ಆಸೀಸ್‌ ವಿರುದ್ಧ ಗೆಲುವಿನೊಂದಿಗೆ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ನಂ.1 ಟೀಮ್‌ ಆದ ಭಾರತ!

ಮೊಹಾಲಿಯಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ತಂಡವನ್ನು ಐದು ವಿಕೆಟ್‌ಗಳಿಂದ ಮಣಿಸಿದ ಭಾರತ ತಂಡ, ಕ್ರಿಕೆಟ್‌ನ ಎಲ್ಲಾ ಮಾದರಿಗಳಲ್ಲಿ ಮತ್ತೆ ನಂ,1 ಟೀಮ್‌ ಎನ್ನುವ ಸ್ಥಾನ ಪಡೆದುಕೊಂಡಿದೆ.

India Become World Number One Team in all Cricket Formats With Win Over Australia in First Odi san

ಮೊಹಾಲಿ (ಸೆ.22): ಪ್ರವಾಸಿ ಆಸ್ಟ್ರೇಲಿಯಾ ತಂಡವನ್ನು ಮೊಹಾಲಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಐದು ವಿಕೆಟ್‌ಳಿಂದ ಮಣಿಸಿದ ಭಾರತ ತಂಡ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಕಂಡಿದೆ. ಅದರೊಂದಿಗೆ ಟೀಮ್‌ ಇಂಡಿಯಾ ವಿಶ್ವಕಪ್‌ಗೂ ಮುನ್ನ ಐಸಿಸಿ ವಿಶ್ವ ಶ್ರೇಯಾಂಕದಲ್ಲಿ ಏಕದಿನದ ನಂ.1 ಟೀಮ್‌ ಎನಿಸಿಕೊಂಡಿದೆ.  ಭಾರತ ಈಗ ಕೇವಲ ಏಕದಿನ ಮಾತ್ರವಲ್ಲ ಕ್ರಿಕೆಟ್‌ನ ಇತರ ಎರಡು ಮಾದರಿಗಳಾದ ಟಿ20 ಹಾಗೂ ಟೆಸ್ಟ್‌ನಲ್ಲೂ ನಂ.1 ಟೀಮ್‌ ಎನಿಸಿಕೊಂಡಿದೆ.  ಇದೇ ಪಂದ್ಯದಲ್ಲಿ ಮೊಹಮದ್‌ ಶಮಿ ಬಹಳ ಅಪರೂಪದ ಸಾಧನೆಯನ್ನು ಮಾಡಿದರು. ಕಳೆದ 16 ವರ್ಷಗಳಲ್ಲಿ ಭಾರತದಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಐದು ವಿಕೆಟ್‌ ಸಾಧನೆ ಮಾಡಿದ ಟೀಮ್‌ ಇಂಡಿಯಾದ ಮೊದಲ ವೇಗಿ ಎನ್ನುವ ಶ್ರೇಯಕ್ಕೆ ಅವರು ಪಾತ್ರರಾದರು. ಬ್ಯಾಟಿಂಗ್‌ನಲ್ಲಿ ಮಿಂಚಿದ ಶುಭ್‌ಮನ್ ಗಿಲ್‌63 ಎಸೆತಗಳಲ್ಲಿ 74 ರನ್‌ ಸಿಡಿಸುವ ಮೂಲಕ ಗಮನಸೆಳೆದರು.ಮೊದಲು ಬ್ಯಾಟಿಂಗ್‌ ಮಾಡಿದ ಆಸ್ಟ್ರೇಲಿಯಾ ತಂಡವನ್ನು 276 ರನ್‌ಗಳಿಗೆ ಭಾರತ ನಿಯಂತ್ರಿಸಿತು. ಅದಕ್ಕೆ ಕಾರಣವಾಗಿದ್ದು ಮೊಹದಮ್‌ ಶಮಿ ಅವರ ಅದ್ಭುತ ಬೌಲಿಂಗ್‌ ಕೇವಲ 51 ರನ್ ನೀಡಿ ಅವರು 5 ವಿಕೆಟ್‌ ಉರುಳಿಸಿದ್ದರು.

