Asianet Suvarna News Asianet Suvarna News

ಇಂದಿನಿಂದ ಭಾರತ-ಇಂಗ್ಲೆಂಡ್ ನೆಟ್ಸ್‌ ಪ್ರಾಕ್ಟೀಸ್‌ ಆರಂಭ

ಭಾರತ ಹಾಗೂ ಇಂಗ್ಲೆಂಡ್‌ ತಂಡಗಳು 4 ಪಂದ್ಯಗಳ ಟೆಸ್ಟ್ ಸರಣಿಗೆ ಸಜ್ಜಾಗುತ್ತಿದ್ದು, ಇಂದಿನಿಂದ(ಫೆ.03) ಉಭಯ ತಂಡದ ಆಟಗಾರರು ಕ್ರೀಸ್‌ಗಿಳಿಯಲಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

India and England Team begin Net Practice ahead of four Match Test series kvn
Author
Chennai, First Published Feb 2, 2021, 9:31 AM IST

ಚೆನ್ನೈ(ಫೆ.02): ಭಾರತ ಹಾಗೂ ಇಂಗ್ಲೆಂಡ್‌ ಕ್ರಿಕೆಟಿಗರ ಕ್ವಾರಂಟೈನ್‌ ಅವಧಿ ಇಂದು ಮುಕ್ತಾಯವಾಗಿದೆ. ಉಭಯ ತಂಡಗಳ ಆಟಗಾರರಿಗೆ 6 ದಿನಗಳ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಈ ವೇಳೆ ಆಟಗಾರರಿಗೆ 3 ಬಾರಿ ಕೋವಿಡ್‌ ಪರೀಕ್ಷೆ ನಡೆಸಲಾಗಿದೆ. ಮೂರರಲ್ಲೂ ನೆಗೆಟಿವ್‌ ವರದಿ ಬಂದಿದೆ.

ಕಳೆದ ಬುಧವಾರದಿಂದ ಆಟಗಾರರು ಬಯೋ-ಬಬಲ್‌ನಲ್ಲಿ ಇದ್ದರು. ಸೋಮವಾರ ಸಂಜೆ 5 ಗಂಟೆಗೆ ಎರಡೂ ತಂಡಗಳ ಆಟಗಾರರು ಹೊರಾಂಗಣ ಅಭ್ಯಾಸದಲ್ಲಿ ನಡೆಸಿದರು. ಮಂಗಳವಾರದಿಂದ ನೆಟ್ಸ್‌ ಅಭ್ಯಾಸ ಆರಂಭವಾಗಲಿದೆ. ಮಧ್ಯಾಹ್ನ 2 ರಿಂದ 5 ಗಂಟೆಯ ಅವಧಿಯಲ್ಲಿ ಉಭಯ ತಂಡಗಳ ಆಟಗಾರರು ನೆಟ್ಸ್‌ನಲ್ಲಿ ಅಭ್ಯಾಸ ನಡೆಸಲಿದ್ದಾರೆ ಎನ್ನಲಾಗಿದೆ. ಇಂಗ್ಲೆಂಡ್‌ನ ಆಲ್ರೌಂಡರ್‌ ಬೆನ್‌ ಸ್ಟೋಕ್ಸ್‌, ಜೋಫ್ರಾ ಆರ್ಚರ್‌ ಹಾಗೂ ರೋರಿ ಬನ್ಸ್‌ರ್‍ ಕಳೆದ ಶನಿವಾರದಿಂದಲೇ ಹೊರಾಂಗಣ ಅಭ್ಯಾಸದಲ್ಲಿ ನಿರತರಾಗಿದ್ದರು.

ಭಾರತ-ಇಂಗ್ಲೆಂಡ್‌ 2ನೇ ಟೆಸ್ಟ್‌: ಪ್ರೇಕ್ಷಕರಿಗೆ ಪ್ರವೇಶ?

ಭಾರತ ಹಾಗೂ ಇಂಗ್ಲೆಂಡ್‌ ನಡುವಿನ 4 ಪಂದ್ಯಗಳ ಟೆಸ್ಟ್‌ ಸರಣಿ ಫೆಬ್ರವರಿ 5 ರಿಂದ ಆರಂಭವಾಗಲಿದೆ. ಮೊದಲೆರಡು ಟೆಸ್ಟ್‌ ಪಂದ್ಯಗಳಿಗೆ ಚೆನ್ನೈ ಆತಿಥ್ಯವನ್ನು ವಹಿಸಿದ್ದರೆ, ಉಳಿದೆರಡು ಟೆಸ್ಟ್ ಪಂದ್ಯಗಳಿಗೆ ಅಹಮದಾಬಾದ್‌ ಆತಿಥ್ಯವನ್ನು ವಹಿಸಿದೆ.
 

Follow Us:
Download App:
  • android
  • ios