Asianet Suvarna News Asianet Suvarna News

IND vs SL Test ಬುಮ್ರಾ ದಾಳಿಗೆ ನಡುಗಿದ ಲಂಕಾ, 28 ರನ್ ಸಿಡಿಸಿ ದಿನದಾಟ ಅಂತ್ಯ!

  • ಬೆಂಗಳೂರು ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಭಾರತ ಬಿಗಿ ಹಿಡಿತ
  • ಶ್ರೀಲಂಕಾಗೆ 447 ರನ್ ಟಾರ್ಗೆಟ್ ನೀಡಿದ ಟೀಂ ಇಂಡಿಯಾ
  • ಎರಡನೇ ಇನ್ನಿಂಗ್ಸ್‌ನಲ್ಲಿ ಶ್ರೀಲಂಕಾ 28 ರನ್‌ಗೆ 1 ವಿಕೆಟ್ ಪತನ
IND vs SL Test Pink Ball test Srilanka lose 1st wicket during chase 447 runs against Team India in Bengaluru ckm
Author
Bengaluru, First Published Mar 13, 2022, 9:40 PM IST

ಬೆಂಗಳೂರು(ಮಾ.13): ಭಾರತ ಹಾಗೂ ಶ್ರೀಲಂಕಾ ನಡುವಿನ 2ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲೂ ಟೀಂ ಇಂಡಿಯಾ ಭರ್ಜರಿ ಮೇಲುಗೈ ಸಾಧಿಸಿದೆ. ಎರಡನೇ ದಿನದಾಟದಲ್ಲಿ ಬ್ಯಾಟಿಂಗ್‌ನಲ್ಲಿ ದಿಟ್ಟ ಹೋರಾಟ ನೀಡಿದ ಟೀಂ ಇಂಡಿಯಾ ಬೌಲಿಂಗ್‌ನಲ್ಲಿ ಮಿಂಚಿನ ಪ್ರದರ್ಶನ ನೀಡಿದೆ. ಲಂಕಾ ಗೆಲುವಿಗೆ 447 ರನ್ ಟಾರ್ಗೆಟ್ ನೀಡಲಾಗಿತ್ತು. ಈ ಗುರಿ ಬೆನ್ನಟ್ಟಿದ  ಶ್ರೀಲಂಕಾ 2ನೇ ದಿನದಾಟದ ಅಂತ್ಯದಲ್ಲಿ 1 ವಿಕೆಟ್ ನಷ್ಟಕ್ಕೆ 28 ರನ್ ಸಿಡಿಸಿದೆ. ಇನ್ನು 419 ರನ್ ಹಿನ್ನಡೆಯಲ್ಲಿದೆ.

ಎರಡನೇ ದಿನದಾಟ ಅಂತ್ಯದಲ್ಲಿ ಶ್ರೀಲಂಕಾ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ದಾಳಿಗೆ ಲಹೀರು ತಿರಿಮನೆ ವಿಕೆಟ್ ಕೈಚೆಲ್ಲಿದರು. ತಿರಿಮನೆ ಶೂನ್ಯ ಸುತ್ತಿದರು. ಶ್ರೀಲಂಕಾ ತಂಡ ಖಾತೆ ತೆರೆಯುವ ಮೊದಲೇ ಆರಂಭಿಕ ವಿಕೆಟ್ ಕಳೆದುಕೊಂಡಿತು.

ಕುಸಾಲ್ ಮೆಂಡೀಸ್ ಹಾಗೂ ದಿಮುಥ್ ಕರುಣಾರತ್ನೆ ಹೋರಾಟದಿಂದ ಲಂಕಾ ಕೊಂಚ ಚೇತರಿಸಿಕೊಂಡಿತು. ಅಷ್ಟರಲ್ಲೇ ದಿನದಾಟ ಅಂತ್ಯಗೊಂಡಿತು. 2ನೇ ದಿನದಾಟದ ಅಂತ್ಯದಲ್ಲಿ ಶ್ರೀಲಂಕಾ 28 ರನ್ ಸಿಡಿಸಿದೆ.

IND vs SL Test 303 ರನ್ ಸಿಡಿಸಿ ಡಿಕ್ಲೇರ್ ಘೋಷಿಸಿದ ಟೀಂ ಇಂಡಿಯಾ, ಲಂಕಾಗೆ 447 ರನ್ ಟಾರ್ಗೆಟ್!

