ಸ್ವಲ್ಪ ಯಾಮಾರಿದ್ರೂ ಟೀಂ ಇಂಡಿಯಾಗೆ ವಿಂಡೀಸ್‌ ಎದುರು ಸೋಲು ತಪ್ಪಿದ್ದಲ್ಲ..!

ಭಾರತ-ವೆಸ್ಟ್ ಇಂಡೀಸ್ ನಡುವಿನ ಟೆಸ್ಟ್ ಸರಣಿ ಇಂದಿನಿಂದ ಆರಂಭ
ಆತಿಥೇಯ ವಿಂಡೀಸ್ ತಂಡವನ್ನು ಲಘುವಾಗಿ ಪರಿಗಣಿಸುವಂತಿಲ್ಲ
ಅದರಲ್ಲೂ ಈ ಮೂವರ ಎದುರು ಎಚ್ಚರಿಕೆಯಿಂದ ಆಡಬೇಕಿದೆ ಭಾರತ

Ind vs WI Team India need to play Carefully against West Indies in Test Series kvn

ಬೆಂಗಳೂರು(ಜು.12) ಇಂಡೋ- ವಿಂಡೀಸ್ ಟೆಸ್ಟ್ ಸರಣಿ ಆರಂಭಕ್ಕೆ ಕ್ಷಣಗಣನ ಶುರುವಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್ ನಂತರ ಟೀಂ ಇಂಡಿಯಾ ಮತ್ತೆ ಟೆಸ್ಟ್​ ಕ್ರಿಕೆಟ್ ಆಡಲು ರೆಡಿಯಾಗಿದೆ. 2023-25ನೇ ಸಾಲಿನ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​  ಮೊದಲ ಸರಣಿಯಲ್ಲಿ ಕೆರಿಬಿಯನ್ನರ ಸವಾಲು ಎದುರಿಸಲಿದೆ. ವಿಂಡೀಸ್​ಗೆ ಹೋಲಿಸಿದ್ರೆ, ರೋಹಿತ್ ಶರ್ಮಾ ಪಡೆ ಎಲ್ಲದರಲ್ಲೂ  ಸಖತ್ ಸ್ಟ್ರಾಂಗ್ ಆಗಿದೆ. ಹಾಗಂತ ಕ್ರೆಗ್ ಬ್ರಾಥ್‌​ವೇಟ್ ಪಡೆಯನ್ನ ಹಗುರವಾಗಿ ಪರಿಗಣಿಸುವಂತಿಲ್ಲ. 

ಯೆಸ್,  ಯಾವುದೇ ಕಾರಣಕ್ಕೂ ಟೀಂ ಇಂಡಿಯಾ, ವೆಸ್ಟ್ ಇಂಡೀಸ್​ನ ಲೈಟಾಗಿ ತೆಗೆದುಕೊಳ್ಳುವಂತಿಲ್ಲ. ಅದರಲ್ಲೂ  ಈ ಮೂವರು ಆಟಗಾರರ ಬಗ್ಗೆ ಎಚ್ಚರಿಕೆಯಿಂದಿರಲೇಬೇಕು. ಇವರ ವಿಚಾರದಲ್ಲಿ ಸ್ವಲ್ಪ ಯಾಮಾರಿದ್ರೂ, ಟೀಂ ಇಂಡಿಯಾಗೆ ಕಂಟಕ ತಪ್ಪಿದ್ದಲ್ಲ. 

ಕ್ಯಾಪ್ಟನ್ ಬ್ರಾತ್​ವೈಟ್​ನ ಆದಷ್ಟು ಬೇಗ ಕಟ್ಟಿಹಾಕಬೇಕು..!

Ind vs WI Team India need to play Carefully against West Indies in Test Series kvn

ಸದ್ಯ ಟೆಸ್ಟ್ ಕ್ರಿಕೆಟ್​​ನಲ್ಲಿ ಬಾಜ್ಬಾಲ್ ಟ್ರೆಂಡ್ ನಡೆಯುತ್ತಿದೆ. ಎಲ್ಲಾ ತಂಡಗಳು ವೇಗವಾಗಿ ರನ್​ಕಲೆ ಹಾಕಲು ನೋಡ್ತಿವೆ. ಆದ್ರೆ, ವಿಂಡೀಸ್ ನಾಯಕ ಬ್ರಾಥ್‌​ವೇಟ್ ಮಾತ್ರ,  ಓಲ್ಡ್​ ಈಸ್ ಗೋಲ್ಡ್​ ಎನ್ನುವಂತೆ ಬ್ಯಾಟ್ ಬೀಸ್ತಿದ್ದಾರೆ. ಕ್ರೀಸ್​ನಲ್ಲಿ ಗಂಟೆಗಳ ಕಾಲ ನೆಲಕಚ್ಚಿ ನಿಂತು ಎದುರಾಳಿ ಬೌಲರ್​ಗಳನ್ನ ಕಾಡ್ತಾರೆ. ಇದರಿಂದ ಬ್ರಾಥ್‌​ವೇಟ್​ನ ಆದಷ್ಟು ಬೇಗ ಕಟ್ಟಿಹಾಕಬೇಕು. ಇಲ್ಲವಾದಲ್ಲಿ ಟೀಂ ಇಂಡಿಯಾದ ಪಾಲಿಗೆ ಬ್ರಾಥ್‌​ವೇಟ್​ ವಿಲನ್ ಅಗಲಿದ್ದಾನೆ. 

