Asianet Suvarna News Asianet Suvarna News

Ind vs SA Test Series: ಕೋವಿಡ್ ಬಂದರೂ ಭಾರತ-ದಕ್ಷಿಣ ಆಫ್ರಿಕಾ ಸರಣಿ ಮುಂದುವರಿಕೆ..!

* ಭಾರತ-ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿ ಡಿಸೆಂಬರ್ 26ರಿಂದ ಆರಂಭ

*ಕೋವಿಡ್ ಭೀತಿಯ ನಡುವೆಯೇ ದಕ್ಷಿಣ ಆಫ್ರಿಕಾಗೆ ಬಂದಿಳಿದ ಟೀಂ ಇಂಡಿಯಾ

* ಒಂದು ವೇಳೆ ಕೋವಿಡ್ ಪತ್ತೆಯಾದರೂ ಸೂಕ್ತ ಮುನ್ನೆಚ್ಚರಿಕಾ ಕ್ರಮದಿಂದ ಸರಣಿ ಮುಂದೂಡಿಕೆ

Ind vs SA Test Series Positive COVID cases Players will be isolated but Matches Will Continue Says CSA Medical Officer kvn
Author
Bengaluru, First Published Dec 23, 2021, 8:59 AM IST

ನವದೆಹಲಿ(ಡಿ.23): ಇದೇ ಡಿಸೆಂಬರ್ 26ರಿಂದ ಆರಂಭವಾಗುವ ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ನಡುವಿನ ಟೆಸ್ಟ್‌ ಹಾಗೂ ಏಕದಿನ ಸರಣಿ ನಡುವೆ ಆಟಗಾರರು, ಸಹಾಯಕ ಸಿಬ್ಬಂದಿಯಲ್ಲಿ ಕೋವಿಡ್‌ (Covid 19) ದೃಢಪಟ್ಟರೂ ನಿಗದಿಯಂತೆ ಸರಣಿ ಮುಂದುವರಿಸಲು ಉಭಯ ಕ್ರಿಕೆಟ್‌ ಮಂಡಳಿಗಳು ಒಪ್ಪಿಗೆ ಸೂಚಿಸಿವೆ. ‘ಎಲ್ಲಾ ಆಟಗಾರರು ಬಯೋಬಬಲ್‌ನಲ್ಲಿದ್ದಾರೆ. ಯಾರಿಗಾದರೂ ಸೋಂಕು ದೃಢಪಟ್ಟರೆ ಅವರು ವಾಸವಿರುವ ಹೋಟೆಲ್‌ನಲ್ಲಿ ಐಸೋಲೇಷನ್‌ ಮಾಡಲಾಗುತ್ತದೆ. ಆದರೆ ಅವರ ಸಂಪರ್ಕಕ್ಕೆ ಬಂದವರಿಗೆ ಆಡಲು ಅವಕಾಶ ಮಾಡಿಕೊಡಲಾಗುತ್ತದೆ’ ಎಂದು ಕ್ರಿಕೆಟ್‌ ದಕ್ಷಿಣ ಆಫ್ರಿಕಾ(ಸಿಎಸ್‌ಎ)ದ ವೈದ್ಯಾಧಿಕಾರಿ ಶುಹೈಬ್‌ ಮಂಜ್ರಾ ತಿಳಿಸಿದ್ದಾರೆ.

ಸಮಸ್ಯೆಯಾದರೆ ಸುರಕ್ಷಿತವಾಗಿ ತವರಿಗೆ: ಕೋವಿಡ್‌ ಪರಿಸ್ಥಿತಿ ಕೈ ಮೀರಿದರೆ ಟೀಂ ಇಂಡಿಯಾವನ್ನು (Team India)) ಸುರಕ್ಷಿತವಾಗಿ ಭಾರತಕ್ಕೆ ವಾಪಸ್‌ ಕಳುಹಿಸುತ್ತೇವೆ ಎಂದು ಸಿಎಸ್‌ಎ ಭರವಸೆ ನೀಡಿದೆ. ಯಾವುದೇ ಸಮಸ್ಯೆಯಾದರೆ ಅಥವಾ ಯಾವುದೇ ಕಾರಣಗಳಿಗಾಗಿ ಟೀಂ ಇಂಡಿಯಾ ಪ್ರವಾಸ ರದ್ದುಗೊಳಿಸಲು ಉದ್ದೇಶಿಸಿದರೆ ಗಡಿ ನಿರ್ಬಂಧ ಇದ್ದರೂ ಆಟಗಾರರನ್ನು ವಾಪಸ್‌ ಕಳುಹಿಸುವ ಬಗ್ಗೆ ಸರ್ಕಾರ ಭರವಸೆ ನೀಡಿದೆ’ ಎಂದಿದೆ.

ಖಾಲಿ ಸ್ಟೇಡಿಯಂನಲ್ಲಿ ನಡೆಯಲಿದೆ ಪಂದ್ಯಾವಳಿಗಳು: ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ಮೂರು ಪಂದ್ಯಗಳ ಟೆಸ್ಟ್ ಸರಣಿಗೆ ಕೋವಿಡ್ 19 ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ಪಂದ್ಯಾವಳಿಗಳನ್ನು ಖಾಲಿ ಸ್ಟೇಡಿಯಂನಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಆಟಗಾರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರಕ್ಕೆ ಬಂದಿರುವುದಾಗಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ (Cricket South Africa) ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವು ಡಿಸೆಂಬರ್ 26ರಂದು ಸೆಂಚುರಿಯನ್‌ನ ಸೂಪರ್‌ ಸ್ಪೋರ್ಟ್‌ ಪಾರ್ಕ್‌ನಲ್ಲಿ ಆರಂಭವಾಗಲಿದೆ. 

