ಗ್ರೀನ್ ಎಂಟ್ರಿಯಿಂದ ಬದಲಾಗುತ್ತಾ RCB ಹಣೆಬರಹ..? ಎದುರಾಳಿಗೆ ನಡುಕ ಹುಟ್ಟಿಸುತ್ತಿದೆ ಬ್ಯಾಟಿಂಗ್ ಲೈನ್ಅಪ್..!

ಗ್ರೀನ್ ಬಂದಿರೋದ್ರಿಂದ RCB ತಂಡದ ಬ್ಯಾಟಿಂಗ್ ಸ್ಟ್ರೆಂಥ್ ಹೆಚ್ಚಾಗಿದೆ. ಕಳೆದ ಸೀಸನ್ನಲ್ಲಿ RCB ಮಿಡಲ್ ಆರ್ಡರ್ ತುಂಬಾನೇ ವೀಕ್ ಆಗಿತ್ತು. ಒಂದೇ ಒಂದು ಪಂದ್ಯದಲ್ಲೂ ಮಿಡಲ್ ಆರ್ಡರ್ ಬ್ಯಾಟರ್ಸ್ ತಂಡಕ್ಕೆ ಗೆಲುವು ತಂದುಕೊಟ್ಟಿರಲಿಲ್ಲ. ಆದ್ರೆ, ಕ್ಯಾಮರೂನ್ ಗ್ರೀನ್ ಆ ಕೊರತೆಯನ್ನ ನೀಗಿಸೋ ಸಾಮರ್ಥ್ಯ ಹೊಂದಿದ್ದಾರೆ. 

IPL 2024 Cameron Green entry may Change RCB Fortune kvn

ಬೆಂಗಳೂರು(ನ.29) IPLನಲ್ಲಿ ಆಸೀಸ್ ಆಲ್ರೌಂಡರ್ ಕ್ಯಾಮರೂನ್ ಗ್ರೀನ್ ಎಂಟ್ರಿ ಯಿಂದ RCBಗೆ ಬಲ ಹೆಚ್ಚಿದೆ. ಆದ್ರೆ, ಗ್ರೀನ್‌ರನ್ನು ತಂಡಕ್ಕೆ ಸೇರಿಸಿ ಕೊಂಡಿರೋ ಫ್ರಾಂಚೈಸಿ, ಆ ಒಂದು ವಿಷ್ಯದಲ್ಲಿ ಮಾತ್ರ ಎಡವಿದೆ. ಇದ್ರಿಂದ ತಂಡಕ್ಕೆ ದೊಡ್ಡ ಕೊರತೆ ಉಂಟಾಗಿದೆ. ಮುಂದಿನ ತಿಂಗಳು ನಡೆಯೋ ಮಿನಿ ಆಕ್ಷನ್ನಲ್ಲಿ ಈ ಕೊರತೆಯನ್ನ ನೀಗಿಸಿಕೊಳ್ಳಬೇಕಿದೆ. ಅಷ್ಟಕ್ಕೂ ಏನದು ಕೊರತೆ ಅಂತೀರಾ..? ಈ ಸ್ಟೋರಿ ನೋಡಿ.

IPL ಸೀಸನ್ 17ರ ಸೀಸನ್ ಆರಂಭಕ್ಕೂ ಮೊದಲೇ ಅಭಿಮಾನಿಗಳಿಗೆ ಸಖತ್ ಥ್ರಿಲ್ ನೀಡ್ತಿದೆ. ಮಿನಿ ಆಕ್ಷನ್‌ಗೂ ಮುನ್ನ ಪ್ರಮುಖ ಆಟಗಾರರನ್ನೇ ಕೆಲ ತಂಡಗಳು ಕೈ ಬಿಟ್ಟಿವೆ. ಅದರಲ್ಲೂ ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟನ್ಸ್ ಬಿಟ್ಟು, ಮತ್ತೆ ಮುಂಬೈ ಇಂಡಿಯನ್ಸ್ ಕ್ಯಾಂಪ್ ಸೇರಿ ಶಾಕ್ ನೀಡಿದ್ದಾರೆ. ಇನ್ನು ಮುಂಬೈ ಇಂಡಿಯನ್ಸ್  ತಂಡದಲ್ಲಿದ್ದ ಆಲ್ರೌಂಡರ್ ಕ್ಯಾಮರೂನ್ ಗ್ರೀನ್, RCBಗೆ ಎಂಟ್ರಿ ಕೊಟ್ಟಿದ್ದಾರೆ. ಇದರಿಂದ ರೆಡ್ ಆರ್ಮಿ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ. 

