Asianet Suvarna News Asianet Suvarna News

Ind vs SA: ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ, ಕೆ.ಎಲ್. ರಾಹುಲ್ ಟೀಂ ಇಂಡಿಯಾ ನಾಯಕ..!

* 2ನೇ ಟೆಸ್ಟ್‌ನಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ

* ಎರಡನೇ ಟೆಸ್ಟ್ ಪಂದ್ಯದಿಂದ ಹೊರಬಿದ್ದ ವಿರಾಟ್ ಕೊಹ್ಲಿ

* ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದಲ್ಲಿ 2 ಬದಲಾವಣೆ

Ind vs SA Team India Won the toss and Elected to bat First against South Africa in Johannesburg kvn
Author
Bengaluru, First Published Jan 3, 2022, 1:14 PM IST
  • Facebook
  • Twitter
  • Whatsapp

ಜೋಹಾನ್ಸ್‌ಬರ್ಗ್‌(ಜ.03): ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ತಂಡಗಳ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ (Team India) ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದೆ. ವಿರಾಟ್ ಕೊಹ್ಲಿ (Virat Kohli) ಅನುಪಸ್ಥಿತಿಯಲ್ಲಿ ಕೆ.ಎಲ್‌. ರಾಹುಲ್‌ (KL Rahul) ತಂಡವನ್ನು ಮುನ್ನಡೆಸಲಿದ್ದಾರೆ. 2021-22ನೇ ಸಾಲಿನ ಮೂರು ಪಂದ್ಯಗಳ ಫ್ರೀಡಂ ಟ್ರೋಫಿ ಟೆಸ್ಟ್ ಸರಣಿಯಲ್ಲಿ (Freedom Trophy) ಈಗಾಗಲೇ ಟೀಂ ಇಂಡಿಯಾ ಮೊದಲ ಟೆಸ್ಟ್ ಪಂದ್ಯವನ್ನು ಜಯಿಸುವ ಮೂಲಕ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದೆ.

ಇಲ್ಲಿನ ವಾಂಡರರ್ಸ್‌ ಸ್ಟೇಡಿಯಂನಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯವು ಭಾರತದ ಪಾಲಿಗೆ ಸಾಕಷ್ಟು ಮಹತ್ವದ್ದಾಗಿದೆ. ಎರಡನೇ ಟೆಸ್ಟ್ ಪಂದ್ಯದಿಂದ ಗಾಯದ ಸಮಸ್ಯೆಯಿಂದಾಗಿ ವಿರಾಟ್ ಕೊಹ್ಲಿ ತಂಡದಿಂದ ಹೊರಬಿದ್ದಿದ್ದು, ಇದೇ ಮೊದಲ ಬಾರಿಗೆ ಕೆ.ಎಲ್‌. ರಾಹುಲ್ ಭಾರತ ಟೆಸ್ಟ್ ತಂಡವನ್ನು ನಾಯಕರಾಗಿ ಮುನ್ನಡೆಸಲಿದ್ದಾರೆ. ವಿರಾಟ್ ಕೊಹ್ಲಿ ತಂಡದಿಂದ ಹೊರಗುಳಿದಿದ್ದರಿಂದ ಹನುಮ ವಿಹಾರಿ (Hanuma Vihari) ತಂಡ ಕೂಡಿಕೊಂಡಿದ್ದಾರೆ. ಇನ್ನುಳಿದಂತೆ ಟೀಂ ಇಂಡಿಯಾದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಮೊಹಮ್ಮದ್ ಅಜರುದ್ದೀನ್ (Mohammad Azharuddin) ಬಳಿಕ ಸೀಮಿತ ಓವರ್‌ಗಳ ಕ್ರಿಕೆಟ್ ನಾಯಕರಾಗುವ ಮುನ್ನ ಟೆಸ್ಟ್ ತಂಡದ ನಾಯಕರಾದ ಭಾರತದ ಎರಡನೇ ಆಟಗಾರ ಎನ್ನುವ ಗೌರವಕ್ಕೆ ಕೆ.ಎಲ್‌. ರಾಹುಲ್ ಪಾತ್ರರಾಗಿದ್ದಾರೆ. 

ಇನ್ನು ದಕ್ಷಿಣ ಆಫ್ರಿಕಾ ತಂಡದಲ್ಲಿ ಸಹಜವಾಗಿ ಕ್ವಿಂಟನ್‌ ಡಿ ಕಾಕ್ (Quinton de Kock) ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರಿಂದ ಕೈಲ್ ವೇರಿಯನ್ನೇ ವಿಕೆಟ್‌ ಕೀಪರ್ ಆಗಿ ತಂಡ ಕೂಡಿಕೊಂಡಿದ್ದಾರೆ. ಇನ್ನು ಮುಲ್ಡರ್ ಬದಲಿಗೆ ಓಲಿವರ್ ಹರಿಣಗಳ ತಂಡ ಕೂಡಿಕೊಂಡಿದ್ದಾರೆ.