Ind vs SA Test Series: ಜಸ್ಪ್ರೀತ್ ಬುಮ್ರಾ ಪರ ಬ್ಯಾಟ್ ಬೀಸಿದ ಜಹೀರ್ ಖಾನ್

1992ರಿಂದ 2019ರ ಅವಧಿಯಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡವು ಇದುವರೆಗೂ ಒಟ್ಟು 39 ಪಂದ್ಯಗಳನ್ನಾಡಿದ್ದು, ಭಾರತ 14 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ದಕ್ಷಿಣ ಆಫ್ರಿಕಾ 15 ಪಂದ್ಯಗಳಲ್ಲಿ ಗೆಲುವಿನ ರುಚಿ ಕಂಡಿದೆ. ಇನ್ನು 10 ಪಂದ್ಯಗಳು ಡ್ರಾನಲ್ಲಿ ಅಂತ್ಯವಾಗಿದ್ದವು. ಇನ್ನು ಭಾರತ ತಂಡವು ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಒಟ್ಟು 20 ಪಂದ್ಯಗಳನ್ನಾಡಿದ್ದು, ಭಾರತ ಕೇವಲ 3 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದರೆ, ದಕ್ಷಿಣ ಆಫ್ರಿಕಾ ತಂಡವು 10 ಪಂದ್ಯಗಳನ್ನು ಗೆದ್ದು ಬೀಗಿದೆ. ಇನ್ನು ಏಳು ಪಂದ್ಯಗಳ ಡ್ರಾನಲ್ಲಿ ಅಂತ್ಯವಾಗಿದೆ. ಭಾರತ ತಂಡವು ಇದುವರೆಗೂ ದಕ್ಷಿಣ ಆಫ್ರಿಕಾ ನೆಲದಲ್ಲಿ ಟೆಸ್ಟ್ ಸರಣಿಯನ್ನು ಜಯಿಸಿಲ್ಲ. ಹೀಗಾಗಿ ಈ ಬಾರಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಹರಿಣಗಳ ನಾಡಿನಲ್ಲಿ ಟೆಸ್ಟ್ ಸರಣಿಯನ್ನು ಜಯಿಸುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

ವಿಜಯ್‌ ಹಜಾರೆ ಟ್ರೋಫಿ: ಸೌರಾಷ್ಟ್ರ, ಸರ್ವಿಸಸ್‌ ಸೆಮೀಸ್‌ಗೆ ಲಗ್ಗೆ

ಜೈಪುರ: ವಿಜಯ್‌ ಹಜಾರೆ ಏಕದಿನ ಟೂರ್ನಿಯಲ್ಲಿ (Vijay Hazare Trophy) ಸೌರಾಷ್ಟ್ರ ಹಾಗೂ ಸರ್ವಿಸಸ್‌ ಸೆಮಿಫೈನಲ್‌ ಪ್ರವೇಶಿಸಿವೆ. ಬುಧವಾರ ನಡೆದ ಕ್ವಾರ್ಟರ್‌ ಫೈನಲ್‌ನಲ್ಲಿ ವಿದರ್ಭ ವಿರುದ್ಧ ಸೌರಾಷ್ಟ್ರ 7 ವಿಕೆಟ್‌ಗಳಿಂದ ಗೆದ್ದಿತು. ವಿದರ್ಭ ಮೊದಲು ಬ್ಯಾಟ್‌ ಮಾಡಿ 150 ರನ್‌ಗೆ ಆಲೌಟಾಯಿತು. ಸೌರಾಷ್ಟ್ರ 29.5 ಓವರ್‌ಗಳಲ್ಲಿ ಗೆಲುವು ಸಾಧಿಸಿತು. 

ಮತ್ತೊಂದು ಕ್ವಾರ್ಟರ್‌ನಲ್ಲಿ ಕೇರಳ ವಿರುದ್ಧ ಸರ್ವಿಸಸ್‌ 7 ವಿಕೆಟ್‌ ಜಯ ಸಾಧಿಸಿತು. ಕೇರಳ 40.4 ಓವರ್‌ಗಳಲ್ಲಿ 175 ರನ್‌ಗೆ ಆಲೌಟಾದರೆ, ಸರ್ವಿಸಸ್‌ 30.5 ಓವರ್‌ಗಳಲ್ಲಿ ಗುರಿ ತಲುಪಿತು. ಶುಕ್ರವಾರ ಸೆಮಿಫೈನಲ್‌ನಲ್ಲಿ ಸರ್ವಿಸಸ್‌‌- ಹಿಮಾಚಲ ಪ್ರದೇಶ, ತಮಿಳುನಾಡು-ಸೌರಾಷ್ಟ್ರ ಮುಖಾಮುಖಿಯಾಗಲಿವೆ.

Follow Us:
Download App:
  • android
  • ios