IND vs SL ಮತ್ತೊಂದು ಶತಕ ಸಿಡಿಸಿದ ವಿರಾಟ್, ಹೊಸ ವರ್ಷದಲ್ಲಿ ಹೊಸ ದಾಖಲೆ!

ಶ್ರೀಲಂಕಾ ವಿರುದ್ಧದ ಅಂತಿಮ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆಕರ್ಷಕ ಸೆಂಚುರಿ ಸಿಡಿಸುವ ಮೂಲಕ ಮತ್ತೊಂದು ದಾಖಲೆ ಬರೆದಿದ್ದಾರೆ. ಗಿಲ್ ಬಳಿಕ ಕೊಹ್ಲಿ ಕೂಡ ಶತಕ ಸಿಡಿಸಿದ್ದು, ಲಂಕಾಗೆ ಬೃಹತ್ ಮೊತ್ತದ ಸವಾಲು ಎದುರಾಗಿದೆ. ಇಷ್ಟೇ ಅಲ್ಲ ತೆಂಡೂಲ್ಕರ್ ದಾಖಲೆ ಪುಡಿಯಾಗಿದೆ. 

IND vs SL Team India batsman virat kohli hit 46th ODI century against Sri lanka in Thiruvananthapuram ckm

ತಿರುವನಂತಪುರಂ(ಜ.15):  ಹೊಸ ವರ್ಷ ಟೀಂ ಇಂಡಿಯಾ ಹಾಗೂ ವಿರಾಟ್ ಕೊಹ್ಲಿ ಪಾಲಿಗೆ ಉತ್ತಮ ವರ್ಷವಾಗಿದೆ. ಟೀಂ ಇಂಡಿಯಾ ಸತತ ಗೆಲುವು ದಾಖಲಿಸುತ್ತಿದ್ದರೆ, ಇತ್ತ ವಿರಾಟ್ ಕೊಹ್ಲಿ ಸೆಂಚುರಿ ಸಾಧನೆ ಮಾಡುತ್ತಿದ್ದಾರೆ. 2023ರ ಆರಂಭಿದಿಂದ ಉತ್ತಮ ಪಾರ್ಮ್‌ನಲ್ಲಿರುವ ವಿರಾಟ್ ಕೊಹ್ಲಿ ಇದೀಗ ಶ್ರೀಲಂಕಾ ವಿರುದ್ದದ 3ನೇ ಹಾಗೂ ಅಂತಿಮ ಪಂದ್ಯದಲ್ಲಿ ಸೆಂಚುರಿ ಸಿಡಿಸಿದ್ದಾರೆ. ಒಂದರ ಮೇಲೊಂದರಂತೆ ಸೆಂಚುರಿ ಸಿಡಿಸುತ್ತಿರುವ ಕೊಹ್ಲಿ, ಏಕದಿನ ವಿಶ್ವಕಪ್ ಟೂರ್ನಿಗೂ ಮೊದಲು ಬಲಿಷ್ಠ ತಂಡಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ. ಈ ಸೆಂಚುರಿ ಮೂಲಕ ವಿರಾಟ್ ಕೊಹ್ಲಿ ಸಚಿನ್ ತೆಂಡೂಲ್ಕರ್ ದಾಖಲೆ ಮುರಿದಿದ್ದಾರೆ. ಸಚಿನ್ ತೆಂಡೂಲ್ಕರ್ ತವರಿನಲ್ಲಿ 20 ಸೆಂಚುರಿ ಸಿಡಿಸಿದ್ದಾರೆ. ಇದೀಗ ಕೊಹ್ಲಿ 21 ಏಕದಿನ ಸೆಂಚುರಿ ಸಿಡಿಸುವ ಮೂಲಕ ತವರಿನ ಶತಕ ದಾಖಲೆ ಮುರಿದಿದ್ದಾರೆ. 

ಶ್ರೀಲಂಕಾ ವಿರುದ್ದದ 3ನೇ ಏಕದಿನ ಪಂದ್ಯದಲ್ಲಿ ಶಭಮನ್ ಗಿಲ್ ಸೆಂಚುರಿ ಬಳಿಕ ಇದೀಗ ವಿರಾಟ್ ಕೊಹ್ಲಿ ಶತಕ ಸಿಡಿಸಿದ್ದಾರೆ. ಈ ಮೂಲಕ ಏಕದಿನದಲ್ಲಿ 46 ನೇ ಶತಕ ದಾಖಲಿಸಿದ್ದಾರೆ. ಶ್ರೀಲಂಕಾ ವಿರುದ್ದದ ಸರಣಿಯಲ್ಲಿ ಇದು ಎರಡನೇ ಸೆಂಚುರಿಯಾಗಿದೆ. ಕಳೆದ ನಾಲ್ಕು ಏಕದಿನ ಪಂದ್ಯದಲ್ಲಿ ಇದು 3ನೇ ಶತಕವಾಗಿದೆ. ಇಷ್ಟೇ ಅಲ್ಲ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೊಹ್ಲಿ 74ನೇ ಸೆಂಚುರಿ ಸಿಡಿಸಿದ ಸಾಧನೆ ಮಾಡಿದ್ದಾರೆ.