ಆ ಬಳಿಕ ರುತುರಾಜ್‌ ಗಾಯಕ್ವಾಡ್‌, ಶುಭ್‌ಮನ್‌ ಗಿಲ್‌, ಸೂರ್ಯಕುಮಾರ್‌ ಯಾದವ್‌ ಹಾಗೂ ಕೆಎಲ್‌ ರಾಹುಲ್‌ ಆಕರ್ಷಕ ಅರ್ಧಶತಕ ಸಿಡಿಸಿದ್ದರಿಂದ ಭಾರತ 48.4 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 281 ರನ್ ಬಾರಿಸಿ ಗೆಲುವು ಕಂಡಿತು. ಮೊದಲ ವಿಕೆಟ್‌ಗೆ ರುತುರಾಜ್‌ ಗಾಯಕ್ವಾಡ್‌ ಹಾಗೂ ಶುಭ್‌ಮನ್‌ ಗಿಲ್‌ ಆಕರ್ಷಕ 142 ರನ್‌ ಜೊತೆಯಾಟ ಆಡಿದ ಬಳಿಕ ಟೀಮ್‌ ಇಂಡಿಯಾದ ಗೆಲುವು ಕೂಡ ಸರಾಗವಾಗಿತ್ತು. ತಮ್ಮ ಅದ್ಭುತ ಫಾರ್ಮ್‌ ಮುಂದುವರಿಸಿದ ಶುಭ್‌ಮನ್‌ ಗಿಲ್‌, ಪವರ್‌ ಪ್ಲೇ ಅವಧಿಯಲ್ಲಿ ಆಸೀಸ್‌ ಬೌಲರ್‌ಗಳ ಬೆಂಡೆತ್ತಿದರು.


ಗಿಲ್‌ಗೆ ಹೋಲಿಸಿದರೆ, ರುತುರಾಜ್‌ ಗಾಯಕ್ವಾಡ್‌ ಬ್ಯಾಟಿಂಗ್‌ ನಿಧಾನಗತಿಯಲ್ಲಿ ಸಾಗಿತ್ತು. ಆದರೆ, ಆಫ್‌ಸೈಡ್‌ನಲ್ಲಿ ಗಿಲ್‌ ಅವರ ಬೌಂಡರಿಗಳ ಸ್ಟೈಲ್‌ಅನ್ನು ಗಮನಿಸಿದ ರುತುರಾಜ್‌ ಗಾಯಕ್ವಾಡ್‌, ತಮ್ಮ ಮೊಟ್ಟಮೊದಲ ಏಕದಿನ ಅರ್ಧಶತಕವನ್ನು ಪೂರೈಸಿದರು. ಇವರ ಜೊತೆಯಾಟ ಎಷ್ಟು ಫರ್ಪೆಕ್ಟ್‌ ಆಗಿತ್ತೆಂದರೆ, ಆಸೀಸ್‌ಗೆ ವಿಕೆಟ್‌ ಕೀಳುವ ಹೆಚ್ಚಿನ ಅವಕಾಶವೇ ಸಿಕ್ಕಿರಲಿಲ್ಲ. ಗಾಯಕ್ವಾಡ್‌ 17 ರನ್‌ ಬಾರಿಸಿದ್ದ ವೇಳೆ ಜೋಶ್‌ ಇಂಗ್ಲಿಸ್‌, ವಿಕೆಟ್‌ ಹಿಂದೆ ಕ್ಯಾಚ್‌ ಕೈಚೆಲ್ಲಿದ್ದರು. ಕೊನೆಗೆ ಆಡಂ ಜಂಪಾ ಬೌಲಿಂಗ್‌ ದಾಳಿಗೆ ಇಳಿದ ಬಳಿಕ ಆಸೀಸ್‌ಗೆ ವಿಕೆಟ್‌ ಅವಕಾಶ ಸಿಕ್ಕಿತು. ಗಾಯಕ್ವಾಡ್‌ ಎಲ್‌ಬಿಡಬ್ಲ್ಯು ಆಗಿ ಹೊರನಡೆದರು.