ಶ್ರೀಲಂಕಾ ಇನ್ನಿಂಗ್ಸ್ ಮೊದಲು ಭಾರತ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 9 ವಿಕೆಟ್ ಕಳೆದುಕೊಂಡು 303 ರನ್ ಸಿಡಿಸಿ ಡಿಕ್ಲೇರ್ ಮಾಡಿಕೊಂಡಿತು. ಮೊದಲ ಇನ್ನಿಂಗ್ಸ್‌ನಲ್ಲಿ ದಿಟ್ಟ ಹೋರಾಟ ನೀಡಿದ ಶ್ರೇಯಸ್ ಅಯ್ಯರ್ ಹಾಗೂ ರಿಷಬ್ ಪಂತ್ ಎರಡನೇ ಇನ್ನಿಂಗ್ಸ್‌ನಲ್ಲೂ ಹೋರಾಟ ನೀಡಿದರು. ಪಂತ್ 50 ರನ್ ಕಾಣಿಕೆ ನೀಡಿದರೆ, ಶ್ರೇಯಸ್ ಅಯ್ಯರ್ 67 ರನ್ ಸಿಡಿಸಿದರು.

ಮಯಾಂಕ್ ಅಗರ್ವಾಲ್ ಮತ್ತೆ ವಿಫಲರಾದರು. ಅಗರ್ವಾಲ್ 22 ರನ್ ಸಿಡಿಸಿ ಔಟಾದರು. ರೋಹಿತ್ ಶರ್ಮಾ 46 ರನ್ ಸಿಡಿಸಿದರು. ಹನುಮಾವಿಹಾರಿ 35  ರನ್ ಸಿಡಿಸಿದರು. ವಿರಾಟ್ ಕೊಹ್ಲಿ ವೈಫಲ್ಯ ಮತ್ತೆ ಮುಂದುವರಿಯಿತು. ಕೊಹ್ಲಿ ಕೇವಲ 13 ರನ್ ಸಿಡಿಸಿ ಔಟಾದರು. ಪಂತ್ ಹಾಗೂ ಶ್ರೇಯಸ್ ಅಯ್ಯರ್ ಹೋರಾಟದಿಂದ ಟೀಂ ಇಂಡಿಯಾ ಮತ್ತೆ ಹಿಡಿತ ಸಾಧಿಸಿತು. ರವೀಂದ್ರ ಜಡೇಜಾ 22 ರನ್ ಸಿಡಿಸಿ ಔಟಾದರು. ಆರ್ ಅಶ್ವಿನ್ 13 ರನ್ ಸಿಡಿಸಿ ಔಟಾದರು. ಈ ಮೂಲಕ ಟೀಂ ಇಂಡಿಯಾ 303 ರನ್ ಸಿಡಿಸಿತ್ತು.

Pink Ball Test: ಬುಮ್ರಾ ಬಿರುಗಾಳಿ, ಲಂಕಾ ಕೇವಲ 109 ರನ್‌ಗಳಿಗೆ ಆಲೌಟ್‌..!

ಮೊದಲ ಇನ್ನಿಂಗ್ಸ್‌ನಲ್ಲಿ ಶ್ರೇಯಸ್ ಅಯ್ಯರ್ 92 ರನ್ ನೆರವಿನಿಂದ ಭಾರತ 252 ರನ್ ಸಿಡಿಸಿ ಆಲೌಟ್ ಆಗಿತ್ತು. ರಿಷಪ್ ಪಂತ್ 39 ರನ್ ಸಿಡಿಸಿ ಔಟಾದರು. ಹನುಮಾ ವಿಹಾರಿ 31 ರನ್ ಸಿಡಿಸಿ ಔಟಾದರು. ಮೊದಲ ಇನ್ನಿಂಗ್ಸ್‌ನಲ್ಲಿ ಕೊಹ್ಲಿ 23 ರನ್ ಸಿಡಿಸಿ ನಿರಾಸೆ ಅನುಭವಿಸಿದ್ದರು. 

ಮೆಂಡಿಸ್‌ 02(07), ಕರುಣರತ್ನೆ  04(13), ತಿರಿಮನ್ನೆ  08(06), ಮ್ಯಾಥ್ಯೂಸ್‌  43(85), ಧನಂಜಯ  10(24), ಅಸಲಂಕ  05(08),ಡಿಕ್‌ವೆಲ್ಲಾ 21, ಲಕ್ಮಾಲ್ 5, ವಿಶ್ವಾ ಫೆರ್ನಾಂಡೋ 8, ಎಂಬಲ್ದೆನಿಯಾ 1 ರನ್ ಸಿಡಿಸಿದರು. ಈ ಮೂಲಕ ಶ್ರೀಲಂಕಾ 109 ರನ್‌ಗೆ ಆಲೌಟ್ ಆಗಿತ್ತು.
 

Follow Us:
Download App:
  • android
  • ios