Asianet Suvarna News Asianet Suvarna News

IND vs SL Test 303 ರನ್ ಸಿಡಿಸಿ ಡಿಕ್ಲೇರ್ ಘೋಷಿಸಿದ ಟೀಂ ಇಂಡಿಯಾ, ಲಂಕಾಗೆ 447 ರನ್ ಟಾರ್ಗೆಟ್!

  • ಭಾರತ ಶ್ರೀಲಂಕಾ ಪಿಂಕ್ ಬಾಲ್ ಟೆಸ್ಟ್ ಬೆಂಗಳೂರು
  • 303 ರನ್ ಸಿಡಿಸಿ ಎರಡನೇ ಇನ್ನಿಂಗ್ಸ್ ಡಿಕ್ಲೇರ್
  • 446 ರನ್ ಮುನ್ನಡೆ ಪಡೆದುಕೊಂಡ ಟೀಂ ಇಂಡಿಯಾ
IND vs SL Test Pink ball test Team India declare by 303 runs and set 447 runs target to Srilanka ckm
Author
Bengaluru, First Published Mar 13, 2022, 9:03 PM IST

ಬೆಂಗಳೂರು(ಮಾ.13): ಭಾರತ ಹಾಗೂ ಶ್ರೀಲಂಕಾ ನಡುವಿನ ಪಿಂಕ್ ಬಾಲ್ ಟೆಸ್ಟ್ ಪಂದ್ಯ ಎರಡನೇ ದಿನದಲ್ಲೇ ರೋಚಕ ಘಟ್ಟ ತಲುಪಿದೆ. ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿರುವ ಟೀಂ ಇಂಡಿಯಾ ಇದೀಗ ಮೂರೇ ದಿನಕ್ಕೆ ಪಂದ್ಯ ಅಂತ್ಯಗೊಳಿಸುವ ಲೆಕ್ಕಾಚಾರದಲ್ಲಿದೆ. 9 ವಿಕೆಟ್ ನಷ್ಟಕ್ಕೆ 303 ರನ್ ಸಿಡಿಸಿದ ಟೀಂ ಇಂಡಿಯಾ ಡಿಕ್ಲೇರ್ ಘೋಷಿಸಿದೆ. ಈ ಮೂಲಕ ಭಾರತ 446 ರನ್ ಮುನ್ನಡೆ ಪಡೆದುಕೊಂಡಿದೆ.

ಎರಡನೇ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾಗೆ ಮಯಾಂಕ್ ಅಗರ್ವಾಲ್ ಹಾಗೂ ನಾಯಕ ರೋಹಿತ್ ಶರ್ಮಾ ಡೀಸೆಂಟ್ ಆರಂಭ ನೀಡಿದರು. ಅಗರ್ವಾಲ್ 22 ರನ್ ಸಿಡಿಸಿ ಔಟಾದರು ಇತ್ತ ರೋಹಿತ್ ಶರ್ಮಾ 46 ರನ್ ಕಾಣಿಕೆ ನೀಡಿದ್ದರು. ಇನ್ನು ಹನುಮಾ ವಿಹಾರಿ 35 ರನ್ ಸಿಡಿಸಿದ್ದರು. ನಾಯಕ ವಿರಾಟ್ ಕೊಹ್ಲಿ 13 ರನ್ ಸಿಡಿಸಿ ಔಟಾದರು. ಈ ಮೂಲಕ ಎರಡನೇ ತವರು ನೆಲ ಬೆಂಗಳೂರಿನಲ್ಲಿ ಶತಕ ಸಿಡಿಸುವ ಕನಸು ಈಡೇರಲಿಲ್ಲ.

Pink Ball Test: ಬುಮ್ರಾ ಬಿರುಗಾಳಿ, ಲಂಕಾ ಕೇವಲ 109 ರನ್‌ಗಳಿಗೆ ಆಲೌಟ್‌..!

ಕುಸಿದ ತಂಡಕ್ಕೆ ರಿಷಬ್ ಪಂತ್ ಹಾಗೂ ಶ್ರೇಯಸ್ ಅಯ್ಯರ್ ಹೋರಾಟ ನೆರವಾಯಿತು. ಪಂತ್ 50 ರನ್ ಕಾಣಿಕೆ ನೀಡಿದರು. ಇತ್ತ ಶ್ರೇಯಸ್ ಅಯ್ಯರ್ 67 ರನ್ ಸಿಡಿಸಿದರು. ಆದರೆ ರವೀಂದ್ರ ಜಡೇಜಾ 22 ರನ್ ಸಿಡಿಸಿ ಔಟಾದರು. ರವಿಚಂದ್ರನ್ ಅಶ್ವಿನ್ 13 ರನ್ ಸಿಡಿಸಿ ಔಟಾದರು. ಇನ್ನು ಅಕ್ಸರ್ ಪಟೇಲ್ 9 ರನ್ ಸಿಡಿಸಿ ಔಟಾದರು. ಈ ಮೂಲಕ ಟೀ ಇಂಡಿಯಾ ಎರಡನೇ ಇನ್ನಿಂಗ್ಸ್‌ನಲ್ಲಿ 9 ವಿಕೆಟ್ ನಷ್ಟಕ್ಕೆ 303 ರನ್ ಸಿಡಿಸಿ ಡಿಕ್ಲೇರ್ ಮಾಡಿಕೊಂಡಿತು.