ಇದರ ಬೆನ್ನಲ್ಲಿಯೇ ಶ್ರೇಯಸ್‌ ಅಯ್ಯರ್‌ ರನೌಟ್‌ ಆಗಿ ಹೊರನಡೆದರು. ಈ ಮೊತ್ತಕ್ಕೆ ಮೂರು ರನ್‌ ಸೇರಿಸುವ ವೇಳೆಗೆ ಶುಭ್‌ ಮನ್‌ ಗಿಲ್‌ ಕೂಡ ಜಂಪಾಗೆ ವಿಕೆಟ್‌ ನೀಡಿದರು. ಭಾರತ ಕೇವಲ 9 ರನ್‌ ಅಂತರದಲ್ಲಿ ಮೂರು ವಿಕೆಟ್‌ ಕಳೆದುಕೊಂಡು ಅಪಾಯಕ್ಕೆ ಸಿಲುಕಿತ್ತು. 26 ಎಸೆತಗಳಲ್ಲಿ 2 ಬೌಂಡರಿಗಳೊಂದಿಗೆ 18 ರನ್‌ ಬಾರಿಸಿದ್ದ ಇಶಾನ್‌ ಕಿಶನ್‌ ಔಟಾಗುವ ವೇಳೆ ಭಾರತ 185 ರನ್‌ ಬಾರಿಸಿತ್ತು.

Ind vs Aus ಮೊಹಮ್ಮದ್ ಶಮಿ ಮಾರಕ ದಾಳಿ, ಭಾರತಕ್ಕೆ ಸ್ಪರ್ಧಾತ್ಮಕ ಗುರಿ ನೀಡಿದ ಆಸೀಸ್

ಈ ಹಂತದಲ್ಲಿ ಜೊತೆಯಾದ ನಾಯಕ ಕೆಎಲ್‌ ರಾಹುಲ್‌ ಹಾಗೂ ಸೂರ್ಯಕುಮಾರ್‌ ಯಾದವ್‌ ಐದನೇ ವಿಕೆಟ್‌ಗೆ ಆಕರ್ಷಕ 80 ರನ್‌ ಜೊತೆಯಾಟವಾಡಿದರು. ಆಸ್ಟ್ರೇಲಿಯಾ ವಿರುದ್ಧ ಹಿಂದಿ ಮೂರು ಪಂದ್ಯಗಳಲ್ಲಿ ಗೋಲ್ಡನ್‌ ಡಕ್‌ ಎದುರಿಸಿದ್ದ ಸೂರ್ಯಕುಮಾರ್‌ ಯಾದವ್‌, ಈ ಬಾರಿ ಮಾತ್ರ ಎಚ್ಚರಿಕೆಯ ಆಟವಾಡಿ ಮೂರನೇ ಏಕದಿನ ಅರ್ಧಶತಕವನ್ನು ಬಾರಿಸಿದರು. ಅಲ್ಲದೆ ಕಳೆದ 11 ಇನ್ನಿಂಗ್ಸ್‌ಗಳಲ್ಲಿ ಅವರ ಮೊದಲ ಅರ್ಧಶತಕ ಎನಿಸಿದೆ. ಸೂರ್ಯಕುಮಾರ್ ಔಟಾದಾಗಲೂ ಭಾರತ ಗೆಲುವಿನಿಂದ ಕೆಲ ರನ್‌ಗಳ ದೂರವಿತ್ತು. ಈ ಹಂತದಲ್ಲಿ ಕೆಎಲ್‌ ರಾಹುಲ್‌ 14ನೇ ಅರ್ಧಶತಕ ಪೂರೈಸಿ ತಂಡಕ್ಕೆ ಗೆಲುವು ನೀಡಿದರು. 

ಪಂತ್ ಬಳಿಕ ಪಾಕ್ ವೇಗಿ ಮೇಲೆ ಕಣ್ಹಾಕಿದ ಊರ್ವಶಿ; ಆತ ಈಗ ವಿಶ್ವಕಪ್‌ನಿಂದಲೇ ಔಟ್..!

Latest Videos
Follow Us:
Download App:
  • android
  • ios