ಯೆಸ್, ಗ್ರೀನ್ ಬಂದಿರೋದ್ರಿಂದ RCB ತಂಡದ ಬ್ಯಾಟಿಂಗ್ ಸ್ಟ್ರೆಂಥ್ ಹೆಚ್ಚಾಗಿದೆ. ಕಳೆದ ಸೀಸನ್ನಲ್ಲಿ RCB ಮಿಡಲ್ ಆರ್ಡರ್ ತುಂಬಾನೇ ವೀಕ್ ಆಗಿತ್ತು. ಒಂದೇ ಒಂದು ಪಂದ್ಯದಲ್ಲೂ ಮಿಡಲ್ ಆರ್ಡರ್ ಬ್ಯಾಟರ್ಸ್ ತಂಡಕ್ಕೆ ಗೆಲುವು ತಂದುಕೊಟ್ಟಿರಲಿಲ್ಲ. ಆದ್ರೆ, ಕ್ಯಾಮರೂನ್ ಗ್ರೀನ್ ಆ ಕೊರತೆಯನ್ನ ನೀಗಿಸೋ ಸಾಮರ್ಥ್ಯ ಹೊಂದಿದ್ದಾರೆ. 

ಗುಡ್‌ ನ್ಯೂಸ್ ಕೊಟ್ಟ ಬಿಸಿಸಿಐ: ರಾಹುಲ್ ದ್ರಾವಿಡ್ ಟೀಂ ಇಂಡಿಯಾ ಹೆಡ್‌ ಕೋಚ್ ಆಗಿ ಮುಂದುವರಿಕೆ..!

IPL 16ರ ಸೀಸನ್‌ಗೂ ಮುನ್ನ ನಡೆದ ಮೆಗಾ ಆಕ್ಷನ್ನಲ್ಲಿ ಮುಂಬೈ ಇಂಡಿಯನ್ಸ್ 17.5 ಕೋಟಿ ನೀಡಿ ಗ್ರೀನ್ರನ್ನ ಖರೀದಿಸಿತ್ತು. ಪಡೆದ ದುಡ್ಡಿಗೆ ಮೋಸ ಮಾಡದ ಈ ಆಸೀಸ್ ಅಲ್ರೌಂಡರ್, ಬ್ಯಾಟಿಂಗ್ನಲ್ಲಿ 16 ಪಂದ್ಯಗಳಿಂದ 1 ಶತಕ ಮತ್ತು 3 ಅರ್ಧಶತಕ ಸೇರಿ 452 ರನ್ ಕಲೆಹಾಕಿದ್ರು. ಬೌಲಿಂಗ್ನಲ್ಲಿ 6 ವಿಕೆಟ್ ಉರುಳಿಸಿದ್ರು. 

ಎದುರಾಳಿಗೆ ನಡುಕ ಹುಟ್ಟಿಸುತ್ತಿದೆ RCB ಬ್ಯಾಟಿಂಗ್ ಲೈನ್ಅಪ್..!