Ind vs SA: ಹರಿಣಗಳೆದುರು ಐತಿಹಾಸಿಕ ಟೆಸ್ಟ್‌ ಸರಣಿ ಗೆಲ್ಲಲು ರೆಡಿಯಾದ ಟೀಂ ಇಂಡಿಯಾ

ವಾಂಡರರ್ಸ್‌ ಸ್ಟೇಡಿಯಂ ಭಾರತೀಯರ ಪಾಲಿಗೆ ಅದೃಷ್ಟದ ಕಣ: ಹೌದು, ಈಗಾಗಲೇ ಸೆಂಚೂರಿಯನ್ ಟೆಸ್ಟ್ ಪಂದ್ಯವನ್ನು ಜಯಿಸಿ ಆತ್ಮವಿಶ್ವಾಸದಿಂದ ಬೀಗುತ್ತಿರುವ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ, ಇದೀಗ ದಕ್ಷಿಣ ಆಫ್ರಿಕಾ ನೆಲದಲ್ಲಿ ಟೆಸ್ಟ್ ಸರಣಿ ಗೆಲ್ಲುವ ಕನಸು ಕಾಣುತ್ತಿದೆ. 1992ರಿಂದ ಇಲ್ಲಿಯವರೆಗೂ ಭಾರತ ತಂಡವು ದಕ್ಷಿಣ ಆಫ್ರಿಕಾ ಪ್ರವಾಸ ಮಾಡಿದೆಯಾದರೂ ಟೆಸ್ಟ್ ಸರಣಿ ಗೆಲ್ಲಲು ಯಶಸ್ವಿಯಾಗಿಲ್ಲ. ಆದರೆ ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್‌ ಸ್ಟೇಡಿಯಂ ಟೀಂ ಇಂಡಿಯಾ ಪಾಲಿಗೆ ಲಕ್ಕಿ ಸ್ಟೇಡಿಯಂ ಎನಿಸಿದೆ. ಈ ಮೈದಾನದಲ್ಲಿ ಭಾರತ ಕ್ರಿಕೆಟ್ ತಂಡವು 5 ಟೆಸ್ಟ್ ಪಂದ್ಯಗಳನ್ನಾಡಿ 3 ಡ್ರಾ ಹಾಗೂ 2 ಗೆಲುವುಗಳನ್ನು ಸಾಧಿಸಿದ್ದು, ಒಮ್ಮೆಯೂ ಸೋಲು ಕಂಡಿಲ್ಲ. ಹೀಗಾಗಿ ಟೀಂ ಇಂಡಿಯಾ ಈ ಟೆಸ್ಟ್‌ ಗೆದ್ದು, ಇನ್ನೊಂದು ಪಂದ್ಯ ಬಾಕಿ ಇರುವಾಗಲೇ ಟೆಸ್ಟ್ ಸರಣಿ ಕೈವಶ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿದೆ. 

ತಂಡಗಳು ಹೀಗಿವೆ ನೋಡಿ:

ಭಾರತ:

ಕೆ.ಎಲ್ ರಾಹುಲ್‌(ನಾಯಕ), ಮಯಾಂಕ್ ಅಗರ್‌ವಾಲ್‌, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ರಿಷಭ್ ಪಂತ್‌, ಹನುಮ ವಿಹಾರಿ, ರವಿಚಂದ್ರನ್‌ ಅಶ್ವಿನ್‌, ಶಾರ್ದೂಲ್‌ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್‌

ದಕ್ಷಿಣ ಆಫ್ರಿಕಾ:

ಡೀನ್‌ ಎಲ್ಗರ್‌(ನಾಯಕ), ಏಯ್ಡನ್‌ ಮಾರ್ಕ್ರಮ್‌, ಕೀಗನ್ ಪೀಟರ್‌ಸನ್‌, ರಾಸ್ಸಿ ವ್ಯಾನ್ ಡರ್ ಡುಸೇನ್, ತೆಂಬಾ ಬವುಮಾ, ಕೈಲ್ ವೇರಿಯನ್ನೆ(ವಿಕೆಟ್ ಕೀಪರ್), ಡಯನ್ನೆ ಓಲಿವರ್, ಕೇಶವ್ ಮಹಾರಾಜ್‌, ಕಗಿಸೋ ರಬಾಡ, ಲುಂಗಿ ಎನ್‌ಗಿಡಿ, ಮಾರ್ಕೊ ಜಾನ್ಸನ್‌.

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌

Follow Us:
Download App:
  • android
  • ios