ವಿಂಡೀಸ್ ಎದುರಿನ ಮೊದಲ ಟೆಸ್ಟ್‌ಗೆ ಭಾರತ ಸಂಭಾವ್ಯ ತಂಡ: ಯಾವೆಲ್ಲಾ ಆಟಗಾರರಿಗೆ ಸಿಗಲಿದೆ ಸ್ಥಾನ?

ಅದ್ಭುತ ಫಾರ್ಮ್​ನಲ್ಲಿ ಜೂನಿಯರ್ ಚಂದ್ರಪಾಲ್..!

Ind vs WI Team India need to play Carefully against West Indies in Test Series kvn

ತಂದೆ ಶಿವನರೈನ್ ಚಂದ್ರಪಾಲ್​ರಂತೆ ತೇಗ್‌ನರೈನ್ ಚಂದ್ರಪಾಲ್ ಕೂಡ ಅದ್ಭುತ ಬ್ಯಾಟರ್​.  ಬ್ರಾಥವೇಟ್​ಗೆ ಹೋಲಿಸಿದ್ರೆ ತೇಗ್‌ನರೈನ್ ಫಾಸ್ಟಾಗಿ ರನ್​ಗಳಿಸ್ತಾರೆ. ಆದ್ರೆ, ತೇಗ್‌ನರೈನ್ ಕೂಡ ಲಾಂಗ್ ಇನ್ನಿಂಗ್ಸ್ ಆಡುವ ಸಾಮರ್ಥ್ಯ ಹೊಂದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್​ ಸರಣಿಯಲ್ಲೇ ಈ ಜೂನಿಯರ್ ಚಂದ್ರಪಾಲ್ ಮಿಂಚಿದ್ರು. ಈವರೆಗು 11 ಇನ್ನಿಂಗ್ಸ್​ಗಳಲ್ಲಿ ಬ್ಯಾಟಿಂಗ್ ಮಾಡಿರೋ ತೇಗ್‌ನರೈನ್ 45.3ರ ಸರಾಸರಿಯಲ್ಲಿ 1 ಶತಕ, 1 ದ್ವಿಶತಕ, 1 ಅರ್ಧಶತಕ ಸಿಡಿಸಿದ್ದಾರೆ. 

ರಾಕೀಂ ಬೌಲಿಂಗ್​ನಲ್ಲಿ ಎಚ್ಚರಿಕೆಯಿಂದ ಬ್ಯಾಟ್ ಬೀಸ್ಬೇಕು..!

Ind vs WI Team India need to play Carefully against West Indies in Test Series kvn

ಯೆಸ್, 140 ಕೆಜಿಯ ರಾಕೀಂ ಕಾರ್ನ್​ವಾಲ್ , ಎರಡು ವರ್ಷಗಳ ನಂತರ ವಿಂಡೀಸ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆಫ್ ಸ್ಪಿನ್ನರ್ ಅಗಿರೋ  ರಾಕೀಂ ಅದ್ಭುತ ಸ್ಪಿನ್ ಮೂಲಕ ಬ್ಯಾಟ್ಸ್​​ಮನ್​ಗಳನ್ನ ಕಾಡಲಿದ್ದಾರೆ. ಹೈಟ್ ಕೂಡ ರಕೀಮ್​ಗೆ ​ ಪ್ಲಸ್ ಪಾಯಿಂಟ್ ಆಗಿದೆ. ಬ್ಯಾಟಿಂಗ್​ನಲ್ಲೂ ಅಬ್ಬರಿಸೋ  ತಾಕತ್ತು ಹೊಂದಿದ್ದಾರೆ. ರಾಕೀಂ ವಿರುದ್ದ ಭಾರತದ ಬ್ಯಾಟರ್ಸ್ ಎಚ್ಚರಿಕೆಯಿಂದ ಆಡಬೇಕಿದೆ. 

ಒಟ್ಟಿನಲ್ಲಿ  ಟೀಂ ಇಂಡಿಯಾಗೆ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿ ಸುಲಭದ ತುತ್ತಲ್ಲ. ಸ್ವಲ್ಪ ಯಾಮಾರಿದ್ರೂ ಸೋಲು ತಪ್ಪಿದ್ದಲ್ಲ. ಅದರಲ್ಲೂ ತವರಿನಲ್ಲಿ ಆಡುತ್ತಿರೋ ವಿಂಡೀಸ್​ಗೆ ಅಲ್ಲಿನ ಪಿಚ್ ಕಂಡೀಷನ್ ಬಗ್ಗೆ ಚೆನ್ನಾಗಿ ಅರಿವಿರಲಿದೆ. ಈ ಎಲ್ಲದನ್ನ ಲೆಕ್ಕಕ್ಕೆ ತೆಗೆದುಕೊಂಡು ಟೀಂ ಇಂಡಿಯಾ ಸ್ಪೆಷಲ್ ಗೇಮ್​ಪ್ಲಾನ್​ನೊಂದಿಗೆ ಕಣಕ್ಕಿಳಿಯಬೇಕಿದೆ.

Latest Videos
Follow Us:
Download App:
  • android
  • ios