ಉತ್ತಮವಾಗಿ ಆಡಿದರು. ಮಯಾಂಕ್, (Mayank Agarwal) ಶ್ರೇಯಸ್, (Shreyas Iyer) ಹೆಚ್ಚಿನ ಅವಕಾಶ ಪಡೆಯದ ಸಿರಾಜ್ (Mohammed Siraj) ಎಲ್ಲರೂ ಅದ್ಭುತವಾಗಿ ಆಡಿದರು. ಅಕ್ಷರ್ ಪಟೇಲ್ (Axar Patel) ಬ್ಯಾಟಿಂಗ್ ನಲ್ಲೂ ಭರ್ಜರಿಯಾಗಿ ಆಡಿದರು. ನಮ್ಮಲ್ಲಿ ಆಯ್ಕೆಗಳು ಹಲವಿದ್ದಾಗ, ಬಲಿಷ್ಠ ತಂಡವಾಗಲು ನೆರವಾಗುತ್ತದೆ ಎಂದು ತಂಡದ ಆಟಗಾರರ ಬಗ್ಗೆ ಮಾತನಾಡಿದರು.

ಮೊದಲ ಇನ್ನಿಂಗ್ಸ್ ನಲ್ಲಿ ನ್ಯೂಜಿಲೆಂಡ್ (New Aealand) ತಂಡ 62 ರನ್ ಗೆ ಆಲೌಟ್ ಆದರೂ, ಫಾಲೋಆನ್  ಹೇರದ ತಂಡದ ನಿರ್ಧಾರವನ್ನು ದ್ರಾವಿಡ್ ಸಮರ್ಥಿಸಿಕೊಂಡರು.  "ನಮಗೆ ಸಾಕಷ್ಟು ಸಮಯವಿತ್ತು. ಹಾಗಾಗಿ ಫಾಲೋಆನ್ (follow on) ಬಗ್ಗೆ ಯೋಚನೆ ಮಾಡಲಿಲ್ಲ. ಸಾಕಷ್ಟು ಯುವ ಬ್ಯಾಟ್ಸ್ ಮನ್ ಗಳು ತಂಡದಲ್ಲಿದ್ದರು. ಇಂಥ ಪರಿಸ್ಥಿತಿಯಲ್ಲಿ ಅವರಿಗೆ ಬ್ಯಾಟಿಂಗ್ ಅವಕಾಶ ನೀಡಲು ನಾನು ಬಯಸಿದ್ದೆ" ಎಂದರು.

ಭವಿಷ್ಯದ ಸರಣಿಗಳಿಗೆ ಆಟಗಾರರನ್ನು ಮಾನಸಿಕ ಹಾಗೂ ದೈಹಿಕವಾಗಿ ಫಿಟ್ ಹಾಗೂ ಫ್ರೆಶ್ ಆಗಿ ಇರಿಸುವುದೇ ತಮಗೆ ದೊಡ್ಡ ಸವಾಲಾಗಿರಲಿದೆ ಎಂದು ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ. "ನ್ಯೂಜಿಲೆಂಡ್ ವಿರುದ್ಧ ಸರಣಿಗೂ ಮುನ್ನ ಕೆಲ ಗಾಯದ ಸಮಸ್ಯೆಗಳಿದ್ದವು. ಇದನ್ನು ನಾವು ಸಮರ್ಥವಾಗಿ ನಿಭಾಯಿಸಿದ್ದೇವೆ. ನಮ್ಮ ಆಟಗಾರರನ್ನು ಮಾನಸಿಕ ಹಾಗೂ ದೈಹಿಕವಾಗಿ ಮ್ಯಾನೇಜ್ ಮಾಡುವ ಬಗ್ಗೆ ಗಮನ ನೀಡಬೇಕು. ಇದು ನನ್ನ ಸವಾಲಿನ ಅತಿದೊಡ್ಡ ಭಾಗವೂ ಹೌದು. ನಾನು ಮಾತ್ರವಲ್ಲದೆ ಆಯ್ಕೆಗಾರರು ಹಾಗೂ ನಾಯಕತ್ವದ ಗ್ರೂಪ್ ಗೂ ಇದು ಚಾಲೆಂಜ್" ಎಂದು ದ್ರಾವಿಡ್ ಹೇಳಿದರು.

Follow Us:
Download App:
  • android
  • ios