Pink Ball Test: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಒಂದೇ ದಿನ 16 ವಿಕೆಟ್ ಪತನ..!

ಮೊದಲ ಇನ್ನಿಂಗ್ಸ್ ಮುನ್ನಡೆ ಹಾಗೂ ಎರಡನೇ ಇನ್ನಿಂಗ್ಸ್‌ನ 303 ರನ್‌ಗಳೊಂದಿಗೆ ಭಾರತ 446 ರನ್ ಮುನ್ನಡೆ ಪಡೆದುಕೊಂಡಿತು. ಇದೀಗ ಶ್ರೀಲಂಕಾ ಗೆಲುವಿಗೆ 447 ರನ್ ಸಿಡಿಸಬೇಕಿದೆ.

 

ಭಾರತ ಮೊದಲ ಇನ್ನಿಂಗ್ಸ್:
ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ ಶ್ರೇಯಸ್ ಅಯ್ಯರ್ ಭರ್ಜರಿ ಪ್ರದರ್ಶನ ತಂಡಕ್ಕೆ ನೆರವಾಯಿತು. ಆರಂಭಿಕರು ಬಹುಬೇಗನೆ ವಿಕೆಟ್ ಪತನ, ಮಧ್ಯಮ ಕ್ರಮಾಂದಲ್ಲಿ ದಿಟ್ಟ ಹೋರಾಟದ ಕೊರತೆಯನ್ನು ಶ್ರೇಯಸ್ ಅಯ್ಯರ್ ನೀಗಿಸಿದ್ದರು. ಅಯ್ಯರ್ 92 ರನ್ ಸಿಡಿಸಿದ್ದರು. 

ಮಯಾಂಕ್ ಅಗರ್ವಾಲ್ ಕೇವಲ 4 ರನ್ ಸಿಡಿಸಿದರೆ, ರೋಹಿತ್ ಶರ್ಮಾ 15 ರನ್ ಸಿಡಿಸಿದ್ದರು. ಹನುಮಾ ವಿಹಾರ್ 31 ರನ್ ಸಿಡಿಸಿದರೆ, ವಿರಾಟ್ ಕೊಹ್ಲಿ 23 ರನ್ ಸಿಡಿಸಿದರು. ರಿಷಬ್ ಪಂತ್ ಜೊತೆ ಶ್ರೇಯಸ್ ಅಯ್ಯರ್ ಜೊತೆಯಾಟ ಆರಂಭಗೊಂಡಿತು. ಪಂತ್ 39 ರನ್ ಸಿಡಿಸಿ ಔಟಾದರು. ರವೀಂದ್ರ ಜಡೇಜಾ 4 ರನ್ ಸಿಡಿಸಿ ಔಟಾದು. ಆರ್ ಅಶ್ವಿನ್ 13, ಅಕ್ಸರ್ ಪಟೇಲ 9, ಮೊಹಮ್ಮದ್ ಶಮಿ 5 ರನ್ ಸಿಡಿಸಿ ಔಟಾದರು. ಈ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ 252 ರನ್‌ಗೆ ಆಲೌಟ್ ಆಯಿತು.

ಶ್ರೀಲಂಕಾ ಮೊದಲ ಇನ್ನಿಂಗ್ಸ್
ಭಾರತದ ವಿರುದ್ಧ ದಿಟ್ಟ ಹೋರಾಟ ನೀಡಲು ಶ್ರೀಲಂಕಾಗೆ ಭಾರತೀಯ ಬೌಲರ್‌ಗಳು ಅವಕಾಶ ನೀಡಲಿಲ್ಲ. ಕುಶಾಲ ಮೆಂಡಿಸ್ 2 ರನ್, ಕರುಣಾರತ್ನೆ 4 ರನ್, ತಿರಿಮನೆ 8 ರನ್ ಸಿಡಿಸಿ ಔಟಾದರು. ಮ್ಯಾಥ್ಯೂಸ್ ಸಿಿಸಿದ 43 ರನ್ ಲಂಕಾ ತಂಡಕ್ಕೆ ಆಸರೆಯಾಯಿತು. ಇನ್ನು ಧನಂಜಯ್ ಡಿ ಸಿಲ್ವಾ 10 ರನ್ ಸಿಡಿಸಿದರು. ಅಸಲಂಕಾ 5 ರನ್ ಸಿಡಿಸಿ ಔಟಾದರು. ಇನ್ನು ಡಿಕ್‌ವೆಲ್ಲಾ 21 ರನ್ ಕಾಣಿಕೆ ನೀಡಿಿದರು. ಲಕ್ಮಾಲ್ ಸೇರಿದಂತೆ ಟೇಲ್ ಎಂಡ್ ಬ್ಯಾಟರ್‌ಗಳಿಂದ ರನ್ ಹರಿದು ಬರ್ಲಿಲ್ಲ. ಹೀಗಾಗಿ ಶ್ರೀಲಂಕಾ 109 ರನ್‌ಗೆ ಆಲೌಟ್ ಆಯಿತು.

Follow Us:
Download App:
  • android
  • ios