ಯೆಸ್, RCB ಬ್ಯಾಟಿಂಗ್ ಲೈನ್ ಅಪ್ ಸಖತ್ ಸ್ಟ್ರಾಂಗ್ ಆಗಿದೆ. ಆರಂಭಿಕರಾಗಿ ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್ ಬ್ಯಾಟ್  ಬೀಸಲಿದ್ದಾರೆ. ಇನ್ನು 3ನೇ ಕ್ರಮಾಂಕದಲ್ಲಿ ರಜತ್ ಪಟಿದಾರ್, 4ನೇ ಕ್ರಮಾಂಕದಲ್ಲಿ ಕ್ಯಾಮರೂನ್ ಗ್ರೀನ್, ಐದನೇ ಕ್ರಮಾಂಕದಲ್ಲಿ  ಗ್ಲೆನ್ ಮ್ಯಾಕ್ಸ್ವೆಲ್ ಆಡಲಿದ್ದಾರೆ. ಈ ಎಲ್ಲಾ ಬ್ಯಾಟರ್ಸ್ T20ಯಲ್ಲಿ ಅದ್ಭುತ ದಾಖಲೆ ಹೊಂದಿದ್ದಾರೆ. 

'ಕಳೆದ ಮೂರು ವರ್ಷದಲ್ಲಿ...': RCB ತಂಡದಿಂದ ಹೊರಬಿದ್ದ ಬೆನ್ನಲ್ಲೇ ಭಾವನಾತ್ಮಕ ಸಂದೇಶ ರವಾನಿಸಿದ ಹರ್ಷಲ್ ಪಟೇಲ್

ಡುಪ್ಲೆಸಿ ಪಡೆಗೆ ಬೇಕಿದೆ ಸ್ಟಾರ್ ಬೌಲರ್‌ಗಳು..! 

ಯೆಸ್, ಚಾಂಪಿಯನ್ಸ್ ಪಟ್ಟ ಅಲಂಕರಿಸಬೇಕಂದ್ರೆ ಬ್ಯಾಟಿಂಗ್ ಜೊತೆಗೆ ಬೌಲಿಂಗ್ ವಿಭಾಗವೂ ಬಲಿಷ್ಠವಾಗಿರಬೇಕು. ಆದ್ರೆ, RCB ತಂಡದಲ್ಲಿ ಸ್ಟಾರ್ ಬೌಲರ್ಗಳ ಕೊರತೆ ಎದುರಾಗಿದೆ. ಯಾಕಂದ್ರೆ, ತಂಡ ಜೋಸ್ ಹೇಜಲ್‌ವುಡ್, ವನಿಂದು ಹಸರಂಗ, ಹರ್ಷಲ್ ಪಟೇಲ್ರಂತಹ ಸ್ಟಾರ್ ಬೌಲರ್ಗಳನ್ನು ತಂಡದಿಂದ ರಿಲೀಸ್ ಮಾಡಲಾಗಿದೆ. ಹೀಗಾಗಿ ಮುಂದಿನ ತಿಂಗಳು ನಡೆಯೋ ಮಿನಿ ಹರಾಜಿನಲ್ಲಿ ಕನಿಷ್ಠ ಒಬ್ಬ ಭಾರತೀಯ ಮತ್ತು ಒಬ್ಬ ವಿದೇಶಿ ಬೌಲರ್‌ನ  ಖರೀದಿಸಬೇಕಿದೆ. 

ಆಸೀಸ್‌ನ ವೇಗಿ ಮಿಚೆಲ್ ಸ್ಟಾರ್ಕ್, ಹರಾಜಿನಲ್ಲಿ ತಮ್ಮ ಹೆಸರು ರಿಜಿಸ್ಟರ್ ಮಾಡಿಸಿದ್ದಾರೆ. ಸ್ಟಾರ್ಕ್‌ಗಾಗಿ  RCB ಬಿಡ್ ಮಾಡೋ ಸಾಧ್ಯತೆಯಿದೆ. ಒಟ್ಟಿನಲ್ಲಿ ಬ್ಯಾಟಿಂಗ್‌ನಂತೆ ಬೌಲಿಂಗ್ನಲ್ಲೂ ತಂಡ ಸ್ಟ್ರಾಂಗ್ ಅದ್ರೆ, ಈ ಬಾರಿ RCB ಕಪ್ ಎತ್ತಿಹಿಡಿದ್ರು ಅಚ್ಚರಿ ಇಲ್ಲ. 

ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್
 

Latest Videos
Follow Us:
Download App:
  • android
  • ios