IND VS SL ಶುಭಮನ್ ಗಿಲ್, ವಿರಾಟ್ ಕೊಹ್ಲಿ ಆಕರ್ಷಕ ಸೆಂಚುರಿ, ಶ್ರೀಲಂಕಾಗೆ 391 ರನ್ ಗುರಿ!

ಏಕದಿನದಲ್ಲಿ ಸಚಿನ್ ತೆಂಡೂಲ್ಕರ್ 49 ಸೆಂಚುರಿ ಸಿಡಿಸಿದ್ದಾರೆ. ಇದೀಗ ಈ ದಾಖಲೆ ಮುರಿಯಲು ಕೊಹ್ಲಿಗೆ 4 ಸೆಂಚುರಿ ಮಾತ್ರ ಬೇಕಿದೆ. ಏಕದಿನದಲ್ಲಿ ಗರಿಷ್ಠ ರನ್ ಸಿಡಿಸಿದ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ 5ನೇ ಸ್ಥಾನಕ್ಕೇರಿದ್ದಾರೆ. 5ನೇ ಸ್ಥಾನದಲ್ಲಿದ್ದ ಶ್ರೀಲಂಕಾದ ಮಹೇಲಾ ಜಯವರ್ದನೆ ಇದೀಗ 6ನೇ ಸ್ಥಾನಕ್ಕೆ ಕುಸಿದಿದ್ದಾರೆ.

ವಿರಾಟ್ ಕೊಹ್ಲಿ ಈ ಸೆಂಚುರಿ ಮೂಲಕ ಮತ್ತೊಂದು ದಾಖಲೆ ಪುಡಿ ಮಾಡಿದ್ದಾರೆ. ಒಂದು ಎದುರಾಳಿ ತಂಡದ ವಿರುದ್ಧ ಗರಿಷ್ಠ ಶತಕ ಸಿಡಿಸಿದ ಸಾಧನೆ ಇದೀಗ ಕೊಹ್ಲಿ ಪಾಲಾಗಿದೆ. ಸಚಿನ್ ತೆಂಡೂಲ್ಕರ್ ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ ವಿರುದ್ದ 10 ಸೆಂಚುರಿ ಸಿಡಿಸಿದ್ದಾರೆ. ಇದೀಗ ಕೊಹ್ಲಿ 11 ಸೆಂಚುರಿ ಸಿಡಿಸಿ ಹೊಸ ದಾಖಲೆ ಬರೆದಿದ್ದಾರೆ. ಶ್ರೀಲಂಕಾ ವಿರುದ್ಧ ವಿರಾಟ್ ಕೊಹ್ಲಿ 60 ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಇಷ್ಟೇ ಅಲ್ಲ 11 ಅರ್ಧಶತಕವೂ ಸಿಡಿಸಿದ್ದಾರೆ.  ಲಂಕಾ ವಿರುದ್ದದ 41 ಇನ್ನಿಂಗ್ಸ್‌ನಲ್ಲಿ ಸಚಿನ್ ಈ ಸಾಧನೆ ಮಾಡಿದ್ದಾರೆ. 

2016ರಲ್ಲೇ ಧೋನಿಯಿಂದ ನಾಯಕತ್ವ ಕಿತ್ತುಕೊಳ್ಳಲು ಬಯಸಿದ್ರು ವಿರಾಟ್ ಕೊಹ್ಲಿ..!

85 ಎಸೆತದಲ್ಲಿ ಸೆಂಚುರಿ ಪೂರೈಸಿದ ವಿರಾಟ್ ಕೊಹ್ಲಿ ಬಳಿಕ ಮತ್ತಷ್ಟು ಆಕ್ರಮಣಕಾರಿ ಆಟಕ್ಕೆ ಮುಂದಾದರು. ಎಂ.ಎಸ್.ಧೋನಿ ರೀತಿ ಹೆಲಿಕಾಪ್ಟರ್ ಶಾಟ್ ಮೂಲಕ ಸಿಕ್ಸರ್ ಬಾರಿಸಿ ಅಭಿಮಾನಿಗಳ ರಂಜಿಸಿದರು. ವಿರಾಟ್ ಕೊಹ್ಲಿ 110 ಎಸೆತದಲ್ಲಿ ಅಜೇಯ 166 ರನ್ ಸಿಡಿಸಿದ್ದಾರೆ. 13 ಬೌಂಡರಿ ಹಾಗೂ 8 ಸಿಕ್ಸರ್ ಒಳಗೊಂಡಿದೆ. ಕೊಹ್ಲಿ ಅಜೇಯ ಹೋರಾದಿಂದ ಇದೀಗ ಏಕದಿನದಲ್ಲಿ ಕೊಹ್ಲಿ ಒಟ್ಟು 12754 ರನ್ ಸಿಡಿಸಿದ್ದಾರೆ. 

Latest Videos
Follow Us:
Download App:
  • android
  • ios